ಸ್ಥಳೀಯ ಸುದ್ದಿಗಳು
ಸಿಮ್ಸ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ಒಂದು ಗಂಟೆ ಯೋಗ ತರಬೇತಿ

ಸುದ್ದಿಲೈವ್. ಕಾಂ/ಶಿವಮೊಗ್ಗ
ಸಿಮ್ಸ್ ನ ವಿದ್ಯಾರ್ಥಿಗಳಿಗೆ ಇಂದಿನಿಂದ ಒಂದು ಗಂಟೆಗಳ ಯೋಗ ತರಬೇತಿ ಆರಂಭವಾಗಿದೆ. ಯೋಗಾಸನದ ಭಂಗಿ ಮಾಡುವ ಮೂಲಕ ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ಭಾಗಿಯಾದರು.
ಭಾರತೀಯ ವೈದ್ಯಕೀಯ ಪರಿಷತ್ 2021-22 ನೇ ಸಾಲಿನಿಂದ ವೈದ್ಯಕೀಯ ಶಿಕ್ಷಣದಲ್ಲಿ ಯೋಗವನ್ನು ಪ್ರತಿದಿನ ಒಂದು ಗಂಟೆಯಂತೆ ಹತ್ತು ದಿನಗಳ ಕಾಲ ತರಬೇತಿಯನ್ನು ಕಡ್ಡಾಯಗೊಳಿಸಿದ.
ಈ ಹಿನ್ನಲೆಯಲ್ಲಿ ತರಬೇತಿಯನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪರೀಕ್ಷಾ ಕೊಠಡಿಯಲ್ಲಿ ನಿನ್ನೆ ನಡೆದ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕರಾದ ಡಾ|| ಓ ಎಸ್ ಸಿದ್ದಪ್ಪ ಇವರು ಉದ್ಘಾಟಿಸಿದರು. ಪ್ರಾಂಶುಪಾಲರಾದ ಡಾ||ಮಂಜುನಾಥ್ ಮತ್ತು ಜಿಲ್ಲಾ ಸರ್ಜನ್ ರಾದ ಡಾ|| ಸಿದ್ದನಗೌಡ ಪಾಟೀಲ್ ಹಾಜರಿದ್ದರು.
