ಕ್ರೈಂ
ಮೃತ ತಂದೆಯ ಮಣ್ಣು ಮಾಡಲು ಅಡ್ಡಿ-ಜೀವ ಬೆದರಿಕೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ನಿಧನರಾದ ತಂದೆಯ ಅಂತ್ಯ ಸಂಸ್ಕಾರ ನಡೆಸದಿರಲು ಅಡ್ಡಿಪಡಿಸಿ ನಂತರ ಮನೆಯ ಬಳಿ ಮಾರಕಾಸ್ತ್ರಗಳನ್ನ ಹಿಡಿದುಕೊಂಡು ಬಂದು ಮೃತರ ಕುಟುಂಬಕ್ಕೆ ಬೆದರಿಕೆ ಹಾಕಿದ 10 ಜನರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿಯಲ್ಲಿದೂರು ದಾಖಲಾಗಿದೆ.
ಹೊಸಮನೆ ಬಡಾವಣೆಯ 2 ನೇ ತಿರುವಿನಲ್ಲಿ ನವೀನ್ ಎಂ ಎಂಬುವರ ತಂದೆ ಹಮಾಲಿ ಹನುಮಂತಪ್ಪ ಎಂಬುವರು ನಿಧನರಾಗಿದ್ದರು. ಸುರೇಶ್ ಬಿನ್ ಶ್ರೀನಿವಾಸ, ಸೂರಜ್ ಬಿನ್ ಸುರೇಶ್, ದೇವರಾಜ್ ಬಿನ್ ಹನುಮಂತಪ್ಪ, ಪ್ರೀತಮ್ ಬಿನ್ ದೇವರಾಜ್, ಗಂಗಮ್ಮ ಅನ್ನಪೂರ್ಣ,
ಕರೀಶ, ವಿಶ್ವನಾಥ, ವಿಶ್ವನಾಥ, ಪದ್ಮ, ಸೂರಜ್ ಮತ್ತು ಆತನ ಸ್ನೇಹಿತರು ಹಮಾಲಿ ಹನುಮಂತಪ್ಪನವರ ಅಂತ್ಯ ಸಂಸ್ಕಾರ ಮಾಡಲು ಬಿಡುವುದಿಲ್ಲವೆಂದು ಬೆದರಿಸಿ ಹೋಗಿದ್ದರು. ಅಲ್ಲದೆ ಮಾರಕಾಸ್ತ್ರಗಳನ್ನ ಹಿಡಿದು ತಂದು ಬದುಕಲು ಬಿಡುವುದಿಲ್ಲವೆಂದು ಬೆದರಿಸಿದ್ದಾರೆ.
ಈ 10 ಜನರ ವಿರುದ್ಧ ನವೀನ್ ಜೀವಬೆದರಿಕೆಯ ಪ್ರಕರಣವನ್ನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
