ಇನ್ನೇನು ಜಾಮೀನು ಅರ್ಜಿ ಹಾಕಿ ಬೇಲ್ ಪಡೆಯಲು ಸಿದ್ದನಾಗಿದ್ದ ಕೋಬ್ರಾನನ್ನ ಮಾಳೂರು ಪಿಐ ಹಿಡಿದಿದ್ದು ಹೇಗೆ
ನವೀನ್ ಕುಮಾರ್ ಮಠಪತಿಯ ನೇತೃತ್ಬದಲ್ಲಿ ಭರ್ಜರಿಭೇಟೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ಮುಡುಬಾ ಚೌಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನಾಲ್ವರು ಮೀನುಗಾರರಿಗೆ ಮಾರಣಾಙತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ನಿಹಾಲ್ ಕೋಬ್ರಾ ಅಂಡ್ ಗ್ಯಾಂಗ್ ನನ್ನ ಮಾಳೂರು ಪೊಲೀಸರು ಬಂಧಿಸಿದ್ದಾರೆ.
ಮಹಿಷಿಯಲ್ಲಿ ಮೀನು ಹಿಡಿಯಲು ಬಲೆ ಹಾಕಿ ವಾಪಾಸ್ ತೀರ್ಥಹಳ್ಳಿಗೆ ಹೋಗುವಾಗ ಸಿಕೆ ರಸ್ತೆಯ ಸೊಸೈಟಿಯ ಮುಂಭಾಗ ರಸ್ತೆಯ ಮಧ್ಯೆ ಕಾರು ನಿಲ್ಲಿಸಿಕೊಂಡಿದ್ದ ರೌಡಿ ಶೀಟರ್ ನಿಹಾಲ್ ಕೋಬ್ರಾ ಮತ್ತು ತಂಡ ರಸ್ತೆಯಲ್ಲಿ ಬರುತ್ತಿದ್ದ ಮೀನುಗಾರರಿಗೆ ಅಡ್ಡಲಾಗಿ ವಾಹನ ನಿಲ್ಲಿಸಿಕೊಂಡಿದ್ದರು.
ಸೈಡ್ ಕೊಡಿ ಎಂದು ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೋಬ್ರಾ ಮತ್ತು ಆತನ ತಂಡ ಸಿನಿಮಾ ರೀತಿಯಲ್ಲಿ ಚೇಸ್ ಮಾಡಿ ಮೀನುಗಾರರ ವಾಹನವನ್ನ ಮುಡುಬ ಚೌಡೇಶ್ವರಿ ದೇವಸ್ಥಾನದ ಬಳಿ ಅಡ್ಡಗಟ್ಟಿ ಮಾರಕಾಸ್ತಗಳಿಂದ ಹಲ್ಲೆ ನಡೆಸಿದ್ದನು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮೀನುಗಾರರಾದ ರವಿ, ಪ್ರಸಾದ್, ಜೀವಂತ್ ಮತ್ತು ಚೇತನ್ ಕೋಬ್ರಾ ಮತ್ತು ನಾಲ್ವರ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇನ್ನೇನು ಜಾಮೀನು ಪಡೆಯಬೇಕು ಮಾಳೂರು ಪಿಐ ನವೀನ್ ಕುಮಾರ್ ಮಠಪತಿಯ ನೇತೃತ್ವದಲ್ಲಿ ಪೊಲೀಸರ ತಂಡ ನಿಹಾಲ್ ಕೋಬ್ರಾ, ಸಾಜಿದ್, ಸಾಹುಲ್ ರನ್ನ ಬಂಧಿಸಿದ್ದಾರೆ. ಗಂಟೆಗೊಮ್ನೆ ಸ್ಥಳ ಬದಲಿಸುತ್ತಿದ್ದ ಕೋಬ್ರಾನನ್ನ ಶಿವಮೊಗ್ಗ ಜಿಲ್ಲಾ ರಕ್ಚಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಮಾರ್ಗದಲ್ಲಿ ನವೀನ್ ಕುಮಾರ್ ಮಠಪತಿ ಇನ್ಬೇನು ಜಾಮೀನು ಪಡೆಯಲು ಸಿದ್ದಗೊಂಡಿದ್ದ ನಿಹಾಲ್ ರನ್ನ ಭರ್ಜರಿ ಭೇಟೆಯಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಶಾಂತವೀರ, ಮಳೂರು ಪೊಲೀಸ್ ಇನ್ ಸ್ಪೆಕ್ಟರ್ ನವೀನ್ ಮಠಪತಿ ,ಆಗುಂಬೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಮಾಳೂರು ಠಾಣೆಯ ಸಿಬ್ವಂದಿಗಳು ಭಾಗಿಯಾಗಿದ್ದರು.
