ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಆರೋಗ್ಯ ಅಧಿಕಾರಿಗಳು

ಸುದ್ದಿಲೈವ್. ಕಾಂ/ಮೈದೊಳಲು
ಮೈದೊಳಲಿನಲ್ಲಿ ಕಳೆದೆರಡು ದಿನಗಳಿಂದ ವಾಂತಿ ಬೇದಿ, ಜ್ವರ ಸುಸ್ತು ಪ್ರಕರಣಗಳು ಹೆಚ್ಚಾಗುತ್ತಿದು, ತಾಲೂಕು ವೈದ್ಯಾಧಿಕಾರಿಗಳ ತಂಡ ಮೈದೊಳಲು ಗ್ರಾಮದ ಕೆಲ ಮನೆಗಳಿಗೆ ಬೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿ ಔಷಧಿಗಳನ್ನು ವಿತರಿಸಿದರು.
ಮೈದೊಳಲಿನ ಕೆಲ ಬೀದಿಗಳಲ್ಲಿ ವಾಂತಿ ಬೇದಿ ಪ್ರಕರಣಗಳು ದಿಢೀರ್ ಹೆಚ್ಚಾದ ಹಿನ್ನೆಲೆ ತಾಲೂಕು ವೈದ್ಯಾಧಿಕಾರಿ ಅಶೋಕ್ ನೆತೃತ್ವದ ತಂಡ ಗ್ರಾಮದಲ್ಲಿ ಸರ್ವೆ ನಡೆಸಿ ರೋಗಿಗಳ ಆರೋಗ್ಯ ಹಾಗೂ ಔಷದೋಪಚಾರದ ಬಗ್ಗೆ ಶುಶೃಕಿಯರಿಂದ ಮಾಹಿತಿ ಪಡೆದು ಅಸ್ವಸ್ಥರಾದವರ ಮನೆಗಳಿಗೆ ಬೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಕಳೆದ ಶನಿವಾರದಿಂದ ಹೊಟ್ಟೆ ನೋವು ಬೇದಿ ಯಿಂದ 60 ಕ್ಕೂ ಹೆಚ್ಚು ಜನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಭಾನುವಾರ ಮಲ್ಲಾಪುರ ಹಾಗೂ ಆನವೇರಿಯ ಖಾಸಗಿ ಕ್ಲಿನಿಕ್ಗಳಲ್ಲಿ 150 ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದಿದ್ದಾರೆ. ತೀರಾ ಅಸ್ವಸ್ಥರಾದ 4-5 ಜನ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ತಾಲೂಕು ವೈದ್ಯಾಧಿಕಾರಿ ಅಶೋಕ್ ಮೈದೊಳಲಿನ ಕುಡಿಯುವ ನೀರಿನ ಮೂಲಗಳನ್ನು ಗ್ರಾಪಂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ರಾಜಭಕ್ಷವಾಲಿ ದೇವಸ್ಥಾನದ ಹಿಂಭಾಗದ ಟ್ಯಾಂಕ್ ನಿಂದ ಬಿಡುವ ನೀರು ಕುಡಿದವರ ಆರೋಗ್ಯದಲ್ಲಿ ಏರುಪೇರಾಗಿದೆ. ಟ್ಯಾಂಕ್ ಪರೀಶಿಲಿಸಿದಾಗ ಟ್ಯಾಂಕ್ನ ವಾಲ್ನಲ್ಲಿ ಉಂಟಾಗಿದ ಪ್ಯಾಚ್ನಿಂದ ತ್ಯಾಜ್ಯ ನೀರು ಟ್ಯಾಂಕ್ ಸೇರಿರಬಹುದು ಎಂದು ಶಂಕಿಸಿ ಇನ್ನೆರಡು ದಿನ ಟ್ಯಾಂಕ್ನಿAದ ನಳಗಳಿಗೆ ನೀರು ಹರಿಸದಂತೆ ಹೇಳಿದರು.
ಅಲ್ಲದೆ ಗ್ರಾಮದ ನೀರಿನ ಮೂಲಗಳನ್ನು ಖುದ್ದಾಗಿ ಪರಿಶೀಲಿಸಿ ಕೊಳವೆ ಬಾವಿಗಳ ನೀರಿನ ಸ್ಯಾಂಪಲ್ಅನ್ನು ಪರೀಕ್ಷೆಗೆ ಕಳಿಸುವಂತೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ತಿಳಿಸಿದರು.
ಕಳೆದ ಮಂಗಳವಾರ ಬುಧವಾರ ಮೈದೊಳಲಿನಲ್ಲಿ ಹಬ್ಬ ನಡೆದ ಪ್ರಯುಕ್ತ ಗ್ರಾಪಂ ಎರಡ್ಮೂರು ಕೊಳವೆ ಬಾವಿಗಳ ನೀರನ್ನು ಒಟ್ಟಿಗೆ ಸೇರಿಸಿ ಸರಬರಾಜು ಮಾಡಿದರಿಂದ ಗ್ರಾಮಸ್ಥರಲ್ಲಿ ಅನಾರೋಗ್ಯ ಉಂಟಾಗಿದೆ. ಗ್ರಾಪಂನ ಅವ್ಶೆಜ್ಞಾನಿಕ ನೀರು ನಿರ್ವಹಣೆಯಿಂದಲೆ ಶೀತಜ್ವರ, ವಾಂತಿಬೇದಿ ಪ್ರಕರಣಗಳು ಹೆಚ್ಚಾದವು.
ಕಳೆದ ಮೂರು ವರ್ಷಗಳ ಹಿಂದೆ ಕಲುಶೀತ ನೀರು ಸೇವನೆಯಿಂದ ಉಂಟಾಗಿದ ಕಾಲರಕ್ಕೆ ತುತ್ತಾಗಿ ಗ್ರಾಮದಲ್ಲಿ ಸಾವು ನೋವುಗಳು ಸಂಭವಿಸಿದರು ಗ್ರಾಪಂ ಎಚ್ಚೆತ್ತುಕೊಂಡಿಲ್ಲ ಎಂದು ಕೆಲ ಗ್ರಾಮಸ್ಥರು ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಪರೀಶಿಲನೆಗೆ ಬಂದ ಗ್ರಾಪಂ ಸಿಬ್ಬಂದಿಗಳನ್ನು ತಿರ್ವವಾಗಿ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತ ಪಡಿಸಿದರು.
