ನಾಡಗೀತೆ ತಿರುಚಿದಾಗ ರಾಜ್ಯದಲ್ಲಿ ಇದ್ದಿದ್ದು ಕಾಂಗ್ರೆಸ್ ಸರ್ಕಾರ ಕ್ರಮ ಏಕೆ ತೆಗೆದುಕೊಳ್ಳಲಿಲ್ಲ-ಬಿ.ಸಿ.ನಾಗೇಶ್

ಸುದ್ದಿಲೈವ್. ಕಾಂ/ಶಿವಮೊಗ್ಗ
ಕಾಂಗ್ರೆಸ್ ಪಕ್ಷ ಜೀವನದ ಉದ್ದಕ್ಕೂ ಮತಕ್ಕಾಗಿ ಏನು ಬೇಕಾದರೂ ಮಾಡಿಕೊಂಡು ಬಂದಿದ್ದಾರೆ..ಕಾಂಗ್ರೆಸ್ ನವರೇ ಟಿಪ್ಪು ಜಯಂತಿ ಆರಂಭಿಸಿದ್ರೂ ಮತ ಮುಂದೆ ಇಟ್ಟು ಕೊಂಡು ದೇಶ ಆಳಿದರು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕುವೆಂಪು ಅವರಿಗೆ ಅವಮಾನ ಮಾಡಿದ್ದಾಗ ಸರಕಾರ ಇದ್ದಿದ್ದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು.ನಾಡಗೀತೆಯ ತಿರುಚಿದ್ದು 2017ರಲ್ಲಿ.ತಿರುಚಿದವರ ಮೇಲೆ ಒಂದೇ ಒಂದು ಕೇಸ್ ಬುಕ್ ಮಾಡಿಲಿಲ್ಲವೇಕೆ ಎಂದು ಗುಡುಗಿದರು.
ಆಗ ಯಾಕೆ ಕೇಸ್ ದಾಖಲಿಸಬೇಕೆಂದು ಸಿದ್ದು ಡಿಕೆಶಿ ಮತ್ತು ಕೆಲ ಸಾಹಿತಿಗಳಿಗೆ ಅನ್ನಿಸಲಿಲ್ಲ ಎಂದು ಪ್ರಶ್ನಿಸಿದ ಶಿಕ್ಷಣ ಸಚಿವ ನಾಡಗೀತೆಯ ತಿರುಚಿದವರ ವಿರುದ್ಧ ಬಿಜೆಪಿ ಕ್ರಮ ಕ್ಕೆ ಮುಂದಾಗಿದೆ. ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ರಾಮಾಯಣ ದರ್ಶನಂ ಪಾಠ ತೆಗೆದು ಹಾಕಿದ್ದು ಸಿದ್ದು ಸರ್ಕಾರ.,ಭಾರತ ನನ್ನ ಜನನಿ ಪದ್ಯ ತೆಗೆದುಹಾಕಿದ್ಧು ಸಿದ್ದು ಸರ್ಕಾರ.ಕುವೆಂಪು ಅವರ 8 ಪಾಠ ಇತ್ತು… ಅದನ್ನು 7 ಕ್ಕೆ ಕಡಿಮೆ ಮಾಡಿದ್ದು ಸಿದ್ದು ಸರ್ಕಾರ ಎಂದು ದೂರಿದರು.
ಕುವೆಂಪು ಅವರ 7 ಪಾಠದಿಂದ 10 ಪಾಠ ಮಾಡಲು ಹೊರಟಿದ್ದು ಬಿಜೆಪಿ ಸರ್ಕಾರ, ಸಿದ್ದ ಸರ್ಕಾರ ಮೈಸೂರು ಮಹಾರಾಜ ಪೂರ್ಣ ಪಾಠ ತೆಗೆದು ಹಾಕಿದ್ಥರು. ಕೆಂಪೇಗೌಡರ ಪಾಠ ಕೈಬಿಟ್ಟಿದ್ದರು..
ಡಿಕೆಶಿ ಮತ್ತು ಸಿದ್ದು ನಿಂದ ನಾವು ರಾಷ್ಟ್ರೀಯ ತೆ ಪಾಠ ಕಲಿಯಬೇಕಿಲ್ಲ..ಕುವೆಂಪು ಅವರಿಗೆ ಹೆಚ್ಚು ಗೌರವ ನೀಡಿದ್ದು ಬಿಜೆಪಿಯ ಪಠ್ಯ ಪರಿಷ್ಕರಣೆ ಸಮಿತಿ ಎಂದರು.
