ತಾಲ್ಲೂಕು ಸುದ್ದಿ

ಮೌಲ್ಯಗಳು ಪ್ರಾಯೋಗಿಕವಾಗಿ ಜಾರಿಗೆ ಬರಬೇಕು :ವಿಖ್ಯಾತಾನಂದ ಶ್ರೀಗಳು

ಸುದ್ದಿಲೈವ್. ಕಾಂ/ಸಾಗರ

ಕಂದಾಚಾರದಲ್ಲಿ ಮುಳುಗಿದ್ದ ಹಿಂದೂ ಧರ್ಮದ ಮನೋಕ್ಲೇಷಗಳ ವಿರುದ್ಧ ಹೋರಾಟ ನಡೆಸುವುದಕ್ಕೆ ಪರ್ಯಾಯ ದೇವರನ್ನ ಸೃಷ್ಟಿಸಿ ತಳ ಸಮುದಾಯಗಳ ಪ್ರಜ್ಞಾವಂತಿಕೆಗೆ ಕಾರಣವಾದ ನಾರಾಯಣ ಗುರುಗಳು ನಿಜದಲ್ಲಿ ರಕ್ಷಿಸಿದರು ಎಂದು ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿಗಳು ನುಡಿದರು

ತಾಲೂಕಿನ ಸಿಗಂದೂರು ದೇವಾಲಯದ ಸಭಾಂಗಣದಲ್ಲಿ ಹಳೇಪೈಕ ದೀವರು ಸಾಂಸ್ಕೃತಿಕ ಸಂವಾದ ಬಳಗ ಮತ್ತು ಸಿಗಂದೂರು ಚೌಡಮ್ಮದೇವಿ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ ನಾರಾಯಣ ಗುರುಗಳ ಚಿಂತನೆಗಳ ವಿಚಾರ ಕಮ್ಮಟದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು

ಸಮಾಜದಲ್ಲಿ ಮೌಲ್ಯಗಳು ಕೇವಲ ಭಾಷಣ ವಿಚಾರಸಂಕೀರ್ಣಕ್ಕೆ ಸೀಮಿತವಾಗದೇ ಪ್ರಾಯೋಗಿಕವಾಗಿ ಜಾರಿಗೆ ಬರಬೇಕು ಆಗ ಮಾತ್ರ ಸಮಾಜ ಪರಿವರ್ತನೆಯ ಹೆಜ್ಜೆಗಳು ಸುಲಭವಾಗುತ್ತವೆ ಈ ನಿಟ್ಟಿನಲ್ಲಿ ಯುವ ಜನತೆ ನಾರಾಯಣ ಗುರುಗಳ ಮೌಲ್ಯಗಳನ್ನ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು

ಸಮುದಾಯ ಒಂದು ಕೇವಲ ಹಣ ಸಂಪಾದಿಸುವ ಕೌಶಲ್ಯವನ್ನು ರೂಡಿಸಿಕೊಂಡರೆ ಮಾತ್ರ ಸಾಲದು ಬದಲಾಗಿ ಸಮುದಾಯದ ಧಮನಿತ ಜನಗಳ ಬಗ್ಗೆ ತಾಯಿ ಪ್ರೀತಿಯ ಜೊತೆಗೆ ಅವರ ಶೈಕ್ಷಣಿಕ ಔದ್ಯೋಗಿಕ ಉನ್ನತಿಗಾಗಿ ಶ್ರಮಿಸಬೇಕು ಆಗ ಮಾತ್ರ ಸಮುದಾಯದ ಸರ್ವತೋಮುಖ ಪ್ರಗತಿ ಸಾಧಿಸಲು ಸಾಧ್ಯವೆಂದರು

ಮೀಸಲಾತಿಯು ನಮ್ಮ ಸಮುದಾಯಗಳಿಗೆ ಸಂವಿಧಾನದ ಅವಕಾಶಗಳಾಗಿದ್ದು ಮೀಸಲಾತಿಯನ್ನ ಮೀರಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸುವ ಎಲ್ಲಾ ಕೌಶಲ್ಯವನ್ನು ಭವಿಷ್ಯದಲ್ಲಿ ಗಳಿಸಲು ಸೋಲೂರು ಮಠ ಉಳಿದ ಮಠಗಳ ಸಖ್ಯದಲ್ಲಿ ಯೋಜನೆ ರೂಪಿಸುತ್ತದೆ ಎಂದರು

ಈಚೆಗೆ ದ್ವೀಪದಲ್ಲಿ ಸರಳವಾಗಿ ವಿವಾಹವಾದ ಸಮುದಾಯದ ಗಣೇಶ್ ಮೂಕಾಂಬಿಕಾ ದಂಪತಿಗಳು ಸಂವಿಧಾನದ ಪೀಠಿಕೆ ಓದಿ ವಿವಾಹವಾದ ನಡೆಯ ಬಗ್ಗೆ ಅವರು ಮೆಚ್ಚುಗೆ ಸೂಚಿಸಿ ಸನ್ಮಾನಿಸಿದರು ಎರಡು ಮೂರು ದಿನಗಳಕಾಲ ಮದುವೆ ಸಮಾರಂಭ ನಡೆಸಿ ಆರ್ಥಿಕ ದುಂದುಗಾರಿಕೆಯನ್ನ ನಡೆಸುವ‌ ಸುತ್ತಲ ಸಮಾಜದ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಗೌರವ ಉಪಸ್ಥಿತಿ ಇದ್ದ ಸಿಗಂದೂರಿನ ದರ್ಮದರ್ಶಿಗಳಾದ ಶ್ರೀ ಎಸ್ ರಾಮಪ್ಪನವರು ನಿರಂತರ ಪರಿಶ್ರಮದಿಂದ ಗುರಿಯೊಂದನ್ನು ಇಟ್ಟುಕೊಂಡು ದುಡಿದಾಗ ಯಶಸ್ಸಿನ ತುತ್ತತುದಿ ತಲುಪಲು ಸಾಧ್ಯ ಸಿಗಂದೂರು ದೇವಾಲಯ ಜನತಾ ದೇವಾಲಯ ಆಗಿ ಬೆಳೆಯಲು ತಮ್ಮ ಪರಿಶ್ರಮದ ಜೊತೆಗೆ ಜನರ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಎರಡೆರಡು ಭಾರಿ ಮುಳಗಡೆಯಾಗಿರುವ ಹಿನ್ನೀರಿನ ಪ್ರದೇಶವು ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ವಿವಿಧ ಜನವಿರೋಧಿ ಯೋಜನೆಗಳಿಂದ ಪುನಃ ಸಂಕಟಕ್ಕೆ ಸಿಲುಕುತಿದ್ದು ಜನಸಾಮಾನ್ಯರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದರು , ಜನರು ಎಚ್ಚರದಿಂದ ಇದ್ದು ತಮ್ಮ ಸುತ್ತಮುತ್ತಲು ಇರುವ ವಿದ್ಯಮಾನಗಳನ್ನು ಗ್ರಹಿಸಬೇಕು , ನೆಲಕ್ಕೆ ಆಗುವ ಅನ್ಯಾಯಗಳ ವಿರುದ್ಧ ಸಂಘಟಿತವಾದ ಹೋರಾಟವನ್ನು ಜಾತಿ ಧರ್ಮ ಪಕ್ಷದ ಎಲ್ಲೆ ಮೀರಿ ಪ್ರತಿಭಟಿಸಿ ಬೇಕು ಎಂದರು

ಸಂವಾದ ಬಳಗದ ಪ್ರಮುಖರಾದ ನಾಗರಾಜ್ ನೇರಿಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು ಡಾ ಶೈಲಜ ಮತ್ತು ಡಾ‌.ಮೀನಾಕ್ಷಿ ರಾಮಚಂದ್ರ ಅವರು ನಾರಾಯಣ ಗುರುಗಳ ಕುರಿತು ವಿಷಯ ಮಂಡಿಸಿದರು ವೇದಿಕೆಯಲ್ಲಿ ಅರವಿಂದ ಕರ್ಕಿಕುಡಿ , ಶ್ರಿಧರ್ ಈಳೂರು , ಉಪಸ್ಥಿತರಿದ್ದರು ಅಣ್ಣಪ್ಪ ಮಳೀಮಠ್ ನಿರೂಪಿಸಿದರು ಪರಶುರಾಮ ವಂದಿಸಿದರು

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button