ರಾಜಕೀಯ

ಒಬ್ಬ ಸಂವೇದನಾಶೀಲ ರಾಜಕಾರಣಿಗೆ ಮಾತ್ರ ಈ ರೀತಿಯ ಪ್ರತಿಭಟನೆ ನಡೆಸಲು ಸಾಧ್ಯ

IMG_20220615_072251

ಸುದ್ದಿಲೈವ್. ಕಾಂ/ತೀರ್ಥಹಳ್ಳಿ

ವಿಪಕ್ಷ ನಾಯಕ ಸಿದ್ದರಾಮಯ್ಯ ವೇದಿಕೆ ಮೇಲೆ ಬಂದರೂ ಸ್ವಾಭಿ ಮಾನಿ ಕಿಮ್ಮನೆ ರತ್ನಾಕರ್ ವೇದಿಕೆಗೆ ಬಂದಿರಲಿಲ್ಲ. ಹಾಗಂತ ಅವರ ಪ್ರತಿಭಟನಾ ಕಾರ್ಯಕ್ರಮದಲ್ಲಿ ವಿರೋಧ ವ್ಯಕ್ತವಾಗಿದೆ ಎಂದರೆ ನಿಮ್ಮ ಅಭಿಪ್ರಾಯ ತಪ್ಪು.

ಕಿಮ್ಮನೆ ರತ್ನಾಕರ್ ಅವರ ಕಾರ್ಯಕ್ರಮವಾದರೂ ಫ್ಲೆಕ್ಸ್ ನಲ್ಲೂ ಅವರ ಭಾವಚಿತ್ರವನ್ನ ಹಾಕಿಕೊಳ್ಳದೆ ಪಾದಯಾತ್ರೆ ನಡೆಸಿದರು. ಪಾದಯಾತ್ರೆಯ ಉದ್ದಗಲಕ್ಕೂ ಅವರ ಫ್ಲೆಕ್ಸ್ ಇರಲಿಲ್ಲ. ನಂತರ ತೀರ್ಥಹಳ್ಳಿಯಲ್ಲಿ ಕುವೆಂಪು ವಿಶ್ವಮಾನವ ವೇದಿಕೆಯಲ್ಲೂ ಅಳವಡಿಸಿದ ಫ್ಲೆಕ್ಸ್ ನಲ್ಲೂ ಸಿದ್ದರಾಮಯ್ಯ, ಡಿಕೆಶಿ, ಹರಿಪ್ರಸಾದ್, ಕಾಗೋಡು ತಿಮ್ಮಪ್ಪ,

ಬುದ್ದ, ಜೈನ, ಆದಿ ಶಂಕರಾಚಾರ್ಯ,ನರಾಯಣಗುರು, ಅಂಬೇಡ್ಕರ್, ಪುರಂದರ ದಾಸ, ಕನಕದಾಸ, ಬಸವಣ್ಣ, ವಾಲ್ಮೀಖಿಯವರ ಭಾವಚಿತ್ರವನ್ನ ಹಾಕಿದ್ದಾರೆ. ಇದು ಫ್ಲೆಕ್ಸ್ ನಲ್ಲಿ ಎಡ ಮತ್ತು ಮೇಲ್ಭಾಗದ ಚಿತ್ರಣವಾದರೆ,

ಎಡಭಾಗದಲ್ಲಿ ಜಿಸಿದ್ದರಾಮಯ್ಯ,ರೈತ ಸಂಘದ ಅಧ್ಯಕ್ಷ ಹೆಚ್ ಆರ್.ಬಸವರಾಜಪ್ಪ, ಡಿಎಸ್ ಎಸ್ ನ ಗುರು‌ಮೂರ್ತಿ, ಸಾಹಿತಿ ಕುಂ.ವೀರಭದ್ರಪ್ಪ, ಸಂಗೀತ ನಿರ್ದೇಶಕ ಹಂಸಲೇಖ, ಹೀಗೆ ವಿವಿಧ ಸಂಘಟನೆಯ ಸಾಹಿತಿಯರ ಫೊಟೊ ಹಾಕಿದ್ದಾರೆ.

ಆದರೆ, ಕಿಮ್ಮನೆ ರತ್ನಾಕರ್ ತಮ್ಮ ಫೊಟೋ ಹಾಕಿಕೊಳ್ಳದೆ ನಿಜವಾದ ಹೋರಾಟಕ್ಕೆ ಕೈ ಹಾಕಿದ್ದಾರೆ. ಓರ್ವ ಸ್ವಾಭಿಮಾನಿ, ಗಾಂಧಿ ತತ್ವದ ಮೇಲೆ ನಡೆಯುವ ರಾಜಕಾರಣಿಗೆ ಈ ರೀತಿ ನಡೆದುಕೊಳ್ಳಲು ಸಾಧ್ಯವೇ ಹೊರತು, ಪ್ರಚಾರ ಪ್ರಿಯರಿಗೆ ಇದು ಸಾಧ್ಯವಿಲ್ಲ.

ತಮ್ಮ ಭಾಷಣದಲ್ಲೂ ಕಿಮ್ಮನೆ ಎಲ್ಲೂ ತನ್ನಿಂದ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಲಿಲ್ಲ ಬದಲಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಭಾಪತಿ ರಮೇಶ್ ಕುಮಾರ್, ಹರಿಪ್ರಸಾದ್, ಸಾಹಿತಿ ಜಿ.ಸಿದ್ದರಾಮಯ್ಯನವರೇ ನಿಮ್ಮಿಂದ ಸರ್ಕಾರ ಬದಲಾವಣೆ, ರೋಹಿತ್ ಚಕ್ರತೀರ್ಥರ ಪಠ್ಯ ಪುಸ್ತಕ ತೆಗೆಯಲು ಸಾಧ್ಯವೆಂದು ಮಾತನಾಡಿದರು.

ಈ ವೇಳೆಯಲ್ಲೂ ಕುಪ್ಪಳ್ಳಿಯಿಂದ ತೀರ್ಥಹಳ್ಳಿಯವರೆಗೆ ನಡೆದ ಪಾದಯಾತ್ರೆಯ ಕಾರ್ಯಕ್ರಮದ ಯಶಸ್ವಿಗೆ ಕಾರ್ಯಕರ್ತರ ಶ್ರಮವಿದೆ. ಭಾಷಣದಲ್ಲೂ ತಮಗೆ ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸುವ ಭಾಷಣದಲ್ಲಿ ಭಾವೋದ್ರೇಕರಾದರು. ಇದು ಒಬ್ಬ ಸಂವೇದನಾಶೀಲ ರಾಜಕಾರಣಿಗೆ ಮಾತ್ರ ಸಾಧ್ಯವೆಂದರೆ ತಪ್ಪಾಗಲಾಗದು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button