ಸುದ್ದಿ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಯಾವ ರೀತಿ ಸಚಿವರು ಎಂದು ಅವರೇ ಸ್ಪಷ್ಟನೆ ನೀಡಬೇಕು-ಹರಿಪ್ರಸಾದ್

ಸುದ್ದಿಲೈವ್. ಕಾಂ/ತೀರ್ಥಹಳ್ಳಿ

ಶಿಕ್ಷಣ ಸಚಿವರು ನಾಗೇಶ್ ಯಾವ ರೀತಿ ಶಿಕ್ಷಣ ಸಚಿವರು ಅಂತಾ ಅವರೇ ಹೇಳಬೇಕು ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರನ್ನಾಗಿ ರೋಹಿತ್ ಚಕ್ರತೀರ್ಥರನ್ನ ಮೊದಲು ಪ್ರೊಫೆಸರ್ ಅಂದ್ರು, ಆದರೆ ಚಕ್ರತೀರ್ಥ ಅವರೇ ನಾನು ಪ್ರೊಫೆಸರ್ ಅಲ್ಲ ಅಂದರು.

8 ವರ್ಷಾಯ್ತು ಮೋದಿ ಅವರು‌ ಇಂದಿಗೂ ಪದವಿ ಸರ್ಟಿಫಿಕೇಟ್ ಹುಡುಕುತ್ತಿದ್ದಾರೆ.ಬಿಜೆಪಿಯವರು ಬರಿ ಸುಳ್ಳು ಹೇಳುವುದೇ ಆಯ್ತು. ಕುವೆಂಪು ಅವರ ನಾಡಗೀತೆಗೆ ಅಪಮಾನ ಆಗಿದೆ, ಆದರೂ ಚಕ್ರತೀರ್ಥ ಕ್ಷಮೆ ಕೇಳಲು ಸಿದ್ದರಿಲ್ಲ ಎಂದು ಗುಡುಗಿದರು.

ಕುವೆಂಪು ಅವರು ಕಾಂಗ್ರೆಸ್ ಪಕ್ಷದಲ್ಲಿ ಇರಲಿಲ್ಲ. ಗೃಹ ಸಚಿವರು ಕುವೆಂಪು ಅವರಿಗೆ ಆದ ಅಪಮಾನದ ಬಗ್ಗೆ ಮಾತನಾಡಬೇಕಿತ್ತು. ಸಂಘ ಪರಿವಾರದ ಸಿದ್ದಾಂತವನ್ನು ಮಕ್ಕಳ ಮನಸ್ಸಿನಲ್ಲಿ ಹಾಕಲು ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಸಂಘ ಪರಿವಾರದ ಒಬ್ಬನೇ ಒಬ್ಬ ನರಪಿಳ್ಳೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ತತ್ ಕ್ಷಣವೇ ನಿಲ್ಲಿಸಬೇಕು ಆ ಬಗ್ಗೆ ಕಾಂಗ್ರೆಸ್ ಪಕ್ಷಾತೀತವಾಗಿ ಹೋರಾಟ ಮಾಡಲಿದೆ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button