ರಾಜಕೀಯ

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ ಕುಸಿದಿದೆ ಬಲಪಡಿಸಲು ಕಾಗೋಡು ಕರೆ

ಸುದ್ದಿಲೈವ್. ಕಾಂ/ಶಿವಮೊಗ್ಗ

ಸಾಗರದ ಈಡಿಗರ ಸಭಾಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಮಟ್ಟದ ನವ ಸಂಕಲ್ಪ ಚಿಂತನಾ ಮಂತನ ಶಿಬಿರ ಕಾರ್ಯಕ್ರಮಕ್ಕೆ ಕಾಗೋಡು ತಿಮ್ಮಪ್ಪ ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು.

ಕಾಗೋಡು ತಿಮ್ನಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನ ಮುಂದಿನ ದಿನಗಳಲ್ಲಿ ಬರುವ ಚುನಾವಣೆಗೆ ಸದೃಢವಾಗಿಸಬೇಕಿದೆ.‌ಶಿವಮೊಗ್ಗದಲ್ಲಿ ಕಾಂಗ್ರೆಸ್ ಬಲ ಕುಸಿದಿದೆ. ಅದಕ್ಕೆ ಚೇತನ ತುಂಬುವ ಕೆಲಸ ಆಗಬೇಕಿದೆ. ಹಾಗಾಗಿ ಈ ಶಿಬಿರದ ಮೂಲಕ ವರ್ಷವಿಡಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್ ಆಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅರ್ಧಭಾಗ ಮಹಿಳೆಯರಿಗೆ ಮೀಸಲಾತಿ. ಆಸ್ತಿಯಲ್ಲಿ ಮಹಿಳೆಯರಿಗೆ ಸಮಪಾಲು ತಂದಿದ್ದು ಕಾಂಗ್ರೆಸ್ ಆಗಿದೆ.ಪಕ್ಷದ ಸಂಘಟನೆ ಕುಸಿದಿದೆ. ಇದನ್ನ‌ಬಲಪಡಿಸಬೇಕಿದೆ. ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಸಂದೇಶ ರವಾನೆ ಆಗಬೇಕಿದೆ ಎಂದರು.

ಸಭೆ ನಡೆಸುವುದರಿಂದ ಕೆಲಸ ಆಗಿದೆ ಎಂದು ತಿಳಿಯಬೇಡಿ, ಪ್ರತಿಯೊಂದು ಬ್ಲಾಕ್ ನಲ್ಲಿ ಕೆಲಸ ಆಗುವಂತೆ ನೋಡಿಕೊಳ್ಳಬೇಕು. ಜವಬ್ದಾರಿಯುತವಾಗಿ ನಡೆದುಕೊಳ್ಳದಿದ್ದರೆ ಅಂತಹ ನಾಯಕರು ಮತ್ತು ಕಾರ್ಯಕರ್ತರನ್ನ ತೆಗೆದುಹಾಕುವಂತೆ ಸಭೆಯಲ್ಲಿ ತಿಳಿಸಿದರು.

ಆರ್ ಎಂ ಎಂ ಮತ್ತು ಕಿಮ್ಮನೆಗೆ ಕಿವಿಮಾತು

ಮಂಜುನಾಥ್ ಗೌಡರಿಗೆ ಇಬ್ಬರು ಒಟ್ಟಿಗೆ ಆಗಬೇಕು ಎಂದು ಪರೋಕ್ಷವಾಗಿ ಕರೆ ನೀಡಿದ ಕಾಗೋಡು ತಿಮ್ಮಪ್ಪ ಮಂಜುನಾಥ್ ಗೌಡ ಮತ್ತು ಕಿಮ್ಮನೆ ರತ್ನಾಕರ್ ಒಂದಾಗುವಂತೆ ತಮ್ಮ ಭಾಷಣದಲ್ಲಿ ತಿಳಿಸಿದರು.  ಬದಲವಾಣೆಯನ್ನ ಎಲ್ಲಿ ಆಗಬೇಕೋ ಅಲ್ಲಿ ಮಾಡಬೇಕು. ಈ ಬಾರಿ ಗೆಲ್ಲದಿದ್ದರೆ ನೇಣು ಹಾಕೊಂಡು ಸಾಯಬೇಕುಎಂದು ಕರೆ ನೀಡಿದರು.

ಅಗ್ನಿಪಥ್ ನ್ನ ಅರ್ಥ್ ಎಂದ ಕಾಗೋಡು

ಅಗ್ನಪಥವನ್ನ ಅರ್ಥ್ ಎಂದು ಗೊಂದಲ ಮಾಡಿಕೊಂಡ ಕಾಗೋಡು ತಿಮ್ಮಪ್ಪ ಮೋದಿಯ ಅರ್ಥ್ ಗೆ ಅರ್ಥವಿಲ್ಲವೆಂದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೋರಾಟದಲ್ಲಿ ಗೆಲ್ಲಬೇಕಿದೆ.

ಸವಾಲಾಗಿ ಸ್ವೀಕರಿಸಿ

ಇದೊಂದು ಸವಾಲಾಗಿದೆ. ಇದಕ್ಕೆ ಹೃದಯ ಬೆರಸಬೇಕು. ನಾನು ಸೋತಿರುವೆ ಆದರೆ ಸಾಯುವವರೆಗೆ ಕೆಲಸ ಮಾಡುತ್ತೇನೆ. ಸಾಗರದಂತಹ ನಗರದಲ್ಲಿ ಕಾಂಗ್ರೆಸ್ ಸೋಲುತ್ತಿದೆ. ಗೇಣಿದಾರರಿಗೆ ಭೂಮಿ ನೀಡಿದ್ದಕ್ಕೆ ಭೂಒಡೆಯರಿಗೆ ಬೇಸರವಿರಬಹುದು. ಆದರೆ ಅನ್ಯಯವಾಗಿಲ್ಲ. ಗೇಣಿ ರೈತ ಎಷ್ಟು ಭೂಮಿಯನ್ನ ಊಳುತ್ತಿದ್ದನೋ ಅಷ್ಟೆ ಕೊಡಿಸಲಾಗಿದೆ. ಇದು ಅನ್ಯಾಯವಲ್ಲವೆಂದರು.

ಬಿಎಸ್ ವೈ ವಿರುದ್ಧ ಗುಡುಗು

ಯಡಿಯೂರಪ್ಪ ಮತ್ತು ಪುತ್ರರಾದ ರಾಘವೇಂದ್ರ ಹಾಗೂ ವಿಜೇಂದ್ರರವರ ಹೆಸರು ಹೇಳದೆ ಟಾಂಗ್ ನೀಡಿದ ಕಾಗೋಡು ತಿಮ್ನಪ್ಪ, ಒಬ್ಬ ಮಗನನ್ನ ಸಂಸತ್ ಗೆ ಸೇರಿಸಿದ್ದಾನೆ. ಆತ ಶಾಸನ ಸಭೆಗೆ ಸೇರಿದ್ದಾನೆ. ಇನ್ನೊಬ್ಬ ಮಗನನ್ನ ಮತ್ತೆಲ್ಲೋ ಕಳುಹಿಸಿದ್ದಾನೆ. ಇಂತಹ ಮನುಷ್ಯರನ್ನ ಸೋಲಿಸಬೇಕಿದೆ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button