ಮನೆ ಖಾಲಿ ಮಾಡಿಸಲು ಹಲವು ರೀತಿಯ ತಂತ್ರಗಾರಿಕೆ-ಬಿತ್ತು ಎಫ್ಐಆರ್

ಸುದ್ದಿಲೈವ್. ಕಾಂ/ಶಿವಮೊಗ್ಗ
ಮನೆಯ ಮೇಲಿನ ವ್ಯಕ್ತಿಯೊಬ್ಬ ತಾಯಿ ಮಗಳನ್ನ ಮನೆ ಬಿಡಿಸುವ ನೆಪದಲ್ಲಿ ಮಾಟ ಮಂತ್ರ, ಬೆದರಿಕೆ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಅಶೋಕ ನಗರದ 3 ನೇ ತಿರುವಿನಲ್ಲಿ ಸಿಹಿ ಬಿಲ್ಡಿಂಗ್ ನಲ್ಲಿ ಕಳೆದ 7 ವರ್ಷದಿಂದ ಗೋಹರ್ ಜಾ ಎಂಬ ಮಹಿಳೆ ವಾಸವಾಗಿದ್ದು ಈಗ ಹೆರಿಗೆಗೆಂದು ಮಗಳು ಮನೆಗೆ ಬಂದಿದ್ದಾಳೆ.
ಆದರೆ ಮನೆಯ ಮೇಲೆ ವಾಸವಾಗಿರುವ ಶ್ರೀನಿವಾಸ್ ಎಂಬುವರು ಮನೆ ಖಾಲಿ ಮಾಡುವಂತೆ ಒತ್ತಾಯಿಸಿ ಹಲವು ವಿಧದ ಬೆದರಿಕೆ, ಮಾಟ ಮಂತ್ರ, ಹುಡುಗರನ್ನ ಬಿಟ್ಟು ಹೊಡೆಸುವುದು ಮೊದಲಾದ ಧಮ್ಕಿ ಹಾಕುತ್ತಿರುವುದಾಗಿ ಆರೋಪಿಸಿದ್ದಾರೆ.
ಹಲವು ರಾಜಕೀಯ ವ್ಯಕ್ತಿಗಳು ಗೊತ್ತು, ಪೊಲೀಸರಿಗೆ ಜಗ್ಗೊಲ್ಲ, ನಿಮ್ಮಮಗಳನ್ನೇ ಅಪಹರಿಸುತ್ತೇನೆ. ನನ್ನಬಳಿ ಹುಡುಗರಿದ್ದಾರೆ. ಚಿನ್ನಬೆಳ್ಳಿ ಕೆಲಸ ಮಾಡಿರುವ ವ್ಯಕ್ತಿ ಆಸಿಡ್ ತಂದು ಸುರಿಯುತ್ತೇನೆ ಹೀಗೆ ವಿಧ ವಿಧವಾದ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿನಲ್ಲಿ ಆಪಾಧಿಸಿದ್ದಾರೆ.
ಮನೆಯ ಬಾಗಿಲಿಗೆ ಅರಿಸಿನ ಕುಂಕುಮ ನಿಂಬೆಹಣ್ಣು ತಂದು ಚೆಲ್ಲುವುದಾಗಿ ಹೆದರಿಸಿ ಒಟ್ಟಿನಲ್ಲಿ ಮನೆ ಬಿಡಿಸುವ ಕುತಂತ್ರಕ್ಕೆ ಕೈಹಾಕಿದ್ದಾನೆ ರಕ್ಷಣೆ ಕೊಡುವಂತೆ ಗೋಹರ್ ಜಾ ಕೋರಿದ್ದಾರೆ.
