ದೇಶದಲ್ಲಿ ಮುಸ್ಲೀಂ ಧರ್ಮಾಂಧತೆ ವಿರುದ್ಧ ಹಿಂದೂ ಸಂಘಟನೆಯ ಮನವಿ ಏನು?

ಸುದ್ದಿಲೈವ್. ಕಾಂ/ಶಿವಮೊಗ್ಗ
ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಧರ್ಮಾಂಧತೆ ಮತ್ತು ಹಿಂಸಾಚಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಹಿಂದೂಗಳ ಮೇಲೆ ನಿರಂತರವಾಗಿ ಹಾಗೂ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ. ಇದನ್ನು ಈ ಕೂಡಲೇ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದರು. ಬಜರಂಗದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ಮಾತನಾಡಿ, ಉತ್ತರ ಪ್ರದೇಶ ಹಾಗೂ ಕರ್ನಾಟಕ ಎರಡೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರ್ಕಾರಗಳೇ ಆಡಳಿತ ನಡೆಸುತ್ತಿವೆ. ರಾಮನವಮಿ,ಹನುಮಜಯಂತಿ ಮೆರವಣಿಗೆಯ ಮೇಲೆ ಕಲ್ಲು ತೂರಿದರು.ಪದೇ ಪದೇ ಹಿಂದೂಗಳ ಮೇಲೆ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿವೆ.
ಇದರ ಬಗ್ಗೆ ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಯು ಪಿ ನಲ್ಲಿ ದಾಳಿ ಮಾಡುವವರ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ ಕರ್ನಾಟಕ ಸರ್ಕಾರ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ವಿಫಲವಾಗಿದೆ.ಈಗ ನೂಪುರ್ ಶರ್ಮಾ ಖುರಾಬ್ ನಲ್ಲಿರುವ ವಿಷಯವನ್ನೇ ಬಹಿರಂಗವಾಗಿ ಹೇಳಿದ್ದಾರೆ.ಅದನ್ನು ಕಾನೂನು ಪ್ರಕಾರ ದೂರು ನೀಡಿ ಗಮನಕ್ಕೆ ತರುತ್ತಿದ್ದೇವೆ.ಪ್ರತಿಭಟನೆಯ ನೆಪದಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ.ಇದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಹಿಂಪದ ನಾರಾಯಣ್ ಜಿ ವರ್ಣೇಕರ್, ಜಿಲ್ಲಾ ಸಂಚಾಲಕ ರಾಹೇಶ್ ಗೌಡ, ಸತೀಶ್ ಮುಂಚೆಮನೆ, ನಗರಕಾರ್ಯದರ್ಶಿ ಸುಧಾಕರ ಎಸ್.ಆರ್. ಬಜರಂಗದಳದ ನಗರ ಸಂಚಾಲಕ ಅಂಕುಶ್ ಮೊದಲಾದವರು
