ಎರಡು ಪ್ರತ್ಯೇಕ ಪ್ರಕರಣ ಎರಡು ಬೈಕ್ ಕಳವು!

ಸುದ್ದಿಲೈವ್.ಕಾಂ/ಶಿವಮೊಗ್ಗ
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಬೈಕ್ ಕಳುವು ಆಗಿರುವ ಘಟನೆ ವರದಿಯಾಗಿದೆ. ಒಂದು ಸ್ಪೆಂಡರ್ ಪ್ಲಸ್ ಮತ್ತು ಡಿಸ್ಕವರಿ ಪ್ಲಾಟಿನಂ ಬೈಕ್ ಕಳುವಾಗಿರುವುದು ದೊಡ್ಡ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ದುರ್ಗಾಂಬಾ ವಸ್ ಚಾಲಕರಾಗಿರುವ ವಾಸುಕಿ ಪ್ರಸಾದ್ ತಮ್ಮಮನೆಯ ಮುಂದೆ ನಿಲ್ಲಿಸಿದ್ದ ಕೆ.ಎ 14 ಇಯು 0897 ಕ್ರಮ ಸಂಖ್ಯೆಯ ಬಜಾಜ್ ಪ್ಲಾಟಿನಾ 100 ಸಿಸಿ ಬೈಕ್ ನ್ನ ಕಳುವು ಮಾಡಿರುವುದಾಗಿ ದೂರು ದಾಖಲಿಸಿದ್ದರಾ. ಇವರ ವಾಹನ ಜೂ.3 ರಂದು ರಾತ್ರಿ ಕಳವಾಗಿದೆ.
ಅದರಂತೆ ಯುನಿಟಿ ಹಾಸ್ಪಿಟಲ್ ನಲ್ಲಿ ಫಾರ್ಮಾ ಏಡ್ ಆಗಿ ಕೆಲಸ ಮಾಡಿಕೊಂಡಿದ್ದ ಮಡಿಕೆ ಚೀಲೂರಿನ ಲಿಂಗರಾಜು ಎಂಬುವರ KA 14 EU 7862 ಕ್ರಮ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ವಾಹನ ಕಳವಾಗಿದೆ.
ಆಸ್ಪತ್ರೆಯ ಮುಂಭಾಗದಲ್ಲಿ ವಾಹನ ಪಾರ್ಕ್ ಮಾಡಿ ಕೆಲಸಕ್ಕೆ ಹೋದಾಗ ಈ ಘಟನೆ ನಡೆದಿದೆ. ಅವರ ವಾಹನ ಕಳವಾಗಿರುವುದು ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜೂ.6 ರಂದು ಸಂಜೆ 4-40 ರ ಸಮಯದಲ್ಲಿ ಅಪರಿಚಿತನೊಬ್ಬ ವಾಹನ ಕಳವು ಮಾಡಿರುವುದು ಸಿಸಿ ಟಿವಿಯಿಂದ ಪತ್ತೆಯಾಗಿದೆ. ಲಿಂಗರಾಜು ದೂರು ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ದೊಡ್ಡಪೇಟೆ ಪೊಲೀಸರು ಬಲೆ ಬೀಸಿದ್ದಾರೆ.
