ಎಸಿಬಿ ದಾಳಿಯಲ್ಲಿ ಪತ್ತೆಯಾಯಿತು 7 ಲಕ್ಷ ನಗದು ಬರೋಬ್ವರಿ 1 ಕೆ.ಜಿ ಚಿನ್ನಾಭರಣ,ಜಮೀನು, ತೋಟಗಳು!

ಸುದ್ದಿಲೈವ್.ಕಾಂ/ಶಿವಮೊಗ್ಗ
ಅಧಿಕ ಆಸ್ತಿ ಹೊಂದಿದ ಆರೋಪದ ಅಡಿ ಶಿವಮೊಗ್ಗದ ಎಲ್ ಬಿ ಎಸ್ನಗರದಲ್ಲಿರುವ ಬೆಂಗಳೂರಿನ ಬೆಸ್ಕಾಂ ಅಧಿಕಾರಿಯ ಮನೆಯ ಮೇಲೆ ಎಸಿಬಿ ದಾಳಿ ನಡೆದಿದ್ದು ಇದರಲ್ಲಿ ಜಮೀನು, 7 ಲಕ್ಷ ರೂ ನಗದು, ಸುಮಾರು 1 ಕೆಜಿ ಚಿನ್ನಾಭರಣ ಪತ್ತೆಯಾಗಿದೆ.
ಬೆಂಗಳೂರಿನ ಬೆಸ್ಕಾಂ ನಲ್ಲಿ ಡೆಪ್ಯೂಟಿ ಕಮಿಷನರ್ ಎಲೆಕ್ಟ್ರಿಕಲ್ ವಿಭಾಗದಲ್ಲಿ ಇನ್ಸ್ಪೆಕ್ಟರ್ ಆಗಿ ಸಿದ್ದಪ್ಪ ಕರ್ತವ್ಯ ನಿರ್ವಹಿಸುತ್ತಿದ್ದು ಶಿವಮೊಗ್ಗ ಎಲ್ ಬಿಎಸ್ ನಗರದಲ್ಲಿ ಮನೆಹೊಂದಿದ್ದರು.
ಅಧಿಕ ಆಸ್ತಿ ಗಳಿಕೆ ಹಿನ್ಬಲೆಯಲ್ಲಿ ಸ್ಥಳೀಯ ಎಸಿಬಿ ಅಧಿಕಾರಿಗಳಾದ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಎರಡು ಮನೆಗಳು ಹೊಂದಿರುವುದು ತಿಳಿದು ಬಂದಿದೆ.
ಶಿವಮೊಗ್ಗದಲ್ಲಿ 4 ಸೈಟ್ ಮತ್ತು ಹೊನ್ನಾಳಿಯಲ್ಲಿ 3 ಸೈಟ್ ಹೊಂದಿರುವ ದಾಖಲಾತಿಗಳು ಪತ್ತೆಯಾಗಿದೆ. ಸಿದ್ದಪ್ಪರ ಹುಟ್ಟೂರಾದ ಗೋಪದೊಂಡನಹಳ್ಳಿಯಲ್ಲಿ 8 ಎಕರೆ ಅಡಿಕೆ ತೋಟ, ತಾವರೆ ಚಟ್ನಹಳ್ಳಿಯಲ್ಲಿ 1 ಎಕರೆ 7 ಗುಂಟೆ ಜಮೀನು, 1 ಕಾರು, 1 ಬೈಕ್, 7 ಲಕ್ಷ ನಗದು ಮತ್ತು ಬರೋಬ್ಬರಿ 1 ಕೆಜಿ ಚಿನ್ನಾಭರಣ ಪತ್ತೆಯಾಗಿದೆ.
