ಕ್ರೈಂ

ತವರು ಮನೆಗೆ ಹೋಗ ಬೇಡವೆಂದಿದ್ದ ಪತಿಯ ಮಾತನ್ನ ಉಲ್ಲಂಘಿಸಿ ಹೋದ ಪತ್ನಿಗೆ ಜೀವಬೆದರಿಕೆ

ಸುದ್ದಿಲೈವ್. ಕಾಂ/ಭದ್ರಾವತಿ

ಮಾನಸಿಕ ಹಿಂಸೆ,ದೈಹಿಕ ಕಿರುಕುಳ, ಜೀವಬೆದರಿಕೆ ಹಾಕಿರುವ ಪತಿಯ ವಿರುದ್ಧ ಪತ್ನಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

5 ವರ್ಷದ ಹಿಂದೆ ಸರ್ಕಾರಿ ಕೆಲಸ ಮಾಡಿಕೊಂಡಿರುವ ಮಹಿಳೆ ಬಿಜಾಪುರದ ಉಮೇಶ್ ಎಸ್ ಸೊನ್ನದ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಬೆಂಗಳೂರಿನಲ್ಲಿ ಕ್ಯಾಬ್ ಚಲಾಯಿಸಿ ಕೊಂಡಿದ್ದ ಸೊನ್ನದ್ ನಂತರ ಪತ್ನಿಯೊಂದಿಗೆ ಬಾಳಲು ಭದ್ರಾವತಿ ಹನುಮಂತ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುತ್ತಾರೆ.

ಈ ವೇಳೆ ಪತ್ನಿಗೆ ತವರು ಮನೆಗೆ ಹೋಗದಂತೆ, ಸಂಬಂಧಿಕರೊಂದಿಗೆ ಮಾತನಾಡದಂತೆ ಪತ್ನಿಯನ್ನ ನಿಯಂತ್ರಿಸಲು ಮುಂದಾಗಿದ್ದಾನೆ. ಪ್ರತಿದಿನ ಕುಡಿದು ಬಂದು ಸಣ್ಣಪುಟ್ಟ ವಿಚಾರಕ್ಕೆ ಜಗಳ ತೆಗೆದು ಗಲಾಟೆ ಮಾಡಿ ಪತ್ನಿಯೊಂದಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸಿರುವುದಾಗಿ ಪತ್ನಿ ಆರೋಪಿಸಿದ್ದಾರೆ.

ಮೊನ್ನೆ ತವರು ಮನೆಯಿಂದ ವಾಪಾಸ್ ಮನೆಗೆ ಹೋಗುತ್ತಿದ್ದ ಮಹಿಳೆಗೆ ಬೈಕ್ ನಲ್ಲಿ ಬಂದ ಉಮೇಶ್ ಭದ್ರಾವತಿ ತಾಲೂಕು ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದವರನ್ನ ತಡೆದು ಅವ್ಯಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ.

ಕುಡಿದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ಉಮೇಶ್ ವಿರುದ್ಧ ಮಹಿಳೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button