ಮನೋರಂಜನೆ

ಡಾ.ಸರ್ಜಿ ಅವರಿಗೆ ಅಚೀವರ್ರ್ಸ್ ಆಪ್‌ ಕರ್ನಾಟಕ ಪ್ರಶಸ್ತಿ

ಸುದ್ದಿಲೈವ್. ಕಾಂ/ಶಿವಮೊಗ್ಗ

ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಟೈಮ್‌ ಆಪ್‌ ಇಂಡಿಯಾ ಗ್ರೂಪ್‌ನ ಸೋದರ ಪತ್ರಿಕೆ ವಿಜಯ ಕರ್ನಾಟಕ ಕೊಡ ಮಾಡುವ ವರ್ಷದ ಅಚೀವರ್‌್ಸ ಆಪ್‌ ಕರ್ನಾಟಕ ಪ್ರಶಸ್ತಿಗೆ ನಗರದ ಮಕ್ಕಳ ತಜ್ಞರು ಹಾಗೂ ಸರ್ಜಿ ಪೌಂಡೇಷನ್‌ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಭಾಜನರಾಗಿದ್ದಾರೆ.

ಸರ್ಜಿ ಮದರ್‌ ಆ್ಯಂಡ್‌ ಕೇರ್‌ ಸೆಂಟರ್‌, ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಸರ್ಜಿ ಅಮೃತನಾಡಿ, ಸರ್ಜಿ ಪುಷ್ಯ ಆಸ್ಪತ್ರೆ ಸರ್ಜಿ ಬಂಜೆತನ ನಿವಾರಣಾ ಕೇಂದ್ರ, ಸರ್ಜಿ ಇನ್ಸಿಟಿಟ್ಯೂಟ್‌ ಒಳಗೊಂಡ ಸರ್ಜಿ ಪೌಂಡೇಷನ್‌ ಅಡಿ ಉತ್ಕೃಷ್ಟ ಗುಣ ಮಟ್ಟದಲ್ಲಿ ರಿಯಾಯಿತಿ ದರದಲ್ಲಿ ನೀಡುವ ಸೇವೆ , ಉಚಿತ ಆರೋಗ್ಯ ಅರಿವು, ಆರೋಗ್ಯ ತಾಪಸಣೆ , ರಕ್ತದಾನ ಶಿಬಿರ, ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಕೈಗೊಂಡ ಸೇವೆಯನ್ನು ಪರಿಗಣಿಸಿ ಟೈಮ್ಸೌ ಗೂಪ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ನಗರದ ಕಿಮ್ಮನೆ ಕಿಮ್ಮನೆ ಗಾಲ್‌್ಪ ರೆಸಾರ್ಟ್‌ನಲ್ಲಿ ಭಾನುವಾರ ಸಂಜೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಹಾಗೂ ಚಿತ್ರದುರ್ಗ ಮುರುಗಾ ಮಠದ ಶ್ರೀ ಮುರುಘಾ ಶರಣರು ಅಚೀವರ್‌್ಸ ಆಪ್‌ ಕರ್ನಾಟಕ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಸಮಾರಂಭದಲ್ಲಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಹಾಗೂ ಕಿಮ್ಮನೆ ಗಾಲ್‌್ಪ ರೆಸಾರ್ಟ್‌ ಎಂ.ಡಿ.ಕಿಮ್ಮನೆ ಜಯರಾಮ್‌ ಭಾಗವಹಿಸಿದ್ದರು.

IMG-20220615-WA0127

ಸಾಧನೆಯ ಶಿಖರವೇರಿದ ಡಾ.ಧನಂಜಯ ಸರ್ಜಿ

ಬಡವ, ಶ್ರೀಮಂತ ಎಂಬ ಬೇಧ ಭಾವವಿಲ್ಲದೇ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಉತ್ಕೃಷ್ಠ ಗುಣಮಟ್ಟದ ಸೇವೆಗೆ ಸರ್ಜಿ ಸೂಪರ್‌ ಸ್ಪೆಷಲಿಟಿ ಆಸ್ಪತ್ರೆ ಹೆಸರಾಗಿದ್ದು, ಮಲೆನಾಡಿನ ಮನೆ ಮಾತಾಗಿದೆ. ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು 2014ರಲ್ಲಿ ಸಣ್ಣದಾಗಿ ಕ್ಲಿನಿಕ್‌ ಮಾದರಿಯಲ್ಲಿ ಶುಭಾರಂಭ ಮಾಡಲಾಗಿತು. ಆದರೆ ಇಂದು 256 ಬೆಡ್‌ಗಳವರೆಗೆ ತಲುಪಿದ್ದು ಪ್ರಸ್ತುತ ಆರೋಗ್ಯ ಕ್ಷೇತ್ರದ ಹೀರೋ ಆಗಿ ಬೆಳೆದು ನಿಂತಿದೆ.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಡಾ.ಧನಂಜಯ ಸರ್ಜಿ ಅವರು ಮೂಲತಃ ದಾವಣಗೆರೆ ಜಿಲ್ಲೆಚನ್ನಗಿರಿ ತಾಲೂಕಿನ ಗೊಪ್ಪೇನಹಳ್ಳಿ ಗ್ರಾಮದವರು. ಸರ್ಜಿ ರುದ್ರಪ್ಪ, ತಾಯಿ ರೇಣುಕಾ ಅವರ ಪುತ್ರ. ಇವರ ಎಲ್ಲಸಾಧನೆಯ ಹಿಂದೆ ಪತ್ನಿ, ಆಸ್ಪತ್ರೆಯ ನಿರ್ದೇಶಕರೂ ಆದ ನಮಿತಾ ಅವರ ಎಲ್ಲ ರೀತಿಯ ಸಹಕಾರವಿದೆ.

ದಾವಣಗೆರೆ ಜೆಜೆಎಂ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದವರು. ಶಿಕ್ಷಣದ ಹಂತದಲ್ಲೇ ಜಿಲ್ಲೆಯ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸು ಕಂಡವರು. ಆ ಕನಸೀಗ ಸಾಕಾರಗೊಂಡಿದೆ. 2007ರ ಮಾರ್ಚ್‌ 18ರಂದು ಶಿವಮೊಗ್ಗದಲ್ಲಿ ಸರ್ಜಿ ಚೈಲ್‌್ಡ ಕೇರ್‌ ಸೆಂಟರ್‌ ಮೂಲಕ ಸೇವೆ ಆರಂಭಿಸಲಾಯಿತು. 2014ರಂದು ಜೀರೊ ಹಾಸಿಗೆಯಿಂದ ಶುಭಾರಂಗೊಂಡ ಆಸ್ಪತ್ರೆ ಕೇವಲ 9 ವರ್ಷದಲ್ಲಿ 256 ಬೆಡ್‌ವರೆಗೂ ತಲುಪಿರುವುದು ಸಾಧನೆ ಹಾಗೂ ಉತ್ತಮ ಗುಣಮಟ್ಟದ ಸೇವೆಗೆ ನಿದರ್ಶನವಾಗಿದೆ.

ರಾಜ್ಯದ ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಶಿರಸಿ, ಚಿಕ್ಕಮಗಳೂರು, ಹಾಸನ, ಅರಸೀಕೆರೆ ಹಾಗೂ ತುಮಕೂರು, ಬೆಂಗಳೂರು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆ ಪಡೆಯಲು ನಿತ್ಯವೂ ನೂರಾರು ರೋಗಿಗಳು ಬರುತ್ತಿದ್ದಾರೆ. ಒಟ್ಟು 75 ಐಸಿಯು ಬೆಡ್‌ಗಳು, 9 ಆಪರೇಷನ್‌ ಥಿಯೇಟರ್‌ಗಳ ಸೌಲಭ್ಯ ಇದೆ. ಎರಡೂ ಸರ್ಜಿ ಆಸ್ಪತ್ರೆ ಸೇರಿ ವರ್ಷಕ್ಕೆ ಎರಡು ಲಕ್ಷ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನಕ್ಕೆ ಸರಾಸರಿ 500ರಿಂದ 750 ರೋಗಿಗಳನ್ನು ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ವರ್ಷದಲ್ಲಿ1800ರಿಂದ 2000 ವರೆಗೆ ಹೆರಿಗೆ ಆಗುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬಂಜೆತನ ನಿವಾರಣಾ

ಕೇಂದ್ರ: ಬಂಜೆತನ ನಿವಾರಣೆಯಿಂದ ಹಿಡಿದು ಭ್ರೂಣ ಹಂತದಲ್ಲಿರುವ ಶಿಶುವಿನಿಂದ ಹಿಡಿದು ಹಿರಿಯ ವಯಸ್ಕರವರೆಗೂ ಸರ್ವ ರೀತಿಯ ಆರೋಗ್ಯ ಸೇವೆ ಸರ್ಜಿಯಲ್ಲಿ ಲಭ್ಯ. ಐವಿಎಫ್‌ ಸೆಂಟರ್‌ (ಬಂಜೆತನ ನಿವಾರಣಾ ಕೇಂದ್ರ) ಶೀಘ್ರವೇ ಆರಂಭವಾಗಿದೆ. ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲ ವಿಭಾಗದಲ್ಲಿ ಒಟ್ಟು 50 ಕನ್ಸಲ್ಟೆಂಟ್‌ ವೈದ್ಯರು ಇದ್ದಾರೆ.

ಮತ್ತೊಂದು ವಿಶೇಷವೆಂದರೆ 12 ಭಾಷೆಗಳಲ್ಲಿ ಔಷಧ ಚೀಟಿ ಸೌಲಭ್ಯವಿದೆ. ಜಿಲ್ಲೆಯ ಆರೋಗ್ಯ ಕ್ಷೇತ್ರದ ಇತಿಹಾಸದಲ್ಲೇ ಇಷ್ಟು ವೇಗವಾಗಿ ಅಭಿವೃದ್ಧಿಗೊಂಡ ಶ್ರೇಯಸ್ಸು ಸರ್ಜಿ ಆಸ್ಪತ್ರೆಗೆ ಸಲ್ಲುತ್ತದೆ.

2 ಲಕ್ಷ ಒಪಿಡಿ ತಪಾಸಣೆ

ವರ್ಷಕ್ಕೆ 2ಲಕ್ಷ ಮಂದಿಯ ಒಪಿಡಿ ತಪಾಸಣೆ ಮಾಡುವ ಮೂಲಕ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲೇ ನಂ 1 ಆಗಿ ಸರ್ಜಿ ಆಸ್ಪತ್ರೆ ಬೆಳೆದು ನಿಂತಿದೆ.

ಜಿಲ್ಲಾಡಳಿತ ಹಾಗೂ ಬಿ.ಎಸ್‌.ಯಡಿಯೂರಪ್ಪ ಶ್ಲಾಘನೆ

2020 ಏಪ್ರಿಲ್‌ನಲ್ಲಿ ಹಿಂದೆ ನಗರದ ಮೆಗ್ಗಾನ್‌ ಆಸ್ಪತ್ರೆಯ ಮಕ್ಕಳ ಐಸಿಯು ವಿಭಾಗದಲ್ಲಿ ಶಾರ್ಟ್‌ ಸಕ್ರ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ ಸಂದರ್ಭ ನವಜಾತ 33 ಮಕ್ಕಳನ್ನೂ ಸರ್ಜಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಈ ಸಂದರ್ಭ ಸರ್ಜಿ ಆಸ್ಪತ್ರೆ ತೀವ್ರ ನಿಗಾ ವಹಿಸಿ ಆರೈಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರಶಂಸಾ ಪತ್ರ ನೀಡುವ ಮೂಲಕ ಸೇವೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದೆ. ಹಾಗೆಯೇ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌ ಯಡಿಯೂರಪ್ಪ ಅವರು ದೂರವಾಣಿ ಕರೆ ಮಾಡಿ ಶ್ಲಾಘ ನೆ ವ್ಯಕ್ತಪಡಿಸಿದ್ದರು.

ಆಟೊ ಚಾಲಕರಿಗೆ ಹೆಲ್‌್ತಕಾರ್ಡ್‌

ಆಯುಷ್ಮಾನ್‌ ಭಾರತ್‌ ಯೋಜನೆ ಅಡಿ ಸಾವಿರಾರು ಮಕ್ಕಳಿಗೆ ಚಿಕಿತ್ಸಾ ಸೌಲಭ್ಯ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ 2500 ಮಂದಿ ಆಟೊ ಚಾಲಕರಿಗೆ ಸರ್ಜಿ ಆಸ್ಪತ್ರೆಯಿಂದ ಹೆಲ್‌್ತ ಕಾರ್ಡ್‌ಗಳನ್ನು ಉಚಿತವಾಗಿ ನೀಡಲು ಚಾಲನೆ ಕೊಡಲಾಗಿದೆ. ಪ್ರತಿ ತಿಂಗಳು ಉಚಿತ ಆರೋಗ್ಯ ಅರಿವು ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಕೊರೊನಾ ಕೈ ಮೀರಿದಾಗ ಯುನಿಟಿ ಆಸ್ಪತ್ರೆ ಸಹಯೋಗದಲ್ಲಿ ಸಾವಿರಾರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಹಾಗೆಯೇ 1500 ಆಶಾ ಕಾರ್ತೆಯರಿಗೆ ಹೆಲ್‌್ತ ಕಾರ್ಡ್‌ ವಿತರಿಸಲಾಗಿದೆ.

ಸಾಮಾಜಿಕ ಕಳಕಳಿ ಹೊಂದಿರುವ ಡಾ.ಧನಂಜಯ ಸರ್ಜಿ ಅವರು 2016ರಲ್ಲಿಮಕ್ಕಳ ದಿನಾಚರಣೆ ಸಂದರ್ಭ 160 ವಿಶೇಷಚೇತನ ಹಾಗೂ ಅನಾಥ ಮಕ್ಕಳನ್ನು ಆರೋಗ್ಯಕ್ಕೆ ಸಂಬಂಸಿದಂತೆ ದತ್ತು ಪಡೆದಿದ್ದಾರೆ. ಇತ್ತೀಚೆಗೆ ಸರ್ಜಿ ಫೌಂಡೇಷನ್‌ ಎಂಬ ದತ್ತು ಸಂಸ್ಥೆಯನ್ನು ಆರಂಭಿಸಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷದ ಮಹಾಮಳೆಯ ಪ್ರವಾಹ ಸಂದರ್ಭ ರೌಂಡ್‌ಟೇಬಲ್‌ ಸಹಾಯದೊಂದಿಗೆ 2 ಸಾವಿರ ಮಕ್ಕಳಿಗೆ ಉಚಿತವಾಗಿ ಟೈಫಾಯಿಡ್‌ ವ್ಯಾಕ್ಸಿನೇಷನ್‌ ನೀಡಿರುವುದು ವಿಶೇಷವಾಗಿದೆ.

ಉಚಿತ ಹಾಸ್ಟೆಲ್‌ ಸೌಲಭ್ಯ

ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಸರ್ಜಿ ಉಚಿತ ಹಾಸ್ಟೆಲ್‌. ಈ ಹಾಸ್ಟೆಲ್‌ನಲ್ಲಿಒಟ್ಟು 270 ರಿಂದ 300 ಮಂದಿಗೆ ಉಚಿತವಾಗಿ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೊಂದು ವಿಶೇಷವೆಂದರೆ ಸರ್ಜಿ ಸಮೂಹ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಸುಮಾರು 1200 ಮಂದಿಗೆ ನಿತ್ಯವೂ ಉಚಿತವಾಗಿ ಊಟ, ಉಪಹಾರದ ವ್ಯವಸ್ಥೆ ಮಾಡಿದ್ದು, ಅವರ ಅನ್ನ ದಾಸೋಹಕ್ಕೆ ಸಾಕ್ಷಿಯಾಗಿದೆ.

  1. ರೌಂಡ್‌ ಟೇಬಲ್‌ ಸಂಸ್ಥೆ ಜತೆಗೂಡಿ ಶಿವಮೊಗ್ಗದಲ್ಲಿ 2019 ರಲ್ಲಿ ಮಹಾಮಳೆ ಸಂದರ್ಭ 1200 ಮಂದಿಗೆ ಟೈಪಾಯಿಡ್‌ ಲಸಿಕೆ,
  2. ಸ್ವತಃ ಡಾ.ಧನಂಜಯ ಸರ್ಜಿ ಅವರೇ 62 ಬಾರಿ ರಕ್ತದಾನ.
    ಪ್ರತಿ ತಿಂಗಳು 1.50 ಲಕ್ಷ ರೂ.ವೆಚ್ಚದಲ್ಲಿ 160 ವಿಶೇಷಚೇತನ ಮಕ್ಕಳ ಆರೈಕೆ,
  3. ಶಿವಮೊಗ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ನವಜಾತ ಶಿಶುಗಳ ಐಸಿಯು ಘಟಕ ಸ್ಥಾಪನೆ.
  4. ಖಾಸಗಿ ಕ್ಷೇತ್ರದಲ್ಲಿ ಕೋವಿಡ್‌ ಸಂದರ್ಭ ಮಂದಿಗೆ ಕೊರೊನಾ ಲಸಿಕೆ,
  5. ಆಯುಷ್ಮಾನ್‌ ಭಾರತ್‌ ಯೋಜನೆ ಅಡಿ 1400 ಮಕ್ಕಳಿಗೆ ಚಿಕಿತ್ಸೆ.
Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button