ಕೂದಲು ಅಂಚಿನಿಂದ ಪಾರಾಗ ಬೇಕಿದ್ದ ಬಾಲಕ ನೀರುಪಾಲು!

ಸುದ್ದಿಲೈವ್. ಕಾಂ/ಶಿವಮೊಗ್ಗ
ತುಂಗ ನದಿಗೆ ಸ್ನಾನಕ್ಕೆ ಹೋಗಿದ್ದ ಅಪ್ರಾಪ್ತ ಬಾಲಕನೋರ್ವ ನೀರು ಪಾಲಾಗಿರುವ ಘಟನೆ ಇಂದು ಸಂಜೆ ನಡೆದಿದೆ.
ಚರಣ್ ಎಂಬ 17 ವರ್ಷದ ಬಾಲಕ ಬಾಪೂಜಿ ನಗರದ ನಿವಾಸಿ ಆಗಿದ್ದಾನೆ. ಈತ ಇಬ್ಬರು ಟ್ಯಾಂಕ್ ಮೊಹಲ್ಲಾ ಯುವಕರೊಂದಿಗೆ ತುಂಗ ನದಿಯ ಮಂಟಪಕ್ಕೆ ಸ್ನಾನಕ್ಕೆ ಹೋಗಿದ್ದಾನೆ ಎನ್ನಲಾಗಿದೆ.
ಸ್ನಾನಕ್ಕೆ ಹೋದಾಗ ಮೂವರು ಫೊಟೊ ಎಲ್ಲಾ ತೆಗೆದುಕೊಂಡಿದ್ದಾರೆ. ಸೋಪು ಹಚ್ಚಿಕೊಂಡಿದ್ದ ಚರಣ್ ನೀರಿನಲ್ಲಿ ಇಳಿಯುತ್ತಾರೆ. ನೀರಿನಲ್ಲಿ ಮುಳುಗಿ ಕಾಪಾಡಿ ಕಾಪಾಡಿ ಎಂದು ಕೂಗಿದ್ದಾನೆ. ಟ್ಯಾಂಕ್ ಮೊಹಲ್ಲಾದ ಹುಡುಗರು ಬಜಾವ್ ಮಾಡಲು ಮುಂದಾಗಿದ್ದಾರೆ.
ಈಜು ಕಲಿತಿದ್ದ ವಿವೇಕ್ ಎಂಬ (17) ಯುವಕ ಮತ್ತು ಇನ್ನೋರ್ವ ಹುಡುಗ ರಕ್ಷಣೆಗೆ ಮುಂದಾದಾಗ ಇಬ್ಬರಲ್ಲಿ ಒಬ್ಬನು ನೀರಿನಲ್ಲಿ ಮುಳುಗಲು ಆರಂಭಿಸಿದ್ದರಿಂದ ಈತನನ್ನ ನೀರನಲ್ಲಿ ಮುಳುಗುವುದರಿಂದ ವಿವೇಕ್ ರಕ್ಷಿಸಿದ್ದಾನೆ. ಮುಳುಗುತ್ತಿದ್ದ ಚರಣ್ ನ ತಲೆ ಕೂದಲು ಸಿಕ್ಕರೂ ಆ ಕ್ಷಣದಲ್ಲಿ ಬಜಾವ್ ಮಾಡಲು ವಿವೇಕ್ ನಿಗೆ ಸಾಧ್ಯವಾಗಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಬಂದಿದ್ದು ನೀರಿನಲ್ಲಿ ಮುಳುಗಿದ್ದ ಚರಣ್ ನ ಪತ್ತೆಗಾಗಿ ಮುಂದಾಗಿದೆ. ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸಧ್ಯಕ್ಕೆ ಇವಿಷ್ಟು ಸ್ಥಳೀಯರಿಂದ ದೊರೆತ ಪ್ರಾಥಮಿಕ ಮಾಹಿತಿ.
