ಕ್ರೈಂ
ಕಿಯಾ ಶೋರೂಮ್ ಬಳಿ ಹಿಟ್ ಅಂಡ್ ರನ್ ಪ್ರಕರಣ

ಸುದ್ದಿಲೈವ್. ಕಾಂ/ಶಿವಮೊಗ್ಗ
ಶಿವಮೊಗ್ಗದ ಕಿಯಾ ಶೋರೂಂನಲ್ಲಿ ಹಿಟ್ ರನ್ ಪ್ರಕರಣ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರನ ತಲೆಗೆ ತೀವ್ರ ಪೆಟ್ಟಾಗಿದೆ.
ಸಂದೇಶ್ ಮೋಟಾರ್ ಕಡೆಯಿಂದ ಬಂದ ಯಮಹಾ ಎಫ್ ಟಿಆರ್ ಬೈಕ್ ಎಂಆರ್ ಎಸ್ ಕಡೆ ಹೋಗುತ್ತಿದ್ದ ವೇಳೆ ಕಿಯಾ ಶೋರೂಮ್ ಬಳಿ ಕಾರೊಂದು ದಿಡೀರ್ ನೇ ಯು ಟರ್ನ್ ತೆಗೆದುಕೊಂಡಿದೆ.
ಯೂ ಟರ್ನ್ ತೆಗೆದುಕೊಳ್ಳುವ ವೇಳೆ ಕಾರು ಬೈಕ್ ಗೆ ಗುದ್ದಿ ಪರಾರಿಯಾಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ಇದೊಂದು ಹಿಟ್ಅಂಡ್ ರನ್ ಪ್ರಕರಣ ಎಂದು ಹೇಳಲಾಗುತ್ತಿದೆ.
ಈ ಅಪಘಾತದಲ್ಲಿ ಬೈಕ್ ಸವಾರನಿಗೆ ತೀವ್ರ ಗಾಯಗಳಾಗಿದೆ ಎಂದು ಹೇಳಲಾಗುತ್ತಿದೆ. ಗಾಯಗೊಂಡವರನ್ನ ಹೊಳಲೂರಿನ ವಾಸಿಂ ಖಾನ್ (26) ಎಂದು ಗುರುತಿಸಲಾಗಿದೆ. ಮೆಗ್ಗಾನ್ ಗೆ ದಾಖಲಿಸಲಾಗಿದೆ.
