ಸ್ಥಳೀಯ ಸುದ್ದಿಗಳು
ಕಲೂಷಿತ ನೀರು ಪೂರೈಕೆ ವಿರುದ್ಧ ಹನುಮಂತ ನಗರ ನಿವಾಸಿಗಳ ಪ್ರತಿಭಟನೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಮಹಾನಗರ ಪಾಲಿಕೆಯಿಂದ ಕಲುಷಿತ ನೀರು ಪೂರೈಸುತ್ತಿದೆ ಎಙದು ಆರೋಪಿಸಿಸಿ ಹನುಮಂತನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಕಲುಷಿತ ನೀರು ಪೂರೈಕೆ ಖಂಡಿಸಿ, ಹನುಮಂತನಗರ ನಿವಾಸಿಗಳಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ವೇಳೆ ನೀರಿನ ಪೈಪ್ ಹೊಡೆದು ಕಲುಷಿತ ನೀರು ಮಿಶ್ರಣದ ನೀರು ಪೂರೈಸಲಾಗುತ್ತಿದೆ ಎಂದು ಪ್ರತಿಭಟಿಸಲಾಯಿತು.
ಪೈಪ್ ದುರಸ್ಥಿಗೊಳಿಸದೇ ಕಲುಷಿತ ನೀರನ್ನೇ ಪೂರೈಕೆ ಮಾಡುತ್ತಿರುವ ಮಹಾನಗರ ಪಾಲಿಕೆ ಸಿಬ್ಬಂದಿಗಳು ಶುದ್ದ ನೀರು ಪೂರೈಕೆ ಮಾಡುವಂತೆ ಸ್ಥಳೀಯರು ಆಗ್ರಹಿಸಿ ಪ್ರತಿಭಟಿಸಿದರು.
ಖಾಲಿ ಕೊಡ ಹಿಡಿದು, ರಸ್ತೆ ತಡೆ ನಡೆಸಿ ಪಾಲಿಕೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು
