ಕ್ರೈಂ

ಬೊಮ್ಮನ್ ಕಟ್ಟೆ ಕೆರೆಯಲ್ಲಿ ಮಹಿಳೆಯ ಮೃತದೇಹಪತ್ತೆ

ಸುದ್ದಿಲೈವ್. ಕಾಂ/ಶಿವಮೊಗ್ಗ

ಬೊಮ್ಮನ್ ಕಟ್ಟೆ ಕೆರೆಯಲ್ಲಿ 39 ವರ್ಷದ ಮಹಿಳೆಯ ಮೃತ ದೇಹವೊಂದು ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹವನ್ನ ಮಮತ ಎಂದು ಗುರುತಿಸಲಾಗಿದೆ. ಮೊನ್ನೆ ಶನಿವಾರ ಸಂಜೆ ಮಮತ ಕೆರೆಗೆ ಹಾರಿದ್ದರು. ಮೃತರ ಕುಟುಂಬ ಸಂಬಂಧಿಕರ ಮನೆಗೆ ಹೋಗಿರಬಹುದು ಬರಬಹುದು ಎಂದು ತಿಳಿದಿದ್ದರು.

ಆದರೆ ಇಂದು ಕೆರೆಯಲ್ಲಿ ಅವರ ಮೃತದೇಹಪತ್ತೆಯಾಗಿದೆ. ಅಗ್ನಿಶಾಮಕದಳ ಮತ್ತು ವಿನೋಬನಗರ ಪೊಲೀಸರು ಮೃತದೇಹವನ್ನ ಕೆರೆಯಿಂದ ಹೊರತೆಗೆದಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಮಮತ ಹೀಗೆ ಮಾಡಿಕೊಂಡಿರಬಹುದು ಎಙದು ಕುಟುಂಬ ದೂರುತ್ತಿದೆ.

ಬೊಮ್ಮನ್ ಕಟ್ಟೆಯ ಎ ಬ್ಲಾಕ್ ನ ಲಕ್ಷ್ಮಣ ಆಚಾರ್ ಎಂಬುವರ ಪತ್ನಿ ಮಮತ ಎಂದು ಗುರುತಿಸಲಾಗಿದೆ. ಪ್ರಕರಣ ವಿನೋಬನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button