ಕ್ರೈಂ

ನದಿಗೆ ಸ್ನಾನಕ್ಕೆ ತೆರಳಿದ ಬಾಪೂಜಿನಗರದ ಚರಣ್ ಶವವಾಗಿ ಪತ್ತೆ

IMG-20220618-WA0055ಸುದ್ದಿಲೈವ್. ಕಾಂ/ಶಿವಮೊಗ್ಗ

ತುಂಗನದಿಗೆ ಸ್ನಾನಕ್ಕೆ ತೆರಳಿದ್ದ ಬಾಪೂಜಿ ನಗರದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.

ನಿನ್ನೆ ಸಂಜೆ ಸ್ನೇಹಿತರ ಜೊತೆ ಚರಣ್ ಎಂಬ 17 ವರ್ಷದ ಬಾಲಕ ಸ್ನೇಹಿತರ ಜೊತೆ ತುಂಗ ನದಿಯ ಮಂಟಪದ ಬಳಿ ಈಜಲು ಹೋಗಿದ್ದನು. ಸ್ನಾನ ಮಾಡುವಾಗ ನೀರಿಗಿಳಿದಿದ್ದ ಬಾಲಕ ದಡ ಸೇರಿರಲಿಲ್ಲ.

ನಿನ್ನೆ ಈತನನ್ನ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿದ್ದು ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ 7 ರಿಂದ ಶೋಧ ಕಾರ್ಯ ಆರಂಭಿಸಿದ ಅಗ್ನಿಶಾಮಕದಳದವರಿಗೆ ಚರಣ್ ನ ಮೃತ ದೇಹ ಪತ್ತೆಯಾಗಿದೆ.

ಚರಣ್ ಮುಳುಗಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಶೋಧಕಾರ್ಯದಲ್ಲಿ ಅಗ್ನಿಶಾಮಕ ದಳದ ಬೋಟ್, ಇಬ್ಬರು ಈಜುಗಾರರು ಒಬ್ಬರು ಸ್ಥಳೀಯರು ಭಾಗಿಯಾಗಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button