ಬೀದಿಗಿಳಿದು ದೊಂಬಿ ಉಂಟುಮಾಡಿದವರನ್ನ ಎನ್ ಕೌಂಟರ್ ಮಾಡಿ-ಮುತಾಲಿಕ್

ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶಿವಮೊಗ್ಗದ ಕೂಡ್ಲಿ ಮಠದ ಸ್ವಾಮೀಜಿ ಅವರ ದರ್ಶನಕ್ಕಾಗಿ ಭೇಟಿ ನೀಡಿದರು.
ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ನೀಡಲು ಆಗಮಿಸಿದ್ದೇನೆ ಎಂದ ಮುತಾಲಿಕ್ಈ ಹಿಂದೆ ಸ್ವಾಮೀಜಿಯವರನ್ನು ಬೇರೆ ಬೇರೆ ಕಡೆಗಳಲ್ಲಿ ಭೇಟಿಯಾಗಿದ್ದೆ. ಆದರೆ ಮಠಕ್ಕೆ ಹೋಗಿರಲಿಲ್ಲ. ಮಠಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.
ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಮುತಾಲಿಕ್ ನೂಪುರ್ ಶರ್ಮಾ ಅವರ ವಿಷಯ ಕುರಿತು ದೇಶದಲ್ಲಿ ಗಲಭೆ ನಡೆಯುತ್ತಿದೆ.ಕಲ್ಲು, ಬಡಿಗೆ ಶಸ್ತ್ರಗಳಿಂದ ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ. ಇದು ತಾಲಿಬಾನ್, ಪಾಕಿಸ್ತಾನ ಅಲ್ಲ. ಇದು ಭಾರತ ಎಂದು ಎಚ್ಚರಿಸಿದರು.
ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿಭಟನೆ ಮಾಡಬಹುದು.ಒಮ್ಮೆಲೆ ಬೆಂಕಿ ಇಟ್ಟುಕೊಂಡು ಹೋಗುವಂತಹದ್ದು ಸರಿಯಲ್ಲ. ಕೇಂದ್ರ, ರಾಜ್ಯ ಸರಕಾರಗಳು ಇಂತಹ ಕಿಡಿಗೇಡಿ ಮುಸ್ಲಿಂರನ್ನು ಹದ್ದುಬಸ್ತಿನಲ್ಲಿ ಇಡಬೇಕು.ಹೀಗಾದರೆ ಕರ್ನಾಟಕದಲ್ಲಿ ಇವರ ಜೊತೆ ಮಾತುಕತೆ ಏನು ಮಾಡೋದು.ನೀವು ಪ್ರತಿಭಟನೆ ಮಾಡಿ, ಅದಕ್ಕೆ ಹಕ್ಕ ಇದೆ. ಆದರೆ ಕಲ್ಲು, ಬೆಂಕಿಯಿಂದಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುವಂತೆ ಸಲಹೆ ನೀಡಿದರು.
ಕಾನೊನು ಇದೆ, ನ್ಯಾಯಾಲಯ ಇದೆ. ಪೊಲೀಸ್ ಸ್ಟೇಷನ್ ಇದೆ. ಅದರ ಆಧಾರದ ಮೇಲೆ ಪ್ರತಿಭಟನೆ ಮಾಡಬೇಕು. ನೂಪುರ್ ಶರ್ಮಾ ಹೇಳಿಕೆಯನ್ನು ಇಸ್ಲಾಂ ಧರ್ಮದ ಸಾಕಷ್ಟು ಜನ ಹೇಳಿದ್ದಾರೆ. ಜಾಕೀರ್ ನಾಯಕ್ ಹೇಳಿದ್ದಾರೆ. ಆಗಾದರೆ ಜಾಕೀರ್ ನಾಯಕನನ್ನು ಗಲ್ಲಿಗೆ ಏರಿಸಬೇಕಿತ್ತು. ಜಾಕೀರ್ ನಾಯಕ್ ಗೆ ಕಲ್ಲೆಸೆಯಬೇಕಿತ್ತು. ಕೇಸ್ ಹಾಕಬೇಕಿತ್ತು.ಜಾಕೀರ್ ನಾಯಕ್ ನನ್ನು ನೀವು ಏಕೆ ಬಿಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಮುಸ್ಲಿಂರು ಅಂದ್ರೆ ಅವರು ಬೇಕಾದ್ದು ಮಾತನಾಡಬಹುದಾ. ಇದ್ದದ್ದನ್ನು ಹೇಳುವ ಪ್ರಕ್ರಿಯೆಯನ್ನು ನೂಪುರ್ ಶರ್ಮಾ ಮಾಡಿದ್ದಾರೆ. ನಮ್ಮ ಹಿಂದು ದೇವರು ದೇವರುಗಳಲ್ಲವಾ, ಮುಸ್ಲಿಂ ದೇವರು ಮಾತ್ರ ನಿಮ್ಮ ದೇವರಾ. ನಮ್ಮ ದೇವರುಗಳನ್ನು ಎಷ್ಟು ರೀತಿ ಅವಹೇಳನ ಮಾಡಿದ್ದಾರೆ ಗೊತ್ತಾ ಎಂದು ಗುಡುಗಿದರು.
ಅತ್ಯಂತ ಅಶ್ಲೀಲ, ಅಸಭ್ಯವಾಗಿ ಎಂ.ಎಫ್.ಹುಸೇನ್ ಹಿಂದೂ ದೇವತೆಯನ್ನ ಚಿತ್ರೀಕರಿಸಲಾಯಿತು. ಹಾಗಾದರೆ ನಾವುಗಳು ಆತನನ್ನು ಎಷ್ಟು ಸಲ ಗಲ್ಲಿಗೆ ಏರಿಸಬೇಕಿತ್ತು.ನಾವು ಕೇಸ್ ಹಾಕಿದ್ದೇವು, ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದೇವು. ಬೀದಿಯಲ್ಲಿ ಇಳಿದು ಈ ರೀತಿ ಹೋರಾಟ ಮಾಡಿದರೆ ಸರಕಾರ ಅಂತಹವರನ್ನು ಎನ್ ಕೌಂಟರ್ ಮಾಡಬೇಕು ಎಂದು ಕರೆ ನೀಡಿದರು.
ಬೀದರ್ ನ ಪೀರ್ ಪಾಷಾ ದರ್ಗಾ ಮೂಲ ಅನುಭವ ಮಂಟಪ ವಿಚಾರ.
ಬೀದರ್ ನ ಬಸವಕಲ್ಯಾಣದ ಅನುಭವ ಮಂಟಪ ಈಡಿ ಜಗತ್ತಿನಲ್ಲೇ ಮೊದಲ ಸಂಸತ್ತು ಎಂಬ ಖ್ಯಾತಿ ಇತ್ತು.ಅದು ಇಂದು ಪೀರ್ ಪಾಷಾ ಬಂಗ್ಲಾ ಆಗಿದೆ. ನಿಜಾಮರ ಕಾಲದಲ್ಲಿ ಅತಿಕ್ರಮಣ ಆಗಿದೆ.ಅದನ್ನು ತೆರವುಗೊಳಿಸಬೇಕು ಅಂತಾ ಸರಕಾರಕ್ಕೆ ವಿನಂತಿ ಮಾಡಲು ಇಂದು ಮಠಾಧೀಪತಿಗಳು ಸೇರಿದ್ದಾರೆ.
ಪೀರ್ ಪಾಷಾ ಬಂಗ್ಲಾ ಅಲ್ಲ ಅದು, ಅದು ಬಸವಣ್ಣನ ಅನುಭವ ಮಂಟಪ. ಅತ್ಯಂತ ಶ್ರೇಷ್ಠವಾದ, ಪವಿತ್ರವಾದ, ಭಕ್ತಿ ಭಾಂಧವ್ಯ ಇರುವಂತಹ ಮಂಟಪ. ಇದು ಕೇವಲ ಲಿಂಗಾಯ್ತರಿಗಷ್ಟೇ ಅಲ್ಲ. ಇಡೀ ಮನುಕುಲಕ್ಕೆ ಆದರ್ಶವಾದ ಅನುಭವ ಮಂಟಪವಾಗಿದೆ.
ಅನುಭವ ಮಂಟಪ ವಾಪಸ್ ಪಡೆಯಲು ಸರಕಾರ ಮಧ್ಯಸ್ಥಿಕೆ ವಹಿಸಬೇಕು. ಆ ಮಠಾಧೀಪತಿಗಳಿಗೆ ಸಂಪೂರ್ಣ ಬೆಂಬಲವನ್ನು ಹಿಂದು ಸಂಘಟನೆಗಳು ಕೊಡ್ತಿದ್ದೇವೆ.ಅದು ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ.
ಮುತಾಲಿಕ್ ಚುನಾವಣೆಗೆ ಸ್ಪರ್ಧಿಸುವ ವಿಚಾರ.
ರಾಜಕೀಯವಾಗಿ ಶ್ರೀರಾಮ ಸೇನೆ ಸಂಘಟನೆ ಬಾಗಿಲು ಹಾಕಿ ಬಿಟ್ಟಿದೆ. ಮುತಾಲಿಕ್ ಸ್ಪರ್ಧೆ ಮಾಡಲ್ಲ, ಶ್ರೀರಾಮ ಸೇನೆಯು ಸ್ಪರ್ಧೆ ಮಾಡಲ್ಲ.ರಾಜಕೀಯವಾಗಿ ನಾವು ದೂರ ಇದ್ದೀವಿ.ಇನ್ನು ಮುಂದೆ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
