ಸ್ಥಳೀಯ ಸುದ್ದಿಗಳು

ನವೀಕರಿಸದ ಸಂಘ ಸಂಸ್ಥೆಗಳ ದಂಡ ಸಹಿತ ನವೀಕರಣಕ್ಕೆ ಅವಕಾಶ

ಸುದ್ದಿಲೈವ್. ಕಾಂ/ಶಿವಮೊಗ್ಗ

ಜಿಲ್ಲಾ ಸಹಕಾರ ಇಲಾಖೆಯು ಜಿಲ್ಲೆಯಲ್ಲಿನ ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆ 1960ರಡಿ 5 ವರ್ಷಗಳಿಗೂ ಮೇಲ್ಪಟ್ಟು ನವೀಕರಿಸದೇ/ಫೈಲಿಂಗ್ ಮಾಡದೇ ಇರುವ ಸಂಘ ಸಂಸ್ಥೆಗಳ ಸದಸ್ಯರ ಹಿತದೃಷ್ಠಿಯಿಂದ ಪ್ರತಿ ವರ್ಷಕ್ಕೆ ರೂ. 2000/-ಗಳ ಹೆಚ್ಚುವರಿ ದಂಡ ಪಾವತಿಸಿ ನವೀಕರಣ/ಫೈಲಿಂಗ್ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾವಿದೆ.

ದಿ: 31/12/2022ರವರೆಗೆ ಅವಕಾಶ ನೀಡಲಾಗಿದ್ದು, ನೋಂದಣಿ ಬಾಕಿಯಿರುವ ಸಂಘ ಸಂಸ್ಥೆಗಳು ತಮ್ಮ ಸಂಘದ ದಾಖಲೆ ಮತ್ತು ಮಾಹಿತಿಗಳೊಂದಿಗೆ ಜಿಲ್ಲಾ ನೋಂದಣಾಧಿಕಾರಿಗಳ ಹಾಗೂ ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ಕಚೇರಿಯಲ್ಲಿ ಫೈಲಿಂಗ್ ಮಾಡುವಂತೆ ಸಂಘಗಳ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button