ಶಿಕ್ಷಣ

ಕುವೆಂಪು ವಿವಿಯಲ್ಲಿ ನಡೆದ 31 ಮತ್ತು 32 ನೇ ಘಟಿಕೋತ್ಸವ

ಡಿ.ಹೆಚ್.ಶಂಕರಮೂರ್ತಿ ಸೇರಿ 6 ಜನರಿಗೆ ಡಾಕ್ಟರೇಟ್ ಪ್ರಧಾನ

1655369145770ಸುದ್ದಿಲೈವ್.ಕಾಂ/ಶಂಕರಘಟ್ಟ

ಇಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ 31 ಮತ್ತು 32 ನೇ ಘಟಿಕೋತ್ಸವ ನಡೆದಿದ್ದು, ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಿದ್ದಾರೆ.

ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಸೇರಿದಂತೆ 6 ಜನ ಗಣ್ಯರಿಗೆ ಇದೇ ವೇಳೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. 31 ನೇ ಘಟಿಕೋತ್ಸವದ ಭಾಗವಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ, ಶಿಕ್ಷಣ ತಜ್ಞೆ ಗೀತಾ ನಾರಾಯಣನ್ ಹಾಗೂ ಯೋಗ ಗುರು ಭ. ಮ. ಶ್ರೀಕಂಠ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಮಾಡಲಾಯಿತು.

32 ನೇ ಘಟಿಕೋತ್ಸವದ ಭಾಗವಾಗಿ ಶಿಕ್ಷಣ ತಜ್ಞ, ವಿಶ್ರಾಂತ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗಗುರು ಬಾ. ಸು. ಅರವಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು.

31 ಮತ್ತು 32 ಸಾಲಿನ ಘಟಿಕೋತ್ಸವದಲ್ಲಿ ಒಟ್ಟು 220 ಜನ ಅಭ್ಯರ್ಥಿಗಳಿಗೆ ಪಿ.ಹೆಚ್.ಡಿ. ಪ್ರದಾನಮಾಡಲಾಗಿದ್ದು, ಒಟ್ಟು 137 ವಿದ್ಯಾರ್ಥಿಗಳಿಗೆ 259 ಸ್ವರ್ಣ ಪದಕಗಳನ್ನ ನೀಡಲಾಯಿತು. .

ಕನ್ನಡ ಭಾರತಿ ವಿಭಾಗದ ಪ್ರಣೀತಾ ಎಂ. ಟಿ. ಗೆ ಒಟ್ಟು 8 ಸ್ವರ್ಣ ಪದಕ ಹಾಗೂ ನಗದು ಬಹುಮಾನಗಳನ್ನ ನೀಡಲಾಯಿತು. ಕನ್ನಡ ಭಾರತಿ ವಿಭಾಗದ ದಿವ್ಯಾ ಹೆಚ್. ಎನ್. ಗೆ ಒಟ್ಟು 11 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳ ದೊರೆತಿವೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button