ನೂಫೂರ್ ಶರ್ಮ ಮತ್ತು ನವೀನ್ ಜಿಂದಾಲ್ ಪ್ರಕರಣ ಮುಚ್ಚಲು ಹೆರಾಲ್ಡ್ ಪ್ರಕರಣವನ್ನ ಬಿಜೆಪಿ ಎತ್ತಿಹಿಡಿದಿದೆ-ಹರಿಪ್ರಸಾದ್

ಸುದ್ದಿಲೈವ್. ಕಾಂ/ತೀರ್ಥಹಳ್ಳಿ
ಇತಿಹಾಸವನ್ನು ರಸ್ತೆಯಲ್ಲಿ ಹೋಗುವ ಪೋಕರಿಗಳು ಮಾಡುವಂತದ್ದಲ್ಲ. ಇತಿಹಾಸವನ್ನು ತಜ್ಞರು, ವಿದ್ವಾಂಸರು ರಚಿಸಬೇಕು. ಈಗ ಪಠ್ಯ ಪುಸ್ತಕ ಪರಿಷ್ಕರಣೆ 200 ಕೋಟಿ ಖರ್ಚಾಗಿರಬಹುದು. ಅದು ಮೋದಿಯವರಿಗೆ ದೊಡ್ಡ ಮೊತ್ತವಲ್ಲ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಎಸ್.ಎಲ್ ಭೈರಪ್ಪನವರು ಸರಕಾರಿ ಸಾಹಿತಿಗಳು, ಪರ್ವ ಕಾದಂಬರಿಯ ನಾಟಕಕ್ಕೆ ಎರಡು ಕೋಟಿ ಕೊಟ್ಟರು. ಅದಕ್ಕೂ ಪಠ್ಯ ಪುಸ್ತಕ ಸಮಿತಿಯಿಂದ ಹಣಕ್ಕೂ ಹೋಲಿಸಿದರೆ ಯಾವುದು ದೊಡ್ಡ ಮೊತ್ತವೆಂದು ಗುರುತಿಸಬಹುದು.
ಕಾಂಗ್ರೆಸ್ 70 ವರ್ಷದಿಂದ ಏನು ಮಾಡಿಲ್ಲ ಅಂತಾ ಅನ್ನುವವರು ಮೂರ್ಖರು. ಮೂರ್ಖರ ಪ್ರಶ್ನೆಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ. 70 ವರ್ಷದಲ್ಲಿ ನಾವು ಏನು ಮಾಡಿಲ್ಲ ಅಂದಾದರೆ, ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಯಾವುದೂ ಏಕಾಏಕಿ ಬೆಳೆಯಲು ಸಾಧ್ಯವಿಲ್ಲ. ಇದರಲ್ಲಿ ಕಾಂಗ್ರೆಸ್ ನ ಕೊಡುಗೆ ಇದೆ ಎಂದರು. ನಾವು ಮಾಡಲಿಲ್ಲ ಅಂದ್ರೆ ಅವರು ಆ ರೀತಿ ಹೆಗ್ಗಳಿಕೆ ಸಾಧ್ಯವಾಗುತಿತ್ತಾ ಎಂದರು.
ಗೋ ಮಾಂಸ ಮಾರಾಟದ ಬಗ್ಗೆ ಮಾತನಾಡಿದ ಹರಿಪ್ರಸಾದ್ ಗೋಮಾಂಸ ಮಾಡುವವರೇ ಸಂಘ ಪರಿವಾರದವರು. ಮಕ್ಕಳ ಮೇಲೆ ಧರ್ಮದ ವಿಷ ಬೀಜ ಬಿತ್ತಲಾಗುತ್ತಿದೆ. ಈಗಾಗಿಯೇ ಕರಾವಳಿ ಭಾಗದಲ್ಲಿ ಪರ್ಸಂಟೆಜ್ ಕಡಿಮೆಯಾಗುತ್ತಿದೆ ಎಂದರು.
ನ್ಯಾಷನಲ್ ಹೆರಾಲ್ಡ್ ವಿಷಯದಲ್ಲಿ ಈಡಿ ವಿಚಾರಣೆ ವಿಚಾರ ಮಾತನಾಡಿ ಹೆರಾಲ್ಡ್ ಪ್ರಕರಣ 2017 ರಲ್ಲಿ ಈಡಿ ಕೇಸ್ ಮುಚ್ಚಿ ಹಾಕಿತ್ತು.ನೂಪುರ್ ಶರ್ಮಾ, ನವೀನ್ ಜಿಂದಾಲ್ ಪ್ರಕರಣದ ದಿಕ್ಕು ತಪ್ಪಿಸಲು ಈಡಿ ಮುಂದಿಟ್ಟಿದ್ದಾರೆ.
ಈಡಿ ಐಟಿ ಸಿಬಿಐಗೆ ಕಾಂಗ್ರೆಸ್ ಹೆದರುವುದಿಲ್ಲ.ಕೇಂದ್ರ ಗೃಹ ಸಚಿವರನ್ನು ಸುಪ್ರೀಂ ಕೋರ್ಟ್ ಎರಡು ವರ್ಷ ಗಡಿಪಾರು ಮಾಡಿತ್ತು..ಗುಜರಾತ್ ನಿಂದ ಎರಡು ವರ್ಷ ಗಡಿಪಾರು ಮಾಡಿತ್ತು.lಎಂದು ವಿವರಿಸಿದರು.
