ಅಧ್ಯಕ್ಷ ಕೆ.ವಿ.ಶಿವಕುಮಾರ್ ಮತ್ತು ಕೆ.ಈ ಕಾಂತೇಶ್ ರವರ ಜುಗಲ್ ಬಂಧಿ

ಸುದ್ದಿಲೈವ್.ಕಾಂ/ಶಿವಮೊಗ್ಗ
ಮೆಟ್ರೋದಲ್ಲಿ ಪತ್ರಕರ್ತರಿಗಾಗಿ ನಡೆದ ಆರೋಗ್ಯ ತಪಾಸಣ ಶಿಬಿರದ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ಮತ್ತು ಕಾಂತೇಶ್ ನಡುವೆ ಜುಗಲ್ ಬಂಧಿ ನಡೆದಿದೆ.
ಆರಂಭದಲ್ಲಿ ಪತ್ರಕರ್ತರಿಗೆ ಮತ್ತು ಅವರ ಕುಟುಂಬದಲ್ಲಿ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದರೆ ಶೇ.20 ರಷ್ಟು ರಿಯಾಯ್ತಿ ನೀಡಲಾಗುವುದು ಎಂದು ಮಾತು ಮುಗಿಸಿ ಕೆಲಸದ ನಿಮಿತ್ತ ವೇದಿಕೆಯಿಂದ ಹೊರಟು ಹೋದರು.
ಕೆಲಸದ ನಿಮಿತ್ತ ಹೋಗುತ್ತಿದ್ದ ಕಾಂತೇಶ್ ರನ್ನ ಪುನಃ ವಿನಂತಿಯ ಮೂಲಕ ಕರೆದು ಕೂರಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್ ನೀವು ಹೋದ ಮೇಲೆ ನಾನು ಬೇಡಿಕೆ ಇಟ್ಟರೆ ಸರಿಯಾಗುವುದಿಲ್ಲ.
ಹಾಗಾಗಿ ನಿಮ್ಮನ್ನ ಪುನಃ ವೇದಿಕೆ ಮೇಲೆ ಕರೆಯಿಸಲಾಗಿದೆ. ಈಗಾಗಲೇ ಎಲ್ಲಾ ಆಸ್ಪತ್ರೆಯಲ್ಲಿಪತ್ರಕರ್ತರಿಗೆ ಶೇ.20ರಷ್ಟು ರಿಯಾಯ್ತಿ ನೀಡಲಾಗುತ್ತಿದೆ. ಆದರೆ ನೀವು ಶೇ.50 ತಷ್ಟು ರಿಯಾಯ್ತಿ ನೀಡಿದ್ದಲ್ಲಿ ಪತ್ರಕರ್ತರಿಗೆ ಅನುಕೂಲವಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂತೇಶ್ ಜಾಣತನದಿಂದಲೇ ಉತ್ತರಿಸಿದರು. ಶೇ20 ರ ರಿಯಾಯ್ತಿಯಿಂದ ಆರಂಭವಾಗಲಿ ನಂತರ ನಾವು ಇದ್ದೇ ಇರುತ್ತೇವೆ ಮುಂದಿನ ದಿನಗಳಲ್ಲಿ ಎಷ್ಟು ಸಾಧ್ಯವಾಗುತ್ತೆ ಅಷ್ಟು ರಿಯಾಯ್ತಿ ನೀಡಲು ಪ್ರಯತ್ನಿಸೋಣವೆಂದು ಹೇಳಿದರು.
