ಸ್ಥಳೀಯ ಸುದ್ದಿಗಳು
ಸರ್ವೆ ಕಾರ್ಯಕ್ಕೆ ಅಡ್ಡಿ ಇಬ್ಬರು ಪೊಲೀಸರ ವಶಕ್ಕೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ಜಿಲ್ಲಾ ಒಕ್ಕಲಿಗರ ಜಮೀನನ್ನ ಸರ್ವೇ ಕೆಲಸಕ್ಕೆ ಹೋದಾಗ ಇಬ್ಬರು ಅಡ್ಡಿಪಡಿಸಿದ್ದು ಇವರನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ನಿನ್ನೆ ತಾಲೂಕಿನ ಅಗಸವಳ್ಳಿ ಜಿಲ್ಲಾ ಒಕ್ಕಲಿಗರ ಸಮುದಾಯಕ್ಕೆ ಸೇರಿದ್ದ 25 ಎಕರೆ ಜಮೀನಿದ್ದು ಇದರಲ್ಲಿ ಒಂದು ಕಾಲುಗುಂಟೆ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಹಿನ್ಬಲೆಯಲ್ಲಿ ಸಮುದಾಯ ಸರ್ವೆಗೆ ಕೋರಿತ್ತು.
ಕಂದಾಯ ಇಲಾಖೆ ಸರ್ವೆಗೆ ಬಂದಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಎರಡು ಕುಟುಂಬಗಳು ಅಡ್ಡಿ ಪಡಿಸಿದ್ದಾರೆ. ಇವರನ್ನ ತುಂಗ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
