ರಾಜಕೀಯ

ಬಿಜೆಪಿಗೆ ಇತಿಹಾಸ ಗೊತ್ತಿಲ್ಲ, ಇತಿಹಾಸ ತಿರಿಚೋದು ಗೊತ್ತು-ಸಿದ್ದರಾಮಯ್ಯ ವಾಗ್ದಾಳಿ

ಸುದ್ದಿಲೈವ್.ಕಾಂ/ತೀರ್ಥಹಳ್ಳಿ

ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನ ಸತತ ಮೂರು ದಿನಗಳಿಂದ ಇಡಿ ವಿಚಾರಣೆ ನಡೆಸುತ್ತಿರಯವುದು ರಾಜಕೀಯ ದ್ವೇಷದಿಂದ ತುಂಬಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇದು ಹೊಸ ಕೇಸ್ ಅಲ್ಲ ಮತ್ತೆ ರೀಓಪನ್ ಮಾಡಿದ್ದಾರೆ.ಸೋನಿಯಾಗಾಂಧಿ ರಾಹುಲ್ ಗಾಂಧಿಗೆ ಕಿರುಕುಳ ನೀಡಲು ಮಾಡಿದ್ದಾರೆ.ಆ ಪತ್ರಿಕೆಯಲ್ಲಿ ಅವರು ಟ್ರಸ್ಟಿ ಆಗಿದ್ದಾರೆ ಅಷ್ಟೇ. ಭಾರತ್ ಜೋಡೋ ಯಾತ್ರೆಯನ್ನ ತಡೆಯಲು ಬಿಜೆಪಿ ತಡೆಯು ಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪೊಲೀಸರ ಮೂಲಕ ಕೇಂದ್ರ ಸರಕಾರ ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್ ಮೇಲೆ ಮ್ಯಾನ್ ಹ್ಯಾಂಡಲ್ ಆಗಿದೆ. ಪ್ರಜಾಪ್ರಭುತ್ವ ಇದೆಯಾ, ಪ್ರಜಾಪ್ರಭುತ್ವ ನಾಶ ಮಾಡ್ತಿದೆ. ಚಳುವಳಿ ಮಾಡೋದು ಮೂಲಭೂತ ಹಕ್ಕು ಕಾನೊನು ಪ್ರಕಾರ ವಿಚಾರಣೆ ಮಾಡಬೇಡಿ ಅಂತಾ ಹೇಳಲ್ಲ.ಕಾನೊನು ಪ್ರಕಾರ ವಿಚಾರಣೆ ಮಾಡಿ. ಆದರೆ ರಾಜಕೀಯ ದುರುದ್ಧೇಶದಿಂದ ಇಡಿಗೆ ಒಳಪಡಿಸಿರುವುದನ್ನ ಕಾಂಗ್ರೆಸ್ ಖಂಡಿಸುತ್ತದೆ ಎಂದರು.

ಈಡಿ, ಐಟಿ ಕೇಂದ್ರ ಸರಕಾರದ ಕೈಗೊಂಬೆಗಳಾಗಿವೆ.ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ರೀತಿ ನಡೆದಿಲ್ಲ. ಕಾನೊನು ಪ್ರಕಾರ ಕ್ರಮ ಕೈಗೊಳ್ಳಿ ಬೇಡ ಅನ್ನುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿ.ಟಿ.ರವಿಯವರು ಸಿದ್ದರಾಮಯ್ಯರನ್ನ  ಕಾನೊನು ಓದಿದ್ದಾರಾ? ಅಥವಾ ಕಾನೂನು ತಜ್ಞನಾ ಎಂದು ಪ್ರಶ್ನಿಸಿದ ಸಿಸ್ದರಾಮಯ್ಯ ಅಭಿವೃದ್ಧಿ ಕುರಿತು ನಾನು  ಚರ್ಚೆಗೆ ಸಿದ್ದವೆಂದು ಹೇಳಿದ್ದಾರೆ. ಚರ್ಚೆ ಬಯಸುತ್ತಿರುವುದು ನಾನನಲ್ಲ ಲಕ್ಷ್ಮಣ್, ಇವರು ಏನು ಓದಿದ್ದಾರೆ, ಅಂಬೇಡ್ಕರ್ ರೀತಿ ಓದಿದ್ದಾರಾ ಎಂದು ತಿರುಗೇಟು ನೀಡಿದರು.

ನಾನು ಆರ್ಥಿಕ ತಜ್ಞ ಅಂತಾ ಹೇಳಿಲ್ಲ, ಹಾಗಾದ್ರೆ ಯಡಿಯೂರಪ್ಪ ಏನು ಮಾಡಿದ್ರು, ಮೋದಿ ಏನು ಮಾಡಿದ್ರು, ನಿರ್ಮಲಾ ಸೀತಾರಾಮ್ ಏನು ಮಾಡಿದ್ರು , ಕಾಮನ್ ಸೆನ್ಸ್ ಇದೆಯಾ ಅವರಿಗೆ, ಅರುಣ್ ಜೈಟ್ಲಿ ಏನು ಓದಿದ್ದಾರೆ. ಏನು ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞನಾ ಅವರು ಪ್ರಶ್ನಿಸಿದರು.

ಮೋದಿ ಏನು ಓದಿದ್ದಾರೆ. ಅವರನ್ನು ಹಾಡಿ ಹೊಗಳುತ್ತಿರಲ್ಲ ಏನು ಓದಿದ್ದಾರೆ ಅವರು, ಪ್ರತಾಪ್ ಸಿಂಹ ಏನು ಓದಿದ್ದಾರೆ. ಸಂಸದ ಆದ ತಕ್ಷಣ ಸರ್ವಜ್ಞನಾ ಎಂದು

ಗುತ್ತಿಗೆದಾರರ ಸಂಘ 40% ಕಮಿಷನ್ ಸರ್ಕಾರವೆಂದು ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಮೋದಿ 40% ಬಗ್ಗೆ ರಾಜ್ಯದ ಜನರಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ನಾಗೇಶ್ ಮಂತ್ರಿ ಆಗಲು ನಾಲಾಯಕ್ ಎಂದು ಆರೋಪಿಸಿದ ಸಿದ್ದರಾಮಯ್ಯ ಮೊದಲು ಹೇಳಿದ್ರು ಏನು ಆಗಿಲ್ಲ ಅಂತಾ. ಆಮೇಲೆ ಒಪ್ಪಿಕೊಂಡರು, ಸ್ವಾಮೀಜಿಗಳು ಸಭೆ ಸೇರಿ ಮನವಿ ಕೊಟ್ರಲ್ಲಾ ಅದು ಸುಳ್ಳಾ, ಸಾಹಿತಿಗಳ ಸಭೆ ಸೇರಿ‌ ಮನವಿ ಕೊಟ್ರಲ್ಲಾ ಅದು ಸುಳ್ಳಾ.

ರೋಹಿತ್ ಚಕ್ರತೀರ್ಥ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎನ್ನುವುದನ್ನು ತೆಗೆದಿದ್ದಾರೆ. ಹಾಗಾದ್ರೆ ಸಂವಿಧಾನ ರಚನೆ ಮಾಡಿದ್ದು ಯಾರು? ಮೋದಿ ಅವರಾ, ಅಮಿತ್ ಷಾ ಅವರಾ. ಬಿಜೆಪಿಗೆ ಇತಿಹಾಸ ಗೊತ್ತಿಲ್ಲ, ಇತಿಹಾಸ ತಿರುಚೋದು ಗೊತ್ತು ಎಂದು ಆರೋಪಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button