ಮಸೀದಿಯ ಜಮೀನಿನ ವಿಚಾರದಲ್ಲಿ ಎರಡು ಪಂಗಡಗಳ ನಡುವೆ ಮಾರಾಮಾರಿ-ದೂರು ಪ್ರತಿದೂರು ದಾಖಲು

ಸುದ್ದಿಲೈವ್. ಕಾಂ/ಭದ್ರಾವತಿ
ತಾಲೂಕಿನ ಕಾಗೇಕೋಡಮಗ್ಗಿಯಲ್ಲಿರುವ ಜಾಮೀಯಾ ಮಸೀದಿಯ ಆಸ್ತಿ ಮತ್ತು ನಮಾಜ್ ವಿಚಾರದಲ್ಲಿ ತಬ್ಲಿಕ್ ಮತ್ತು ಸುನ್ನಿ ಪಂಗಡಗಳ ನಡುವೆ ಜಗಳವಿದ್ದು ಜಮೀನಿನ ಗುತ್ತಿಗೆ ಮುಂದುವರೆಸುವ ವಿಚಾರದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದ್ದು ಎರಡೂ ಕಡೆಯಿಂದ ದೂರು ಪ್ರತಿದೂರು ದಾಖಲಾಗಿದೆ.
ಕಾಗೆ ಕೋಡಮಗ್ಗಿಯ ಮಸೀದಿಯಲ್ಲಿ ನಮಾಜ್ ಮಾಡುವಾಗ ಅಬ್ದುಲ್ ಸಲೀಂ ಎಂಬುವರು ಮಸೀದಿಯ ಮೌಲ್ವಿಗಳಾದ ಫಜಲ್ ಸಾಬ್ ಬಳಿ ಮಸೀದಿಗೆ ಸಂಬಂಧಿಸಿದಂತೆ ಕಮಿಟಿ ರಚನೆ ಆಗುವವರೆಗೂ ಮಸೀದಿಗೆ ಸೇರಿದ 5 ಎಕರೆ ಜಮೀನನ್ನು ಯಾರಿಗೂ ಗುತ್ತಿಗೆ ಅಥವಾ ಹರಾಜು ಮಾಡುವುದು ಬೇಡ ಮಸೀದಿಯ ಕಮಿಟಿ ರಚನೆ ಆದ ನಂತರದಲ್ಲಿ ತೀರ್ಮಾನ ಮಾಡೋಣವೆಂದು ಮೈಕ್ ನಲ್ಲಿ ಪ್ರಚಾರ ಮಾಡಿ ಅಂತಾ ತಿಳಿಸಿರುತ್ತಾರೆ.
ನಮಾಜ್ ಮುಗಿದ ನಂತರ ಸಲೀಂ ಮತ್ತು ಆತನ ಕಡೆಯವರು ಮಸೀದಿ ಹಾಲಿನಲ್ಲಿರುವಾಗ ತಬ್ಲಿಕ್ ಜನಾಂಗದ ಸೈಯ್ಯದ್ ಆಸೀಪ್ ಎಂಬುವರು ಮೌಲ್ವಿಯರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು, ಜಮೀನಿನ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ನಿಮಗೆ ಅಧಿಕಾರವಿಲ್ಲ. ಜಮೀನನ್ನ ಯಾರಿಗೂ ಗುತ್ತಿಗೆ ಕೊಡಬಾರದು 5 ಎಕರೆ ಜಮೀನನ್ನ ತೋಟವನ್ನಾಗಿ ಮಾಡುವಂತೆ ಆಗ್ರಹಿಸಿದ್ದಾರೆ ಎಂದು ಸಲೀಂ ಆರೋಪಿಸಿದ್ದಾರೆ.
1) ಸೈಯದ್ ಆಸೀಪ್, 2) ಅಕ್ರಮ್, 3) ಸೈಯದ್ ಗೌಸ್, 4) ಸೈಯದ್ ರಫೀಕ್, 5) ಮೊಹಮ್ಮದ್ ರಫೀಕ್, 6) ರೋಷನ್, 7) ಸೈಯದ್ ಇನಾಯತ್, 8) ಅಜೀಜ್ ಬೇಗ್, 9) ಸೈಯದ್ ಮುಸ್ತಾಕ್ ಇವರೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಕೈಯಲಿ ಮಾರಕಾಸ್ತ್ರಗಳಾದ ಚಾಕು, ಕಬ್ಬಿಣದ ರಾಡು, ದೋಣಿಗಳನ್ನು ಹಿಡಿದುಕೊಂಡು ನಮ್ಮ ಸುನ್ನಿ ಪಂಗಡದ ಶೇಖ್ ದಸ್ತಗೀರ್ ರವರಿಗೆ ಮತ್ತು ನಮಗೆಲರಿಗೂ ಕೈಗಳಿಂದ ಮತ್ತು ಮಾರಕಾಸ್ತ್ರಗಳಿಂದ ತಲೆಗೆ, ಮೈ ಕೈ-ಗೆ, ಬೆನ್ನಿಗೆ, ಹೊಟ್ಟೆಯ ಹತ್ತಿರ ಮಾರಣಾಂತಿಕವಾಗಿ ಹಲೆ ಮಾಡಿ ರಕ್ತ ಗಾಯಪಡಿಸಿದ್ದಾರೆ ಎಂದು ಸಲೀಂ ದೂರಿನಲ್ಲಿ ಆರೋಪಿಸಿದ್ದಾರೆ.
ಅದರಂತೆ ಮೆಕಾನಿಕ್ ಕೆಲಸ ಮಾಡಿಕೊಂಡಿರುವ ಮೊಹ್ಮದ್ ವಾಸಿಮ್ ಈ ಘಟನೆಯ ವಿರುದ್ಧ ಪ್ರತಿದೂರು ಸಲ್ಲಿಸಿದ್ದಾರೆ. ಮಸೀದಿಯ ಮೌಲ್ವಿಗಳಾದ ಫಜುಲ್ ಸಾಬ್ ರವರು ಪ್ರಸ್ತುತ ಮಸೀದಿಯ ಜಮೀನಿನನ್ನ ಗುತ್ತಿಗೆ ಪಡೆದ ಅಜೀಜ್ ರನ್ನ ಬಿಡಿಸಿ ಬೇರೆಯವರಿಗೆ ನೀಡೋಣವೆಂದು ಹೇಳಿರುತ್ತಾರೆ.
ಆದರೆ ಅಲ್ಲೇ ಇದ್ದ ಅಜೀಜ್ ಸಾಬ್ ಮತ್ತು ಖಲೀಲ್ ಸಾಬ್ ರವರು ಅಜೀಜ್ ಅವರ ಗುತ್ತಿಗೆ ಎರಡು ವರ್ಷದ ಅವಧಿ ಇದ್ದು ಈಗ 1 ವರ್ಷ ಅವಧಿ ಮುಗಿದಿದ್ದು ಇನ್ನೂ 1 ವರ್ಷ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ. ನಮಾಜ್ ನಂತರ ಮಸೀದಿಯ ಹಾಲ್ ನಲ್ಲಿದ್ದಾಗ ಅಕ್ಮ್ ಮತ್ತು ವಾಸಿಮ್ ಗೆ ಹೊಡೆಯಲು ಅಕ್ರಮಕೂಟ ಕಟ್ಟಿಕೊಂಡು ಬಂದ ಸಲೀಂ, ಶಾಮೀರ್ @ ಆಟೋ ತಾಮೀ, ಶಾಮೀರ್ @ ಕೋಳಿ ರಾಮೀ, ಆಬೀದ್ ಮತ್ತು ದಸ್ತಗೀರ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದಾಗಿ ವಸೀಂ ಎಫ್ಐಆರ್ ನಲ್ಲಿ ಅರೊಪಿಸಿದ್ದಾರೆ.
ವಸೀಮ್ ಮತ್ತು ಸಲೀಂ ಇಬ್ವರೂ ಆಸ್ಪತ್ರೆಗೆ ದಾಖಲಾಗಿದ್ದು ನಂತರ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿದ್ದಾರೆ.
