ಶಿಕ್ಷಣ

ಖೇಲೋ ಇಂಡಿಯಾ ಕೇಂದ್ರಕ್ಕೆ ಹಾಗೂ ಡಿಪ್ಲಾಮಾ ಕೋರ್ಸ್ ಗೆ ಅರ್ಜಿ ಆಹ್ವಾನ

ಸುದ್ದಿಲೈವ್. ಕಾಂ/ಶಿವಮೊಗ್ಗ

ಕೇಂದ್ರ ಪುರಸ್ಕøತ ಖೇಲೋ ಇಂಡಿಯಾ ಯೋಜನೆಯಡಿ ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡೆಗೆ ಸಂಬಂಧಿಸಿದಂತೆ ಖೇಲೋ ಇಂಡಿಯಾ ಕೇಂದ್ರವನ್ನು ಪ್ರಾರಂಭಿಸಿದ್ದು, 12 ರಿಂದ 18 ವರ್ಷಗಳೊಳಗಿನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ದಿ: 20/06/2022 ರೊಳಗಾಗಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-223328 ನ್ನು ಸಂಪರ್ಕಿಸುವುದು

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಆಹ್ವಾನ

2022-23ನೇ ಸಾಲಿಗೆ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್ ಕಲಿಕೆಗಾಗಿ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಗದಗ-ಬೆಟಗೇರಿ-22 ಅಭ್ಯರ್ಥಿಗಳು, ತಮಿಳುನಾಡಿನ ಸೇಲಂ-17 ಅಭ್ಯರ್ಥಿಗಳು, ಆಂದ್ರಪ್ರದೇಶದ ನಲ್ಲೂರು ಜಿಲ್ಲೆಯ ಎಸ್.ಪಿ.ಕೆ.ಎಂ.-03 ಅಭ್ಯರ್ಥಿಗಳು, ಹಾಗೂ ಕೇರಳದ ಕಣ್ಣೂರು -02 ಅಭ್ಯರ್ಥಿಗಳಿಗೆ ಅವಕಾಶವಿದ್ದು, ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯಾ ಡಿಪ್ಲೊಮಾ ಸಂಸ್ಥೆಗಳಲ್ಲಿ ಕೋರ್ಸ್ ಪ್ರವೇಶ ಕುರಿತಂತೆ ಕೌನ್ಸಿಲಿಂಗ್‍ಗಾಗಿ ಕರೆಯಲಾಗುವುದು. ಆಯ್ಕೆಯಾದ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ. 2,500/- ರಂತೆ ಶಿಷ್ಯವೇತನ ಹಾಗೂ ಪುರುಷ ಅಭ್ಯರ್ಥಿಗಳಿಗೆ ವಸತಿನಿಲಯದ ವ್ಯವಸ್ಥೆಯನ್ನು ಹಣ ಪಾವತಿಸುವ ಆಧಾರದ ಮೇಲೆ ಕಲ್ಪಿಸಲಾಗುವುದು.

ಆಸಕ್ತರು ನಿಗಧಿತ ನಮೂನೆ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ 080-23561628/23566082/23568223 ಗಳನ್ನು ಅಥವಾ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಗದಗ್ (08372-297221) ಅಥವಾ ಆಯಾ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಶಿವಮೊಗ್ಗ (08182-223405) ಸಂಪರ್ಕಿಸುವುದು. ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ದಿ: 20/06/2022 ರೊಳಗಾಗಿ ಪ್ರಾಂಶುಪಾಲರು, ಕ.ಕೈ.ತಂ.ಸಂ. ನರಸಾಪುರ, ಗದಗ-582102 ಇವರಿಗೆ ಸಲ್ಲಿಸುವಂತೆ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button