ಮದುವೆಗೆ ಅಡ್ಡಿಯಾಗಿದ್ದ ‘ಕುಜ’ ದೋಷಕ್ಕೆ ಮಹಿಳಾ ಪೊಲೀಸ್ ಬಲಿ

ಸುದ್ದಿಲೈವ್. ಕಾಂ/ಶಿವಮೊಗ್ಗ
ಕುಜ ದೋಷಕ್ಕೆ ಯುವತಿಕೊನೆಗೂ ಬಲಿಯಾಗಿದ್ದಾಳೆ. ನಿನ್ನೆ ಮಣಿಪಾಲಿನಲ್ಲಿ ಯುವತಿ ಕೊನೆ ಉಸಿರೆಳೆದಿದ್ದಾಳೆ. ವಿಷ ಸೇವಿಸಿ 16 ದಿನಗಳ ಬಳಿಕ ಯುವತಿ ಸಾವನ್ನಪ್ಪಿದ್ದಾಳೆ.
ಮೇ.31 ರಂದು ಭದ್ರಾವತಿಯ ಆರ್ ಎಂ ಸಿ ಯಾರ್ಡ್ ನ ಬಳಿ ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ತಾನು ಪ್ರೀತಿಸಿದ ಅರಣ್ಯ ಇಲಾಖೆಯ ಆರ್ ಎಫ್ ಒ ಪ್ರವೀಣ್ ಕುಮಾರ್ ಮೊಕಾಶಿಯನ್ನ ಪ್ರೀತಿಸುತ್ತಿದ್ದು ಮದುವೆಗೆ ಜಾತಕ ಅಡ್ಡವಾಗಿದ್ದ ಕಾರಣ ವಿಷ ಸೇವಿಸಿದ್ದಳು.
ಪ್ರವೀಣ ಕುಮಾರ್ ಮೊಕಾಶಿ ಮತ್ತು ಸುಧಾ ಪರಸ್ಪರ ಪ್ರೀತಿಸಿ 6 ವರ್ಷಗಳಾಗಿವೆ. ಇಬ್ಬರು ಬೇರೆ ಬೇರೆ ಜಾತಿಯಾಗಿದ್ದು ಇಬ್ಬರು ಮದುವೆಗೆ ಮುಂದಾಗಿದ್ದರು. ಮದುವೆಗೆ ಸುಧಾರವರ ಜಾತಕ ಪಡೆದುಹೋದ ಪ್ರವೀಣ್ ನ ತಾಯಿ ಜ್ಯೋತಿಷ್ಯರು ಹುಡುಗಿಗೆ ಕುಜ ದೋಷವಿದೆ ಎಂದು ಹೇಳಿದ್ದಾರೆ. ಕುಜದೋಷವಿದ್ದರೆ ಮಗ ಬಲುಬೇಗ ಸಾವನ್ಬಪ್ಪುತ್ತಾನೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹಾಗಾಗಿ ಮದುವೆಯನ್ನ ನಿರಾಕರಿಸಿದ್ದರು.
ಎಷ್ಟೇ ಪ್ರಯತ್ನಿಸಿದರು ಪ್ರವೀಣ್ ತದನಂತರ ಸುಧಾರನ್ನ ಭೇಟಿಯಾಗಿರಲಿಲ್ಲ.ಮೇ. 30 ರಂದು ಭದ್ರಾವತಿ ತಾಲೂಕು ಉಬ್ರಾಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೊಕಾಶಿಯನ್ನ ಭೇಟಿಯಾದಾಗ ನೀನು ಇಲ್ಲದೆ ನಾನು ಸಾಯುವುದಾಗಿ ಹೇಳಿದ್ದಾಳೆ. ಸಾವು ಹೇಗಿರುತ್ತದೆ ಎಂದು ನಾನು ತೋರಿಸುವೆ ಎಂದು ಸುಧಾಳನ್ನ ಬೈಕ್ ನಲ್ಲಿ ಕೂರಿಸಿಕೊಂಡು ಪ್ರವೀಣ್ ಅಡ್ಡಾದಿಡ್ಡಿ ಬೈಕ್ ಹೊಡೆದು ಆರ್ ಎಂಸಿ ಬಳಿ ಕರೆದುಕೊಂಡು ಬರುತ್ತಾನೆ.
ಆರ್ ಎಂಸಿಯ ಬಳಿ ಪ್ರವೀಣ್ ನಾಟಕವಾಡಿ ಇಬ್ವರು ವಿಷ ಸೇವಿಸಿ ಸತ್ತುಬಿಡೋಣ ಎಂದು ತಿಳಿಸಿ ಮೊದಲು ನೀನು ಕುಡಿ ಎಂದು ಸುಧಾಳಿಗೆ ವಿಷದ ಬಾಟಲ್ ನೀಡಿದ್ದಾನೆ. ವಿಷ ಸೇವಿಸಿ ಸುಧಾ ಪ್ರವೀಣ್ ವಿಷಸೇವಿಸುವುದನ್ನ ಕಾಣಲಿಲ್ಲವೆಂದು ಎಫ್ಐಆರ್ ನಲ್ಲಿ ದಾಖಲಿಸುತ್ತಾಳೆ.
ಹೀಗೆ ಕುಜ ದೋಷಕ್ಕೆ ಯುವತಿ ಬಲಿಯಾಗಿದ್ದಾಳೆ. ಅಪ್ಪಟ ಪ್ರೀತಿ ಜ್ಯೋತಿಷ್ಯದ ಕುಜದೋಷಕ್ಕೆ ಆಹುತಿಯಾಗಿದೆ.
