ಕ್ರೈಂ
49 ಸಾವಿರ ರೂ.ನೊಂದಿಗೆ ಮಹಿಳೆ ನಾಪತ್ತೆ?

ಸುದ್ದಿಲೈವ್. ಕಾಂ/ಶಿವಮೊಗ್ಗ
ಹಲ್ಲುನೋವು ಎಂದು ಆಸ್ಪತ್ರೆಗೆ ಹೋದ ಪತ್ನಿ ದಿಡೀರಂತ ನಾಪತ್ತೆಯಾಗಿರುವುದು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದರೆ ಮನೆಬಿಟ್ಟುವಾಗ ಪತ್ನಿ ಚಿನ್ನಾಭರಣದ ಸಮೇತ 49 ಸಾವಿರ ರೂ. ಹಣ ತೆಗೆದುಕೊಂಡು ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶಿವಮೊಗ್ಗ ತಾಲೂಕು ಭದ್ರಾಪುರದಲ್ಲಿ ಶಶಿಧರ್ ಮತ್ತು ಶೋಭಾ ಎಂಬುವರು ಅನೂನ್ಯವಾಗಿ ಸಂಸಾರ ನಡೆಸಿದ್ದು ಇಬ್ವರು ಮಕ್ಕಳಿದ್ದಾರೆ. ಇಬ್ಬರೂ ಕೂಲಿಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಜೂ.13 ರಂದು ಹಲ್ಲುನೋವೆಂದು ಹೊಳೆಹೊನ್ನೂರು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿದ ಮಹಿಳೆ ವಾಪಾಸ್ ಮನೆಗೆ ಬಂದಿರುವುದಿಲ್ಲ. ಆದರೆ ಮಹಿಳೆ ಹೋಗುವಾಗ ಮೈಮೇಲಿನ 5 ಗ್ರಾಂ ಬಂಗಾರದ ಸರ, ಎರಡು ಬೆಳ್ಳಿ ಉಂಗುರದೊಂದಿಗೆ ನಾಪತ್ತೆಯಾಗಿರುವುದು ದೂರಿನಲ್ಲಿ ಮಾಮೂಲಿಯಾಗಿರುತ್ತದೆ.
ಆದರೆ 49 ಸಾವಿರ ರೂ ತೆಗೆದುಕೊಂಡು ಹೋಗಿರುವುದಾಗಿ ಪತಿ ದೂರು ನೀಡಿರುವುದು ಈ ನಾಪತ್ತೆ ಪ್ರಕರಣ ಕುತೂಹಲ ಕೆರಳಿಸಿದೆ.
