ಸುದ್ದಿ
ಭಾಷಾಭಿಮಾನಿಗಳು ಎನಿಸಿಕೊಂಡರೂ ಸರಿ ತಮಿಳರ ರೀತಿ ಕನ್ನಡಿಗರು ಆಗಬೇಕು-ಹಂಸಲೇಖ

ಸುದ್ದಿಲೈವ್.ಕಾಂ/ತೀರ್ಥಹಳ್ಳಿ
ಕುಪ್ಪಳ್ಳಿಯಿಂದ ಕನ್ನಡದ ಕಹಳೆ ಆರಂಭವಾಗಿದೆ. ಅಂದು ಗೋಕಾಕ್ ಚಳುವಳಿ ನಡೆದಿತ್ತು. ಇಂದು ಕುಪ್ಪಳ್ಳಿ ಕಹಳೆ ಆರಂಭವಾಗಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ
ಮಾಧ್ಯಮಕ್ಕೆ ಮಾತನಾಡಿದ ಹಂಸಲೇಖ ಕನ್ನಡಕ್ಕೆ ಮಹಾಮನೆ ಕಲ್ಯಾಣ, ಗುರಮನೆ ಕವಿಶೈಲ ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು. ತಮಿಳಿಗರ ರೀತಿ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ನಾವು ಭಾಷಾಂಧರು ಅಂದರೂ ಸರಿನೇ ಅವರನ್ನು ನಾವು ಅನುಸರಿಸಬೇಕು. ಅಲ್ಲಿ ಭಾಷೆಗೆ ಧಕ್ಕೆಯಾದರೆ ಆಳುವವರು, ವಿಪಕ್ಷದವರು ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಇದು ನಾಡಿನಾದ್ಯಂತ ಮೊಳಗಬೇಕು.
ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರ್ನಾಟಕ. ಇವರಿಬ್ಬರಿಗು ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು.ನಮ್ಮದು ನಾಡಗೀತೆ ಅಲ್ಲ, ನಾಡೇ ಒಂದು ಗೀತೆ. ನಾಡೇ ನಮಗೆ ಒಂದು ಧ್ವಜ ಎಂದರು.
ಇವೆರಡಕ್ಕೂ ಅವಮಾನವಾಗಿದೆ. ಕನ್ನಡದ ನಡ ಮುರಿಯುವ ನಡೆ ರಾಜ್ಯದಲ್ಲಿ ಆರಂಭವಾಗಿದೆ.ಹಾಗಾಗಿ ನಿರಂತರವಾಗಿ ಚಳವಳಿ ನಡೆಯಬೇಕು ಎಂದು ಕರೆನೀಡಿದರು.
