ಸ್ಥಳೀಯ ಸುದ್ದಿಗಳು
ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಸುದ್ದಿಲೈವ್. ಕಾಂ/ಶಿವಮೊಗ್ಗ
ಹೊಳಲೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಜೂನ್ 18 ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಹೊಳಲೂರು, ಮಡಿಕೆಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ,
ಬೀರನಕೆರೆ, ಬನ್ನಿಕೆರೆ ಗ್ರಾಮಪಂಚಾಯತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಪಾ& ನಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
