ರಂಗಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿಲೈವ್. ಕಾಂ/ಶಿವಮೊಗ್ಗ
ಕರ್ನಾಟದ ಸ್ವಾಯತ್ತ ಸಂಸ್ಥೆಯಾದ ರಂಗಾಯಣ ನಡೆಸುತ್ತಿರುವ ಭಾರತೀಯ ರಂಗಶಿಕ್ಷಣ ಕೇಂದ್ರ-ರಂಗಶಾಲೆಯ 2022-23 ನೇ ಸಾಲಿನ ಒಂದು ವರ್ಷದ ರಂಗಶಿಕ್ಷಣದಲ್ಲಿ ಡಿಪ್ಲೊಮಾ ಕೋರ್ಸ್ಗಾಗಿ ಇಬ್ಬರು ರಂಗಶಿಕ್ಷಕರ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ತಾತ್ಕಾಲಿಕ ಹುದ್ದೆಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ರಂಗಭೂಮಿಯಲ್ಲಿ ಅನುಭವವಿರುವ ಅಭ್ಯರ್ಥಿಗಳಾಗಿದ್ದು, ರಾಷ್ಟ್ರೀಯ ನಾಟಕ ಶಾಲೆಯ ಪದವಿ/ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪದವಿ/ಡಿಪ್ಲೊಮಾ ಪಡೆದವರಾಗಿರಬೇಕು.
ರಂಗಭೂಮಿ ಅನುಭವ, ರಂಗಶಿಕ್ಷಣದಲ್ಲಿ ಶಿಕ್ಷಕರಾಗಿ ದುಡಿದ ಅನುಭವ ಅಪೇಕ್ಷಣೀಯ. ಅರ್ಹತೆಯುಳ್ಳ ಆಸಕ್ರು ಜುಲೈ 08 ರೊಳಗೆ ತಲುಪುವಂತೆ ಉಪನಿರ್ದೇಶಕರು, ರಂಗಾಯಣ, ವಿನೋಬನಗರ ರಸ್ತೆ, ಮೈಸೂರು-05 ಈ ವಿಳಾಸಕ್ಕೆ ಅರ್ಜಿ ಸಲ್ಲಿಸುವುದು.
ಅರ್ಜಿ ನಮೂನೆಯನ್ನು ರಂಗಾಯಣದ ವೆಬ್ಸೈಟ್ www.rangayana.org ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಜುಲೈ 13 ರಂದು ಬೆಳಿಗ್ಗೆ 10.30 ಕ್ಕೆ ಜನ್ಮ ದಿನಾಂಕ ದೃಢೀಕರಣ ಪತ್ರ, ಎನ್ಎಸ್ಡಿ/ಡಿಪ್ಲೊಮಾ ಪ್ರಮಾಣ ಪತ್ರ, ರಂಗಶಿಕ್ಷಣ ಕೇಂದ್ರದ ಅನುಭವ ಪ್ರಮಾಣ ಪತ್ರ, ರಂಗಭೂಮಿ ಅನುಭವ ಕುರಿತ ಸ್ವವಿವರ ಪತ್ರ, ಆಧಾರ್ ಕಾರ್ಡ್ ಈ ದಾಖಲಾತಿಗಳೊಂದಿಗೆ ಮೈಸೂರಿನ ರಂಗಾಯಣದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಆಯ್ಕೆಯಾದ ಅಭ್ಯರ್ಥಿಗಳು ರಂಗಾಯಣದ ನಿಯಮ ಹಾಗೂ ಷರತ್ತುಗಳಿಗೆ ಬದ್ದರಾಗಿರಬೇಕೆಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದ್ದಾರೆ.
