ಅನ್ನ ದಾಸೋಹದಲ್ಲೂ ಬಿಡದ ವೈಷಮ್ಯ-ಲಕ್ಷಾಂತರ ರೂಗಳ ಲುಕ್ಸಾನು

ಸುದ್ದಿಲೈವ್. ಕಾಂ/ಭದ್ರಾವತಿ
ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ,ಹಣ ಗಳಿಸುವ ಮನೋಭಾವನೆ ಇದ್ದೇ ಇರುತ್ತದೆ. ಇದರಿಂದ ವೈಷಮ್ಯ ಬೆಳೆಯುವುದು ಸಹಜ, ಆದರೆ ಅನ್ನ ದಾಸೋಹದಲ್ಲೂ ಸ್ಪರ್ಧೆ ಬೆಳೆದು ವೈಷಮ್ಯದಿಂದ ಕಚ್ಚಾಡಿರುವ ಘಟನೆ ಎಲ್ಲಾದರೂ ಕೇಳಿದ್ದೀರಾ?
ನೋ ವೇ…, ಚಾನ್ಸೇ ಇಲ್ಲ. ಕೇಳಲು ಸಾಧ್ಯವೇ ಇಲ್ಲ. ಆದರೆ ಭದ್ರಾವತಿ ತಾಲೂಕು ದಾನವಾಡಿ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಅನ್ನ ದಾಸೋಹದಲ್ಲೇ ಸ್ಪರ್ಧೆ ಬೆಳೆದು ಪುಷ್ಕರಣಿಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಸುಮಾರು 1,50,000/- ನಷ್ಟವುಂಟಾಗಿರುವ ಘಟನೆ ವರದಿಯಾಗಿದೆ.
ದಾನವಾಡಿ ಬೆಟ್ಟದಲ್ಲಿ ರಂಗನಾಥ ಸ್ವಾಮಿ ದೇವಸ್ಥಾಮಕ್ಕೆ ಬರುವ ಭಕ್ತರಿಗೆ ಪ್ರತಿಶನಿವಾರ ಅನ್ನ ದಾಸೋಹವನ್ನ ಸುತ್ತಮುತ್ತಲಿನ ಗ್ರಾಮಸ್ಥರ ಸಹಾಯದೊಂದಿಗೆ ಸುಮಾರು ವರ್ಷಗಳಿಂದ ಎಂ.ಎಸ್.ಬಸವರಾಜಪ್ಪ ಎಂಬುವರು ಒಂದು ಶೆಡ್ ನಿರ್ಮಿಸಿಕೊಂಡು ಬರುತ್ತಿದ್ದರು.
ಇವರಿಗೆ ಪ್ರತಿಸ್ಪರ್ಧಿಯಾಗಿ ನಾಗರಾಜ್, ಯೋಗೇಶಪ್ಪ ಮತ್ತು ಮೇಘರಾಜ್ ರವರು ಇವರಿಗೆ ಪ್ರತಿಸ್ಪರ್ಧಿಯಾಗಿ ಇನ್ನೊಂದು ಶೆಡ್ ನಿರ್ಮಿಸಿ ಅನ್ನ ದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ. ಬಸವರಾಜಪ್ಪನವರ ಅನ್ನ ದಾಸೋಹವು ಜನಮನ್ನಣೆ ಪಡೆದಿರುವುದನ್ನ ಸಹಿಸದೆ ನಾಗರಾಜ್, ಯೋಗೇಶಪ್ಪ ಮತ್ತು ಮೇಘರಾಜ್ ನಡೆಸುತ್ತಿರುವುದಾಗಿ ಆರೋಪಿಸಲಾಗಿದೆ.
ಇತ್ತೀಚೆಗೆ ಅನ್ನ ದಾಸೋಹ ನಡೆಸುತ್ತಿರುವ ವೇಳೆ ನಾಗರಾಜ್, ಯೋಗೇಶಪ್ಪ ಮತ್ತು ಮೇಘರಾಜ್ ಮೂವರು ಬಸವರಾಜಪ್ಪನವರೊಂದಿಗೆ ಜಗಳಕ್ಕೆ ಬಿದ್ದು ಇಲ್ಲಿ ಯಾರ ಅಪ್ಪಣೆ ಪಡೆದು ಶೆಡ್ ಹಾಕಿದ್ದೀಯ ಎಂದು ಅವ್ಯಚ್ಯ ಶಬ್ದಗಳಿಂದ ಬೈದಾಡಿ ಶೆಡ್ ನ್ನ ನಾಶಪಡಿಸಿರುತ್ತಾರೆ. ಇದರಿಂದ 1 ಲಕ್ಷ ರೂ ಶೆಡ್ ಹಾಳಾಗಿರುವುದಾಗಿ ಬಸವರಾಜ್ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿ ಪಡಿಸಲು ಎನ್ ಆರ್ ಐ ಜಿ ಕಾಮಗಾರಿಗಾಗಿ ತಂದಿರಲಾಗಿದ್ದ 20 ಚೀಲ ಸಿಮೆಂಟ್, ಪುಷ್ಕರಣಿಯ ನೀರು ತೆಗೆಯಲು ಅಳವಡಿಸಿರುವ ಮೋಟಾರು, ಹಾರೆಗಳು,ಪುಟ್ಟಿಗಳು ಸೇರಿ 1,50,000/- ರೂ ಹಣ ಲುಕ್ಸನ್ ಮಾಡಿದ್ದಾರೆ ಎಂದು ಬಸವರಾಜ್ ಭದ್ರಾವತಿ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
