ಸ್ಥಳೀಯ ಸುದ್ದಿಗಳು

ನಕಲಿ ಅಂಕಾಪಟ್ಟಿ ನೀಡಿದ್ದ ಇಬ್ಬರು ನ್ಯಾಯಾಲಯದ ಸಿಬ್ಬಂದಿಗಳ ವಿರುದ್ಧ ಎಫ್ಐಆರ್

ಸುದ್ದಿಲೈವ್. ಕಾಂ/ಶಿವಮೊಗ್ಗ

ನಕಲಿ ಅಂಕಪಟ್ಟಿ ನೀಡಿ ನ್ಯಾಯಾಲಯದಲ್ಲಿ ಕೆಲಸಗಿಟ್ಟಿಸಿಕೊಂಡಿದ್ದ ಇಬ್ವರು ಸಿಬ್ವಂದಿಗಳನ್ನ ನ್ಯಾಯಾಲಯ ವಜಾಗೊಳಿಸಿದ್ದು ಅವರ ವಿರುದ್ಧ ಕ್ರಮಕ್ಕಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತೀರ್ಥಹಳ್ಳಿಯ ಹಿರಿಯ ವ್ಯವಹಾರ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಆದೇಶ ಜಾರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದ ತೀರ್ಥಮ್ಮ ಎಂಬುವರು ಕೆಲಸಕ್ಕೆ ಸೇರುವ ವೇಳೆ 7 ನೇ ತರಗತಿ ಪಾಸ್ ಎಂದು ದಾಖಲಾತಿ ಸಲ್ಲಿಸಿದ್ದರು.

ಈ ಹುದ್ದೆಗೆ 7 ನೇ ತರಗತಿ ಪಾಸ್ ಆದವರು ಅರ್ಹತೆಯನ್ನ ಹೊಂದಿದ ಹಿನ್ನಲೆಯಲ್ಲಿ ತೀರ್ಥಮ್ಮ ಅದರಂತೆ 7 ನೇ ತರಗತಿ ಪಾಸ್ ಆದ ದಾಖಲಾತಿ ನೀಡಿದ್ದರು. ಆದರೆ ಈ ದಾಖಲಾತಿಗೆ ಶಾಲೆಯ ಮುಖ್ಯೋಪಧ್ಯಾಯರ ಸಹಿಯನ್ನ ಫೋರ್ಜರಿ ಮಾಡಿರುವುದಾಗಿ ವಿವಿಧ‌ಇಲಾಖೆ ಸಾಬೀತು ಪಡಿಸಿದೆ.

2004 ರಲ್ಲಿ ತೀರ್ಥಮ್ಮ ದಾಖಲಾತಿ ಪತ್ರ ಸಲ್ಲಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಇವರನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೆ ಉಚ್ಚನ್ಯಾಯಾಲಯದಲ್ಲಿ ಇವರು ಮೇಲ್ಮನವಿ ಸಲ್ಲಿಸಿದ್ದರೂ ಸಹ ಮೇಲ್ಮನವಿಯನ್ನ ಮಾನ್ಯ ನ್ಯಾಯಾಲಯ ವಜಾಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಒಳಗೊಂಡವರ ಎಲ್ಲರ ವಿರುದ್ಧ ಕ್ರಮ ಜರುಗಿಸಲು ನ್ಯಾಯಾಲಯ ಸೂಚಿಸಿರುವ ಕಾರಣ, ಶಿವಮೊಗ್ಗ ನ್ಯಾಯಾಲಯದ ಮುಖ್ಯ ಆಡಳಿತ ಅಧಿಕಾರಿ ಲೋಕೇಶ್ ಜಯನಗರ ಪೊಲೀಸ್ ಠಾಣೆಯಲ್ಲಿ ತೀರ್ಥಮ್ಮ, ಜಾನಕಮ್ಮನವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button