ಸ್ಥಳೀಯ ಸುದ್ದಿಗಳು
ಅಗ್ನಿಪಥ್ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ಕೇಂದ್ರದ ಅಗ್ನಿಪಥ್ ಯೋಜನೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಆ ಬೆನ್ನಲ್ಲೇ ನಗರದಲ್ಲೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇಂದು ಮಹಾವೀರ ವೃತ್ತದಲ್ಲಿ ಸಂಘಟನೆಯ ಧ್ವಜ, ಪ್ಲಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿತು.
ಅಗ್ನಪಥ್ ಯೋಜನೆಯನ್ನ ಕೇಂದ್ರ ಸರ್ಕಾರ ಕೈಬಿಡಬೇಕು. ಈ ಯೋಜನೆಯ ಮೂಲಕ ನಿರುದ್ಯೋಗ ಸೃಷ್ಠಿ ಹೆಚ್ಚಾಗುತ್ತಿದೆ. 4 ವರ್ಷದ ಬಳಿಕ ಭಾರತೀಯ ಸೇನೆಗೆ ಸೇರಿದರೆ ಏನು ಮಾಡಬೇಕು ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ಬಿಜೆಪಿ ಸರ್ಕಾರ ವಿರುದ್ಧಘೋಷಣೆಗಳು ಈ ವೇಳೆ ಮೊಳಗಿದವು. We want vidya not Agni(ನಮಗೆ ಶಿಕ್ಷಣ ಬೇಕೆ ವಿನಃ ಅಗ್ನಿ ಅಲ್ಲ) ಎಂದು ಪ್ಲಕಾರ್ಡ್ ಹಿಡಿದುಕೊಂಡಿರುವುದು ಪ್ರತಿಭಟನೆಯಗಮನ ಸೆಳೆದಿದೆ.
