ಸ್ಥಳೀಯ ಸುದ್ದಿಗಳು

ವೈದಿಕ ಭವನ ಲೋಕಾರ್ಪಣೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಬ್ರಾಹ್ನಣ ಕೇವಲ ಜಾತಿಯಲ್ಲ ಅದು ಸಂಸ್ಕಾರದ ಧರ್ಮ ಎಂದು ಮೈಸೂರಿನ ವಿದ್ವಾನ್ ಡಾ.ವಿ.ಭಾನುಪ್ರಕಾಶ್ ಶರ್ಮಾ ತಿಳಿಸಿದರು.

ಅವರು ಗಾಯತ್ರಿ ದೇವಸ್ಥಾನದ ಕೋರ್ಪಳಯ್ಯನ ಛತ್ರದ ಹತ್ತರದ ಇರುವ ವೈದಿಕ ಭವನ ಲೋಕಾರ್ಪಣ ಕಾರ್ಯಕ್ರಮದಲ್ಲಿ ಧಾರ್ಮಿಕ ನುಡಿಯಲ್ಲಿ ಮಾತನಾಡಿದರು.

ಶಂಕರಚಾರ್ಯ, ರಾಮಾನುಜಾಚಾರ್ಯ ಮತ್ತು ಮಾಧ್ವಾಚಾರರು ನಮ್ಮ ಕಣ್ಣುಗಳು ಇದ್ದಹಾಗೆ. ಭಕ್ತಿಪಂಕ್ತದಿಂದ ಧಾರ್ಮಿಕ ಭದ್ರಬುನಾದಿ ಹಾಕಿದ್ದಾರೆ.

ಅಶೋಕ್ ಹಾರನಹಳ್ಳಿ ಮಿಂಚಿನ ಸಙಚಲನ, ಬ್ರಾಹ್ಮಣ ಜಾತಿಯಲ್ಲ ಸಂಸ್ಕಾರದ ಧರ್ಮ ಅವರ ಆಡಳಿತದಲ್ಲಿ ಜಾಗೃತಿ ಮೂಡಲಿ ಎಂದು ಕೋರಿದರು.

ಶಾಲೆಯ ದಾಖಲೆ ಪತ್ರದಲ್ಲಿ ಬ್ರಾಹ್ಮಣರು ಎಂದು ಬರೆಯುತ್ತೇವೆ ಆದರೆ ಆಚರಣೆಯಲ್ಲಿ ಇಲ್ಲ. ಇಂದಿನ ಕಾರ್ಯಕ್ರಮಕ್ಕೆ ವಯಸ್ಸಾದವರು ಬಂದಿದ್ದೀರಿ ಯುವಕರು ಬಾರದೆ ಇರುವುದು ಬೇಸರವಾಗಿದೆ ಏಕೆಂದರೆ ಇಂದಿನ ಯುವಕರು ಮತ್ತು ಮಕ್ಕಳು ಈ ಕಾರ್ಯಕ್ರಮಕ್ಕೆ ಬಂದು ಸಂಸ್ಕಾರದ ಬಗ್ಗೆ ತಿಳಿದುಕೊಳ್ಳಬೇಕಿತ್ತು ಎಂದರು.

ಮಕ್ಕಳು ಹುಟ್ಟಿದಾಗ ನಡೆಯುವ ಕಾರ್ಯಗಳು ಇಂದು ನಶಿಸಿಹೋಗುತ್ತಿವೆ. ಉಪನಯನವೂ ಮರೆತುಹೋಗಿವೆ. ಸಂಸ್ಕಾರದ ಬಗ್ಗೆ ಶ್ರದ್ಧೆ ಇಲ್ಲವಾಗಿದೆ. ತಂದೆ ತಾಯಿ ಇದ್ದವರು, ಹೆಂಗಸರು ಸ್ಮಾಶನಕ್ಕೆ ಹೋಗಬಾರದು ಎಂಬ ನಿಯಮವಿದೆ.

ಅದೆಲ್ಲಾ ಸುಳ್ಳು ಯಾವಗ್ರಂಥದಲ್ಲಿ ಮಹಿಳೆಯರು ಸ್ಮಶಾನಕ್ಕೆ ಹೋಗಬಾರದು ಎಂದು ಬರೆದಿಲ್ಲ. ಹಾಗಾಗಿ ಧಾರ್ಮಿಕ ಆಚರಣೆ ಬಗ್ಗೆ ಜಾಗೃತಿಗೊಳಿಸಲು ನಾನು ತಂಡ ರಚಿಸಿದ್ದೇನೆ. ಸುಮಾರು ಜನರನ್ನ ಸೇರಿಸಿಕೊಂಡು ಜಾಗೃತಿ ಮಾಡಿಸಲಾಗುತ್ತಿದೆ ಎಂದರು.

ಗರುಡ ಪುರಾಣವನ್ನ ಸತ್ತವರ ಮನೆಯಲ್ಲಿ ಓದುವಂತೆ ಹೇಳಲಾಗುತ್ತದೆ. ಆದರೆ ಈ ತರಹದ ನಿಯಮಗಳಿಲ್ಲವೆಂದರು. ಮನೆಗಳಲ್ಲಿ ಕೇವಲ ಗ್ರಂಥಗಳನ್ನ ಇಟ್ಟುಕೊಳ್ಳಬೇಡಿ ಅದನ್ನ ಓದಿ ಅರ್ಥೈಸಿಕೊಳ್ಳಿ ಎಂದು ಕರೆ ನೀಡಿದರು.

ಸನಾತನ ಧರ್ಮ ಅಮೇರಿಕಾದಲ್ಲಿ ಬೆಳೆಯುತ್ತಿದೆ. ಅಲ್ಲಿ ಹೆಣ ಸುಡುವ‌ ಪದ್ಧತಿಯಿಲ್ಲ. ಆದರೆ ನನ್ನ ಶಿಷ್ಯನ ಹೋರಾಟದಿಂದ ನ್ಯಾಯಾಲಯದ ಮೂಲಕ ಐದು ರಾಜ್ಯದಲ್ಲಿ ಜಾಗ ಪಡೆದು ಈಗ ಸುಡುವ ಪದ್ಧತಿ ಆಚರಣೆ ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ ನಶಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ ಶ್ರಾದ್ಧಾ ಎಂದರೆ ಶ್ರದ್ಧೆ, ತಂದೆ ತಾಯಿಯನ್ನ ವೃದ್ಧಾಶ್ರಮಕ್ಕೆ ಕಳುಹಿಸಿ ಸತ್ತ ನಂತರ ಭಕ್ತಿಪೂರ್ವಕವಾಗಿ ಶ್ರಾದ್ಧಾ ನಡೆಸಿದರೆ ಏನೂ ಫಲವಿಲ್ಲ. ಇದ್ದಾಗ ಅವರನ್ನ ಚೆನ್ನಾಗಿ ನೋಡಿಕೊಳ್ಳಿ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button