ಕ್ರೈಂ
ಮದುವೆ ಮನೇಲಿ ಬ್ಯಾಗ್ ಮರೆತು ಹೋಗಿದ್ದಕ್ಕೆ 47 ಸಾವಿರ ರೂ ‘ದಂಡ’

ಸುದ್ದಿಲೈವ್.ಕಾಂ/ಸಾಗರ
ಸಾಗರದ ಶ್ರೀರಾಂಪುರ ಬಡಾವಣೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಚೌಲ್ಟ್ರಿಗೆ ತೆರಳಿದ್ದ ಮಹಿಳೆ ಆಕಸ್ಮಿಕವಾಗಿ ಊಟದ ಹಾಲ್ ನಲ್ಲಿ ಬ್ಯಾಗ್ ಮರೆತು ಹೋಗಿದ್ದಕ್ಕೆ ಬ್ಯಾಗು ಸಮೇತ ಕಳುವಾಗಿರುವ ಘಟನೆ ನಡೆದಿದೆ.
ಮೈಸೂರಿನಿಂದ ಮಾವನ ಮಗಳ ಮದುವೆಗೆ ಬಂದಿದ್ದ ಭಾವನ ಎಂಬುವರು ಮದುವೆ ಮನೆಯಊಟಕ್ಕೆ ಕುಳಿತಾಗ ಚೇರಿನ ಹಿಂಭಾಗದ ಕುರ್ಚಿ ಮೇಲೆ ಇಟ್ಟಿದ್ದು ಊಟ ಮುಗಿದು ಹೊರಗಡೆ ಬಾಡಿಗೆಯ ರೂಂಗೆ ತೆರಳಿದ್ದಾರೆ.
ನಂತರ ಬ್ಯಾಗ್ ನೆನಪಾದಾಗ ವಾಪಾಸ್ ಚೌಲ್ಟ್ರಿಗೆ ಬಂದಿದ್ದಾರೆ. ಚೌಲ್ಟ್ರಿಯಲ್ಲಿ ಬ್ಯಾಗ್ ನಾಪತ್ತೆಯಾಗಿದೆ. ಬ್ಯಾಗ್ ನಲ್ಲಿ 15 ಗ್ರಾಂ ಚಿನ್ನದ ಹವಳದ ಸರ, 5 ಸಾವಿರದ ಹವಳದ ಬಂಗಾರದ ಕಿವಿ ಓಲೆ. ಒಂದು ಎಟಿಎಂ ಕಾರ್ಡ್ ಸಹ ಇತ್ತು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇವುಗಳ ಮೊತ್ತ 47 ಸಾವಿರ ರೂ. ಹಣ ಎಂದು ಅಂದಾಜಿಸಲಾಗಿದೆ. ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
