ರಾಜಕೀಯ

ಸ್ಥಳೀಯ ನಾಯಕರ ವೈಮನಸ್ಸನ್ನ ಜನರೇ ಸರಿ ಮಾಡ್ತಾರಾ?

IMG_20220615_072251

ಸುದ್ದಿಲೈವ್. ಕಾಂ/ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ರೋಹಿತ್ ಚಕ್ರತೀರ್ಥರ ಪಠ್ಯಪುಸ್ತಕ ಸಮಿತಿಯ ಪರಿಷ್ಕೃತ ಪಠ್ಯಗಳನ್ನ ಕೈಬಿಡಬೇಕೆಂದು ಕುಪ್ಪಳ್ಳಿಯಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಹೋರಾಟದಲ್ಲಿ ಆರ್.ಎಂ.ಮಂಜುನಾಥ್ ಕಾಣಿಸಿಕೊಂಡರೂ ಅವರಿಬ್ಬರ ನಡುವಿನ ಅಂತರ ಹಾಗೆ ಉಳಿದಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಕಿಮ್ಮನೆ ರತ್ನಾಕರ್ ಯಾವ ಪಕ್ಷದ ಬ್ಯಾನರ್ ಅಡಿ ಪಾದಯಾತ್ರೆ ನಡೆಸುತ್ತಿಲ್ಲವಾದರೂ ಪಾದಯಾತ್ರೆಯಲ್ಲಿ ಇಬ್ಬರ ನಾಯಕರು ಉಪಸ್ಥಿತಿಯನ್ನ ಕಾರ್ಯಕರ್ತರು ನಿರೂಕ್ಷಿಸಿದ್ದಾರೆ. ನಿರೀಕ್ಷೆ ಇಂದು ಸಹ ಡೋಲಾಯಮಾನವಾಗಿದೆ. ಹೊಂದಾಣಿಕೆಯ ಕೊರತೆ ಎದ್ದು ಕಾಣಿತ್ತಿದೆ. ಮಂಜುನಾಥ್ ಗೌಡರಿಗೆ ಅನಾರೋಗ್ಯ ಇರುವುದರಿಂದ ಇವರ ಪಾಲ್ಗೊಳ್ಳುವಿಕೆಯ ಸಮಯ ಕಡಿಮೆ ಇದೆ.

ನಿನ್ಬೆ ರಾತ್ರಿ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಜೊತೆ ಊಟ ಮಾಡಿದರೂ ಇಂದಿನಿಂದ ಕುಪ್ಪಳ್ಳಿಯಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಕಿಮ್ಮನೆ ಶಾರ್ಪ್ 7-10 ಕ್ಕೆ ಕುಪ್ಪಳ್ಳಿಯ ಕವಿಶೈಲದಿಂದ ಪಾದಯಾತ್ರೆ ಆರಂಭಿಸಿದರು.

ಆದರೆ ಮಂಜುನಾಥ್ ಗೌಡರು ಸುಮಾರು 45 ನಿಮಿಷ ತಡವಾಗಿ ಅಲ್ಲಿಂದಲೇ ಹೊರಟು ಪಾದಯಾತ್ರೆಗೆ ಸೇರಿಕೊಂಡರು. ಮಂಜುನಾಥ ಗೌಡರಿಗೆ ಅನಾರೋಗ್ಯದ ಕಾರಣ‌ ಹೇಳಲಾಗುತ್ತಿದೆ. ಆದರೂ ಕ್ಷೇತ್ರವನ್ನ ಚುನಾವಣೆಯಲ್ಲಿ ಗೆಲ್ಲಲು ಒಗ್ಗಟ್ಟಿನ ಮಂತ್ರ ಅಗತ್ಯ. ಕಾಂಗ್ರೆಸ್ ಈ ಒಗ್ಗಟ್ಟಿನ ಪ್ರದರ್ಶನ ಮಾಡದಿದ್ದರೆ ಕಷ್ನನೇ.

IMG_20220615_104933

ಈ ಕುರಿತು ಮಾಧ್ಯಮಗಳು ವಿಧಾನ ಪರಿಷತ್ ನ ವಿಪಕ್ಷ ನಾಯಕ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ನ ದೊಡ್ಡ ನಾಯಕರು ತೀರ್ಥಹಳ್ಳಿಗೆ ಬಂದಾಗ ಸ್ಥಳೀಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುತ್ತಾರೆ. ನಂತರ ಬೇರೆಯಾಗುತ್ತಾರೆ ಎಂಬ ಪ್ರಶ್ನೆಯನ್ನೂ ಕೇಳಲಾಯಿತು. ಆದರೆ ಸರಿ ಮಾಡುವ ಜವಬ್ದಾರಿಯಿಂದ ಬಿ.ಕೆ ಹರಿಪ್ರಸಾದ್ ನುಣಚಿಕೊಂಡಿದ್ದು, ಹನರೇ ನಮ್ಮ ನಾಯಕರನ್ನ ಸರಿ ಮಾಡ್ತಾರೆ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button