ಜೀನಿ ಮಿಲ್ಲಟ್ ಪ್ರಾಡಕ್ಟ್ ಏಜೆನ್ಸಿಯವನಿಗೆ ಧಮ್ಕಿ

ಸುದ್ದಿ ಲೈವ್. ಕಾಂ/ಶಿವಮೊಗ್ಗ
ಜೀನಿ ಮಿಲ್ಲಟ್ ಪ್ರಾಡಕ್ಟ್ ನ ಜಿಲ್ಲಾ ವಿತರಕ ಕಾಂತರಾಜು ಅವರಿಗೆ ಧಮ್ಕಿ ಹಾಕಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಕಾಂತರಾಜ್ ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗದಲ್ಲಿ ಜೀನಿ ಪ್ರಾಡಕ್ಟ್ ಗಳನ್ನ ಸೇಲ್ ಮಾಡಿಕೊಂಡಿಕೊಂಡು ಬಂದಿರುವುದನ್ನ ಗಮನಿಸಿದ ಸುಧೀರ್ ಎಂಬಾತನು ತಮ್ಮ ಪ್ರಾಡಕ್ಟ್ ಆಗಿರುವ ಡಯಬಿಟಿಸ್ ಹರ್ಬಲ್ ಪ್ರಾಡಕ್ಟ್ ಗಳನ್ನ ವಾಪಾರ ಮಾಡಿಕೊಡುವಂತೆ ಕೇಳಿದ್ದನು. 15 ದಿನದ ಹಿಂದ ಕಾಂತರಾಜುವಿಗೆ ಸುಧೀರ್ ಕರೆ ಮಾಡಿ ಈ ರೀತಿ ಮಾತನಾಡಿದ್ದನು.
ಡಯಾಬಿಟಿಸ್ ಹರ್ಬಲ್ ಪ್ರಾಡಕ್ಟ್ ಗಳನ್ನು ವ್ಯಾಪಾರ ಮಾಡಿಕೊಡಿ ನಿಮಗೆ ಒಳ್ಳೆಯ ಕಮಿಷನ್ ಕೊಡುತ್ತೇನೆ ಎಂದು ಪೋನ್ ನಲ್ಲಿ ತಿಳಿಸಿದ್ದು ಅದಕ್ಕೆ ಕಾಂತರಾಜು ಜೀನಿ ಪ್ರಾಡಕ್ಟ್, ಉತ್ತಮ ರೀತಿಯಲ್ಲಿ ವ್ಯಾಪಾರವಾಗುತ್ತಿದೆ ಯಾವುದಕ್ಕೂ ಸ್ವಲ್ಪದಿನ ಬಿಟ್ಟು ತಿಳಿಸುತ್ತೇನೆ ಅಂತ ತಿಳಿಸಿದ್ದರು. ನಂತರ ಸುಧೀರ್ ಕುದ್ದು ನಮ್ಮ ಮನೆಗೆ ಬಂದು ವ್ಯಾಪಾರ ಮಾಡುವ ಹರ್ಬಲ್ ಪ್ರಾಡಕ್ಟ್ ಗಳನ್ನು ಶಾಂಪಲ್ ಗೆ ಕೊಟ್ಟು ಹೋಗಿದ್ದರು.
ಮೊನ್ನೆ ಸಂಜೆ 07:48 ರ ಸಮಯದಲ್ಲಿ, ಮೊಬೈಲ್ ಕರೆ ಮಾಡಿ ನನ್ನ ಹರ್ಬಲ್ ಪ್ರಾಡಕ್ಟ್ ವ್ಯಾಪಾರದ ಬಗ್ಗೆ ಏನು ಮಾಡಿದೆ ನನ್ನ ಹರ್ಬಲ್ ಪ್ರಾಡಕ್ಟ್ ವ್ಯಾಪಾರದ ಬಗ್ಗೆ ಏನು ಮಾಡಿದೆ ಎಂದು ಕೇಳಿದನು.
ನಾನು ಮಾತನಾಡುವಷ್ಟರ ಆತನು ಅವಾಚ್ಯ ಶಬ್ದಗಳಿಂದ ಬೈದು ಲೇ ಲೋಫರ್ ನನ್ನ ಪೋನ್ ತೆಗೆಯಲಿಕೆ ಎನೋ ಕಷ್ಟ ನಿಂಗೆ ಅಂತ ಬೈದು ನಿನ್ನನ್ನು ಸಿಗಿದು ಹಾಕುತ್ತೇನೆ ನಿನ್ನ ಜೀನಿ ಪ್ರಾಡಕ್ಟ್ ಗಳನ್ನು ಅದು ಹೇಗೆ ಮಾರಾಟ ಮಾಡುತ್ತಿಯೋ ನೋಡುತ್ತೇನೆ ಎಂದು ಧಮ್ಮಿ ಹಾಕಿದ್ದಾನೆ ಎಂದು ಕಾಂತರಾಜು ಎಫ್ಐಆರ್ ನಲ್ಲಿ ಆರೋಪಿಸಿದ್ದಾರೆ.
ನೀನು ಪೋಸ್ಟ್ ಆಫೀಸ್ ನಲ್ಲಿ ಡ್ಯೂಟಿ ಮಾಡುವಾಗ ನೀನು ಯಾರು ರ್ಯಾರಿಗೆಲ್ಲಾ ನಾಮ ಹಾಕಿದ್ದೀಯಾ ನಿನ್ನ ಹಿರಿಸ್ಟರಿ ಎಲ್ಲಾ ನಂಗೆ ಗೊತ್ತು ಅಂತ ಹಾಗೂ ನನಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಕಾಂತರಾಜುರವರ ಅರ್ಜಿ ಸ್ವೀಕರಿಸಿದ ನಂತರ ನ್ಯಾಯಾಲಯದ ಅನುಮತಿ ಪಡೆದು ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
