ಕೇವಲ ಫೋಟೊ ಹಾಕಲು ಪತ್ರಕರ್ತರು ಇದ್ದಾರಾ?-ಈಶ್ವರಪ್ಪ

ಸುದ್ದಿಲೈವ್.ಕಾಂ/ಶಿವಮೊಗ್ಗ
ಯಾರು ದಾರಿ ತಪ್ಪುತ್ತಿದ್ದಾರೆ ಅವರನ್ನ ತಿದ್ದುವ ಕಲಸ ಪತ್ರಕರ್ತರಿಂದ ನಡೆಯಬೇಕೆಂದು ಸಚಿವ ಈಶ್ವರಪ್ಪ ಕಿವಿ ಮಾತೇಳಿದರು.
ಅವರು ಕಾರ್ಯನಿರತ ಪತ್ರಕರ್ತ ಸಂಘದ 222-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸೈಟ್ ವಿಚಾರದಲ್ಲಿ ಪತ್ರಕರ್ತರಿಗೆ ಏನೇನು ಅನುಕೂಲವಾಗಿ ಮಾಡಿಕೊಡಲು ಸಾಧ್ಯವೋ ಅದನ್ನ ನನ್ನ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಈಶ್ವರಪ್ಪ ತಿಳಿಸಿದರು.
ತುರ್ತುಪರಿಸ್ಥಿಯಲ್ಲಿ ಪತ್ರಿಕಾಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಉಂಟಾದಾಗ ಪತ್ರಕರ್ತಯವ ಹೋರಾಟ ಮೆಚ್ಚುಕೊಳ್ಳುವಂತದ್ದು ಆಗಿನ ಪತ್ರಕರ್ತರದ ಧೈರ್ಯಈಗಿನ ಪತ್ರಕರ್ತರಿಗೆ ಯಾಕೆ ಇಪ್ಲ ಎಂದು ಪ್ರಶ್ನಿಸಿದರು.
ಸರ್ಕಾರ ಯಾವುದೇ ತಪ್ಪು ಮಾಡಿದಾಗ ನಿರ್ಭೀತಿಯಾಗಿ ಪತ್ರಕರ್ತರು ಮಾತನಾಡಬೇಕು. ವೈಯಕ್ತಿಕ ಇತಾಸಕ್ತಿ ಬದಿಗಿಟ್ಟು ಸಮಾಜದ ಸೇವೆ ಮಾಡಬೇಕು. ಸರ್ಕಾರ ತಿದ್ದಿಕೊಳ್ಳದೇ ಇದ್ದರೆ ಪ್ರತಿಭಟನೆ ಮೂಲಕ ಎಚ್ಚರಿಸಬೇಕು ಎಂದು ಈಶ್ವರಪ್ಪ ಕಳಕಳಿ ವ್ಯಕ್ತಪಡಿಸಿದರು.
ಅಗ್ನಿಪಥ್ ವಿಚಾರದಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಧ್ವನಿ ಎತ್ತಿ ಮಾತನಾಡಿದ ಈಶ್ವರಪ್ಪ, ಹೋರಾಟದ ಮಜಲುಗಳು ಬದಲಾಗಿದೆ. ಈ ಬದಲಾವಣೆ ಅಪಾಯಕಾರಿಯಾಗಿದೆ. ಗಾಂಧಿ ಮಾರ್ಗವನ್ನ ನೆನಪಿಸಿಕೊಂಡ ಈಶ್ವರಪ್ಪ ಗಾಂಧಿ ಮಾರ್ಗದಿಂದ ಸರ್ಕಾರವನ್ನ ಬದಲಿಸಬಹುದು ಆದರೆ ಧಗ ಧಗ ರೈಲುಗಳನ್ನ ಹೊತ್ತುಉರಿಸುವ ಕಾರ್ಯ ಎಷ್ಟರ ಮಟ್ಟಿಗೆ ಸರಿ ಎಂದು ಗುಡುಗಿದರು.
ಯಾರನ್ನೋ ತೃಪ್ತಿಪಡಿಸುವ ಇಚ್ಚಾಸಕ್ತಿ ಇರುವುದರಿಂದ ದೇಶದಲ್ಲಿ ಅತೃಪ್ತಿ ಎದ್ದುಕಾಣುತ್ತಿದೆ. ಅಗ್ನಿಪಥ್ ಹೋರಾಟದಲ್ಲಿ ಫೊಟೋ ಹಾಕಲು ಮಾತ್ರ ಪತ್ರಕರ್ತರಿದ್ದೀರಾ? ಸೈಧ್ಧಾಂತಿಕವಾಗಿ ನಿಲ್ಲಿ. ಪಠ್ಯ ಪುಸ್ತಕ ವಿಚಾರದಲ್ಲಿ ನಡೆಯುತ್ತಿರುವ ಹೋರಾಟವನ್ನ ಸ್ವಾಗತಿಸುವೆ. ಆದರೆ ಹಿಂದಿನ ಪಠ್ಯ ಪುಸ್ತಕ ವಿಚಾರವನ್ನ ಒಪ್ಪದಿದ್ದರೂ ಜನ ಬೆಂಕಿ ಹಚ್ಚಲಿಲ್ಲ ಎಂದರು.
