ಕ್ರೈಂ

ಪ್ರಕರಣ ಹಿಂಪಡೆಯಿರಿ ಇಲ್ಲ ಮಗನ ತಿಥಿಗೆ 2‌ಲಕ್ಷ ರೂ. ಸಿದ್ದಪಡಿಸಿಕೊಳ್ಳಿ ಎಂದು ಧಮ್ಕಿ!

ಸುದ್ದಿಲೈವ್. ಕಾಂ/ಶಿವಮೊಗ್ಗ

ಹಳೇ ಪ್ರಕರಣವನ್ನ ಹಿಂಪಡೆಯದಿದ್ದರೆ ನಿಮ್ಮ ಮಗನ ತಿಥಿಗೆ 2 ಲಕ್ಷ ರೂ. ಹಣ ರೆಡಿ ಮಾಡಿಕೊಳ್ಳಿ ಎಂದು ದಮ್ಕಿ ಹಾಕಿಹಾಕಿರುವ ಘಟನೆ ನಡೆದಿದ್ದು ಈ ಕುರಿತು ದೊಡ್ಡಪೇಟೆ ಪೊಲೀಸರು ಎಫ್ಐಆರ್‌ ದಾಖಲಿಸಿ ಕೊಂಡಿದ್ದಾರೆ.

ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿರುವ ರಾಮು ಎಂಬುವರ ಮಗನಾದ ಎಸ್. ಆರ್. ಅನಿಲ್ ಎಂಬುವನಿಗೆ ದುರ್ಗಪ್ರಸಾದ್ ಬಾಬು ಮತ್ತು ಇತರೆ ಮೂವರು ಬರ್ಜಿ, ಚಾಕು,ಮಚ್ಚು, ಸ್ಕ್ರೂಡ್ರೈವರ್ ಹಲ್ಲೆ ನಡೆಸಿದ್ದನು.  ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಈ ಪ್ರಕರಣ 2021 ರಲ್ಲಿ ನಡೆದಿತ್ತು.

ಈ ಪ್ರಕರಣವನ್ನ ಹಿಂಪಡೆಯುವಂತೆ ದುರ್ಗಪ್ರಸಾದ್ ರಾಮುವಿಗೆ ಮೊಬೈಲ್ ಗೆ 8-9 ಬಾರಿ ಕರೆ ಮಾಡಿ ನಿಮ್ಮ ಮಗನ ಪ್ರಕರಣವನ್ನ ಹಿಂಪಡೆಯದಿದ್ದರೆ ಆತನನ್ನ ಜೀವಸಹಿತ ಉಳಿಸುವುದಿಲ್ಲ. ಆತನ ತಿಥಿಗೆ 2 ಲಕ್ಷ ಹಣ ರೆಡಿ ಮಾಡಿಟ್ಟುಕೊ ಎಂದು ಬೆದರಿಸಿದ್ದಾನೆ.

ಅಲ್ಲದೆ ಈತನ ವಿರುದ್ಧ 1860 ಐಪಿಸಿ ಸೆಕ್ಷನ್ ಅಡಿ 143 147 148 341 504 324 323 307 149 ,ದಾವೆಗಳು ದಾಖಲಾಗಿವೆ. ಈ ಬಗ್ಗೆ ನ್ಯಾಯಾಲಯ ದೊಡ್ಡಪೇಟೆ ಠಾಣೆಗೆ ದೂರು ದಾಖಲಿಸಿ ಅಂತಿಮ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿದ ಮೇರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ‌ಜರುಗಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button