ತಾಲ್ಲೂಕು ಸುದ್ದಿ

ಭದ್ರಾವತಿ ಶಾಸಕರ ವಿರುದ್ಧ ಧೃವನಾರಾಯಣ್ ಗುಡುಗು

ಸುದ್ದಿಲೈವ್.ಕಾಂ/ಸಾಗರ

ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಆದರೆ ಶಿಬಿರದಲ್ಲಿ ಗೈರು ಹಾಜರಿಯಾದವರ ಪಟ್ಟಿಯನ್ನ ಪಕ್ಷದ ಕೇಂದ್ರ ನಾಯಕ ಸರ್ಜೀವಾಲರಿಗೆ ನೀಡಲಿದ್ದೇನೆ ಎಂದು ಕೆಪಿಸಿಸಿಯ ಕಾರ್ಯಾಧ್ಯಕ್ಷ ದೃವನಾರಾಯಣ್ ಎಚ್ಚರಿಸಿದರು.

ಅವರು ಸಾಗರದಲ್ಲಿರುವ ಆರ್ಯ  ಈಡಿಗ ಸಮುದಾಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ನ ಜಿಲ್ಲಾ ಮಟ್ಟದ ಸಂಕಲ್ಪ ಚಿಂತನಾ ಶಿಬಿರದಲ್ಲಿ ಭಾಗಿಯಾಗಿ ಮಾತನಾಡಿದರು.

ಪಕ್ಷವನ್ನ ತಳಮಟ್ಟದಿಂದ ಗಟ್ಟಿ ಮಾಡುವ ಕೆಲಸ ಆಗಬೇಕಿದೆ. ಇಂತಹ ಶಿಬಿರದಲ್ಲಿ ನಾಯಕರುಗಳು ಹಾಜರಿರಬೇಕು. ಜಿಲ್ಲೆಯಲ್ಲಿ ಭದ್ರಾವತಿ ಒಂದು ಬಿಟ್ಟರೆ ಎಲ್ಲಾ 6 ತಾಲೂಕಿನಲ್ಲಿ ಕಾಂಗ್ರೆಸ್ ಇಲ್ಲ. ಆದರೆ  ಭದ್ರಾವತಿ ಶಾಸಕರೇ ಗೈರು ಹಾಜರಿಯಾಗಿದ್ದಾರೆ. ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ. ಯಾರು ಸಭೆಯಲ್ಲಿ ಗೈರು ಹಾಜರಿ ಆಗಿದ್ದಾರೋ ಅವರ ಹೆಸರನ್ನ ಸರ್ಜೀವಾಲರಿಗೆ ನೀಡುತ್ತೇನೆ ಎಂದರು.

ಪಕ್ಷದ ಆಂತರಿಕ ಚುನಾವಣೆ ವೇಳಾಪಟ್ಟಿ ನಿಗದಿ ಆಗಿದ್ದು. ಬ್ಲಾಕ್ ಕಾಂಗ್ರೆಸ್ ನ ಬೂತ್ ಅಧ್ಯಕ್ಷ ಮತ್ತೊಬ್ಬ ಡೆಲಿಗೇಟ್ಸ್ ನ್ನ ನೇಮಿಸಿಕೊಂಡು ಮೂರು ದಿನಗಳಲ್ಲಿ ಪಟ್ಟಿ ನೀಡಬೇಕು. ಪಂಚಾಯತ್ ಮಟ್ಟದ ಸಮಿತಿ ಮತ್ತು ಬೂತ್ ಕಮಿಟಿ ರಚನೆ ಆಗಬೇಕು ಎಂದು ಕರೆ ನೀಡಿದರು.

ಆ.9 ರಿಂದ 15 ರವರೆಗೆ ಪ್ರತಿ‌ಜಿಲ್ಲಾ ಮಟ್ಟದಲ್ಲಿ ಪಾದಯಾತ್ರೆ ನಡೆಸಬೇಕಿದೆ. ಈ ಪಾದಯಾತ್ರೆಯ ಮೂಲಕ ಸ್ವಾತಂತ್ರ್ಯದ ಕುರಿತು ಜನಜಾಗೃತಿ ಆಗಬೇಕಿದೆ. ಒಂದು ತಿಂಗಳ ಒಳಗೆ ಪಕ್ಷದ ಖಾಲಿಯಿರುವ ಹುದ್ದೆಯನ್ನ ಭರ್ತಿ ಆಗಬೇಕಿದೆ ಎಂದು ತಿಳಿಸಿದರು.

ಸರ್ಕಾರದ ವೈಫಲ್ಯಗಳು ಬಹಳವಿದೆ. ಜನತಾದಳ ಮತ್ತು ಜನತಾ‌ಪಕ್ಷವಿದ್ದಗೂ ಸಹ ಇಷ್ಟೊಂದು ವಿರೋಧಿ ಅಲೆ ಇರಲಿಲ್ಲ. ಬೆಲೆ ಏರಿಕೆ,ವ್ಯಾಪಕ ಭ್ರಷ್ಠಾಚಾರಗಳಿವೆ. ಹಾಗಾಗಿ ಹೋರಾಟದ ರೂಪು ರೇಷಗಳನ್ನ 7 ಸಮಿತಿಯನ್ನ ರಚಿಸಲಾಗಿದೆ.

ಮೊನ್ನೆ ನಡೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಯಾವತ್ತೂ ಕಾಂಗ್ರೆಸ್ ಗೆದ್ದಿರಲಿಲ್ಲ.ಮೈಸೂರಿನಲ್ಲಿ ಕಾಂಗ್ರೆಸ್ ನ ಮಧುಮಾಧೇಗೌಡ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿಯವರು ಜೂ.20 ರಂದು ಮೈಸೂರಿಗೆ ಪ್ರಧಾನಿ ಮೋದಿ ಬರ್ತಾ ಇದ್ದಾರೆ. ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿ ಪ್ರಧಾನಿ ಮೋದಿಗೆ ಗಿಫ್ಟ್ ನೀಡೋಣವೆಂದು ಪ್ರಚಾರಕ್ಕೆ ನಡೆಸಲಾಗಿತ್ತು. ಆದರೆ ಜನ ಬಿಜೆಪಿಗೆ ಸಕ್ಕತ್ ಶಾಕ್ ನೀಡಿದೆ ಎಂದರು.

ಪಕ್ಷದಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನ ರೂಢಿಸಿಕೊಳ್ಳಬೇಕಿದೆ ಎಂದು ಮಾಜಿ ಸಂಸದ ದೃವನಾರಾಯಣ್ ಕರೆ ನೀಡಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button