ಶಿಕ್ಷಣ
ಶೇ.86 ರಷ್ಟು ಪಠ್ಯ ಪುಸ್ತಕ ಮುದ್ರಣ ಮುಗಿದಿದೆ-ಶೇ.74 ರಷ್ಟು ವಿತರಣೆ ಆಗಿದೆ-ಬಿ.ಸಿ.ನಾಗೇಶ್

ಸುದ್ದಿಲೈವ್.ಕಾಂ/ಶಿವಮೊಗ್ಗ
ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನೇಮಕಾತಿ ಆಗಿರಲಿಲ್ಲ, ಈಗ 15000 ಸಾವಿರ ಶಿಕ್ಷಕರ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಅವರು ಮಾಧ್ಯಮದೊಂದಿಗೆ ಮಾತನಾಡಿ ಶಿಕ್ಷಕರ ಕೊರತೆ ಶೀಘ್ರದಲ್ಲಿ ನೀಗಲಿದೆ. ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ಬಾರಿ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿದ್ದಾಗ 10ಸಾವಿರಶಿಕ್ಷಕರನ್ನ ನೇಮಿಸಲು ಯತ್ನಿಸಲಾಯಿತು.ಆದರೆ 3½ ಸಾವಿರ ಶಿಕ್ಷಕರು ಮಾತ್ರ ನೇಮಕಾತಿ ಆಗಿದ್ದರು.
ಈ ಬಾರಿ 15 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ಇದರ ನೇಮಕಾತಿಗೆ ಹೊಸ ಆಯಾಮವನ್ನ ಕಂಡುಕೊಳ್ಳಲಾಗಿದೆ ಎಂದು ತಿಳಿಸಿರು.
ಹಿಂದಿನ ವರ್ಷಗಳಿಗಿಂತ ಈ ಬಾರಿ ಬೇಗನೆ ಪಠ್ಯಪುಸ್ತಕ ವಿತರಿಸಲಾಗಿದೆ. ಉಕ್ರೇನ್ ಮತ್ತು ರಷ್ಯ ಯುದ್ಧ ನಡೆಯದಿದ್ದರೆ ಮೊದಲ ದಿನದಿಂದಲೇ ಮಕ್ಕಳಿಗೆ ಪಠ್ಯಪುಸ್ತಕ ಸಿಗುತ್ತಿತ್ತು
ಪಠಪುಸ್ತಕ 86% ಮುದ್ರಣವಾಗಿದೆ, 74% ವಿತರಣೆಯಾಗಿದೆ ಇನ್ನುಳಿದ ವಿತರಣೆ ಶೀಘ್ರ ಆಗಲಿದೆ ಎಂದು ತಿಳಿಸಿದರು.
