ರಾಜಕೀಯ

ಪಠ್ಯಪುಸ್ತಕ ಪರಿಷ್ಕರಣೆಯಿಂದ ಕನ್ನಡದ ಆಸ್ಮಿತೆಗೆ ಧಕ್ಕೆ-ಸಿದ್ದರಾಮಯ್ಯ

ಸುದ್ದಿಲೈವ್. ಕಾಂ/ತೀರ್ಥಹಳ್ಳಿ

ಕನ್ನಡದ ಅಸ್ಮಿಥೆಗೆ ಧಕ್ಕೆ ತರುವ ಕೆಲಸ ಆಗ್ತಾ ಇದೆ.ಕನ್ನಡದ ಅಸ್ಮಿಥೆಗೆ ದಕ್ಕೆ ಬಂದಾಗ, ಕನ್ನಡಿಗ ಎದ್ದೇಳಬೇಕಿದೆ. ಬಸವಣ್ಣ, ಕುವೆಂಪು, ನಾರಾಯಣಗುರು, ಅಂಬೇಡ್ಕರ್ ಅವರ ಚರಿತ್ರೆಯನ್ನ ತಿರುಚುವ ಕೆಲಸ ಆಗಿದೆ ಕನ್ನಡಿಗ ಹೋರಾಟ ನಡೆಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಅವರು ಇಂದು ತೀರ್ತಿಥಹಳ್ಳಿಯಲ್ಚುಲಿ ಕಿಮ್ವಮನೆ ಪಾದಾಯತ್ರೆಯ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿ,  ಬಸವಣ್ಣ ವೈದಿಕಧರ್ಮವನ್ನ ಪರ್ಯಾಯವಾಗಿ ಮನುಷ್ಯತ್ವ ಧರ್ಮವನ್ನ ಹುಟ್ಟುಹಾಕಿದರು. ಅದೇ ಲಿಂಗಾಯಿತ ಧರ್ಮವಾಗಿದೆ. ಅಸಮಾನತೆಯ ವಿರುದ್ಧ ಹೋರಾಟ ಮಾಡಿದವರು ಬಸವಣ್ಣ. ಬಿಜೆಪಿಯವರು ಮತ್ತೆ ವೈದಿಕ ಧರ್ಮದ ಕಡೆ ಸೆಳೆಯಲಾಗುತ್ತಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಏನು ಹೇಳುತ್ತಿದೆ. ಅಂಬೇಡ್ಕರ್ ಕರಡು ಸಂವಿಧಾನಕ್ಕೆ ನೇಮಕವಾಗದಿದ್ದರೆ ಉತ್ತಮ ಸಂವಿದಾನ ಸಿಕ್ತಾಯಿತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ. ಆರ್ ಎಸ್ ಎಸ್ ಮತ್ತು ಅಂಗ ಸಂಸ್ಥೆಗಳಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ, ಸಮಾನತೆ ಹೇಳುವ ಸಂವಿಧಾನವು ಮನುವಾದಿಗಳಿಗೆ  ಇಷ್ಟವಿಲ್ಲ ಎಂದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ಜಾತಿ ಕೆಳಜಾತಿಯನ್ನ ತುಳಿಯುತ್ತಿರುತ್ತದೆ. ಇದು ಮನುವಾದಿಗಳಿಗೆ ಇಷ್ಟ. ಆದರೆ ಸಮಾನತೆ ಬಯಸಿರಲಿಲ್ಲ. ಸಮಾನತೆ ಸುಮ್ಮನೆ ಬರೊದಿಲ್ಲ. ಜಾತಿ ವ್ಯವಸ್ಥೆ ಸಮಾಜದಲ್ಲಿ ಬಹಳ ಆಳವಾಗಿ ಬೇರುಬಿಟ್ಟಿದೆ.ಬಸವಣ್ಣನ ವಚನದ ರೀತಿಯಲ್ಲಿ ಬದಲಾವಣೆ ಆಗಿಲ್ಲ.ಅನೇಕ ಜನ ವಚನ ಹೇಳಿ ಜಾತಿಯನ್ನ ಅನುಸರಿಸುತ್ತಾರೆ. ಇಂತಹವರಿಂದ ಮಾನವೀಯ ಮೌಲ್ಯ, ದೇಶಭಕ್ತಿಯನ್ನ ಬೆಳೆಸಲಾಗಲು ಸಾಧ್ಯವಾ ಎಂದರು.

ಟಿಟಿ ಕೃಷ್ಣಮಾಚಾರಿ ಅವರು ಸಹ ಅಂಬೇಡ್ಕರ್ ಅವರ ಸಂವಿಧಾನ ಕರಡು ರಚನೆಯ ಆಯೋಗದಲ್ಲಿ ಇದ್ದರು. ಯಾರು ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಅವರು ಏನಾದರೂ ಸಂವಿಧಾನ ರಚನ ಸಮಿತಿಯಲ್ಲಿದ್ದರೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಕಾಣಲು ಸಾಧ್ಯವಾಗುತ್ತಿರಲಿಲ್ಲ.

ಆದರೆ ಟಿ.ಟಿ.ಕೃಷ್ಣಮಾಚಾರಿ ಅವರು ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂದು ಕರೆದರು. ಆದರೆ ಸರ್ಕಾರ ರೋಹಿತ್ ಚಕ್ರತೀರ್ಥರ ಮೂಲಕ ಸಂವಿಧಾನ ಶಿಲ್ಪಿಯನ್ನ ತೆಗೆಯಿಸಿತು. ಹಾಗಾದರೆ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅಲ್ವಾ? ಎಂದ ಸಿದ್ದರಾಮಯ್ಯ ರಾಜಕೀಯೇತರವಾಗಿ ಕಿಮ್ಮನೆ ರತ್ನಾಕರ್ ಹೋರಾಟವನ್ನ ಆರಂಭಿಸಿದ್ದಾರೆ. ಸಾಹಿತಿಗಳು ಮತ್ತು ವಿವಿಧ ಸಂಘಟನೆಗಳು ಕೈಜೋಡಿಸಲಿ ಎಂದರು.

ಅಂಬೇಡ್ಕರ್, ನಾರಾಯಣಗುರು, ಹಿಂದುಗಳಲ್ಲವಾ? ಬಿಜೆಪಿಯವರು ಮಾತ್ರ ಹಿಂದೂಗಳ, ಮನಿಷ್ಯತ್ವ ಇರುವವರಿಗೆ ವಿಕೃತ ಭಾವನೆ ಇರಲು ಸಾಧ್ಯವಿಲ್ಲ.ಅಂಬೇಡ್ಕರ್ ರಿಗೆ ಸಂವಿಧಾನ ಶಿಲ್ಪಿ ಎಂದು ಕರೆಯದೆ ಇರುವುದು ವಿಕೃತ ಮನಸ್ಸು ಎಂದು ಆರೋಪಿಸಿದರು.

ಇಂದು ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದೆ. ಇದರ ವಿರುದ್ಧ ಕನ್ಬಡದ ಮನಸ್ಸುಗಳು ಒಂದಾಗಬೇಕಿದೆ. ಕಿಮ್ಮನೆ ಆರಂಭಿಸಿದ್ದಾರೆ. ಈ ಹೋರಾಟವನ್ನ ತೀವ್ರಗೊಳಿಸಬೇಕಿದೆ.ಬೊಮ್ನಾಯಿ ಸರ್ಕಾರ ರೋಹಿತ್ ಚಕ್ರತೀರ್ಥ ಸಮಿತಿಯನ್ನ ವಿಸರ್ಜಿಸಿದೆ. ಆದರೆ ಪಠ್ಯಪುಸ್ತಕವನ್ನ ತಿರಸ್ಕರಿಸಿಲ್ಲ. ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದರು.

ಶಿಕ್ಷಣ ಸಚಿವ ಮತ್ತು ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ಇಬ್ವರೂ ಅಸಮರ್ಥ ಸಚಿವರು. ತೀರ್ಥಹಳ್ಳಿಯ ಶಾಕ ಆರಗ‌ಜ್ಞಾನೇಂದ್ರರಂತ ಅಸಮರ್ಥ ಗೃಹಮಂತ್ರಿಯನ್ನ ನಾನು ಕಂಡೇ ಇಲ್ಲ ಎಂದು ಆರೋಪಿಸಿದರು.‌

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button