ಸ್ಥಳೀಯ ಸುದ್ದಿಗಳು

ಬ್ರಾಹ್ಮಣ ಮಹಾಸಭ ಆರಂಭಗೊಂಡು 50 ವರ್ಷ ಕಳೆದಿದೆ ಒಂದು ಮೆಡಿಕಲ್ ಕಾಲೇಜು ಆರಂಭಿಸಲು ಆಗ್ಲಿಲ್ಲ-ಅಶೋಕ ಹಾರನಹಳ್ಳಿ ಬೇಸರ

IMG_20220611_191935

ಸುದ್ದಿಲೈವ್.ಕಾಂ/ಶಿವಮೊಗ್ಗ

ಬ್ರಾಹ್ಮಣರು ಒಂದಾಗೊಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ಏನೆಂದರೆ ಬ್ರಾಹ್ಮಣ ಮಹಾಸಮಾಜ ಸ್ಥಾಪನೆಗೊಂಡು 50 ವರ್ಷ ಕಳೆದರೂ ಬಾಲವ್ಯವಸ್ಥೆಯಲ್ಲಿದೆ ಅದೇ ಇತರೆ ಸಮಾಜದ ಸಂಘಟನೆಗಳು ಮೆಡಿಕಲ್ ಕಾಲೇಜು ಸ್ಥಾಪಿಸುವ ಹಂತಕ್ಕೆ ತಲುಪಿವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ  ಅಶೋಕ್ ಹಾರನಹಳ್ಳಿ ಬೇಸರ ವ್ಯಕ್ತಪಡಿಸಿದರು.

ಅವರು ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಬ್ರಾಹ್ಮಣ ಸಂಘಟನೆಯಿಂದ ಅಶೋಕ್ ಹಾರನಹಳ್ಳಿಯವರಿಗೆ ಅಭಿನಂದನೆಯನ್ನ ಸ್ವೀಕರಿಸಿ ಮಾತನಾಡಿದರು.

ಬ್ರಾಹ್ಮಣ ಸಂಘಟನೆ ಎಂಬುದರಲ್ಲಿ ಏನು ಮಾಡುದ್ರೂ ಕಷ್ಟದ ಕೆಲಸ, ಬ್ರಾಹ್ಮಣರು ಎಚ್ಚೆತ್ತುಕೊಳ್ಳಬೇಕು. ನಾವೊಬ್ವರೇ ಒಳ್ಳೆಯದಾಗಲಿ ಎಂದು ಬ್ರಾಹ್ಮಣರು ಹೇಳಿಕೊಟ್ಟವರಲ್ಲ. ನಾವು ಜಾತ್ಯಾತೀತರು.

ಸಾಧನೆ ಮಾಡಿದವರು ಬ್ರಾಹ್ಮಣರು ಎಂದು ಹೇಳಿಕೊಳ್ಳಲು ಹಿಂಜರಿತಿದ್ದಾರೆ. ಜಾತಿ ಆಧಾರದ ಮೇಲೆ ವಿಂಘಟನೆ ಆಗಿದೆ. ಜಿಲ್ಲಾ ವಾರು ಜಾಹಿರಾತು ನೀಡುವ ವಿಷಯದಲ್ಲೂ ಮೀಸಲಾತಿ ಇದೆ. ಬ್ರಾಹ್ಮಣರ ಪತ್ರಿಕೆಗಳು ನಡೆಸಲು ಆಗದೆ ಮುಚ್ಚಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿ ಆಧಾರದ ಮೇಲೆ ಅಭಿವೃದ್ದಿ ಮಂಡಳಿಯೇ ಮಾರಕ  ಎಂಬ ಆಪಾದನೆ ಇದೆ.ಬ್ರಾಹ್ಮರಿಗೆ ಮೀಸಲಾತಿ ಬೇಡ. ಆರ್ಥಿಕವಾಗಿ ದುರ್ಬಲರಿಗೆ 10% ಮೀಸಲಾತಿ ಕೊಡಬೇಕಿದೆ. ಕೇಂದ್ರ ಸರ್ಕಾರದ ಈ ಮೀಸಲಾತಿ ರಾಜ್ಯದಲ್ಲಿ ಜಾರಿಯಾಗುವುದಿಲ್ಲ ಯಾಕೆ? ರಾಜ್ಯಕ್ಕೆ ಇಚ್ಛಾಶಕ್ತಿಗಳಿಲ್ಲ ಎಂದು ದೂರಿದರು.

ಶಿಕ್ಷಣ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಈ ಶೇಕಡ 10% ಮೀಸಲಾತಿ ನೀಡಲಿ.ಈ ಹಿನ್ಬಲೆಯಲ್ಲಿ ಮಹಾಸಭಾ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದೆ‌. ನಮಗೆ ಒಬ್ಬರಗೆ ಅಲ್ಲ ಯಾರು ಹಿಂದುಳಿದಿದ್ದಾರೆ ಅವರೆಲ್ಲರಿಗೂ ಕೊಡಿ ಎಂಬುದು ನಮ್ಮ ನಿಲುವು ಎಂದರು.

ಸಂವಿಧಾನದಲ್ಲಿ ಅವಕಾಶವಿದ್ದರೂ ಬ್ರಾಹ್ಮಣರಿಗೆ ಆ ಅವಕಾಶ ಸಿಕ್ತಾ ಇಲ್ಲ. ನಮ್ಮ ಪಂಗಡದಲ್ಲಿ ಇರುವವರಿಗೆ ಸಹಾಯ ಮಾಡುವುದು ನಮ್ಮ ಜವಬ್ದಾರಿ ಇದೆ. ಗ್ರಾಮೀಣ ಭಾಗದಲ್ಲಿ ಬ್ರಾಹ್ಮಣರಕಷ್ಟ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲವೆಂದು ನೂನ್ಯತೆಗಳ ಪಟ್ಟಿಯನ್ನೇ ವಿವರಿಸಿದರು.

ಬ್ರಾಹ್ಮಣರ ಮಕ್ಕಳು ವಿದೇಶದಲ್ಲಿರುತ್ತಾರೆ. ಅವರ ವೃದ್ಧ ತಂದೆ ತಾಯಿಗಳು ಹಳ್ಳಿಯಲ್ಲಿರುತ್ತಾರೆ. ಅವರನ್ನ ನೋಡಿಕೊಳ್ಳುವವರಿಲ್ಲ. ಮದುವೆಯ ಸಮಸ್ಯೆವಿವಾಹ ವಿಚ್ಛೇದನ ಹೀಗೆ ಸಾಲುಗಟ್ಟಲೆ ಸಮಸ್ಯೆಯ ಮಹಾಪೂರಗಳಿವೆ. ಹಾಗಾಗಿ ಈ ಸಮಸ್ಯೆ ನೀಗಿಸಲು ಕೌನ್ಸಿಲಿಂಗ್ ಸೆಂಟರ್ ತೆರೆಯಲು ಮಹಾಸಭಾ ನಿರ್ಧರಿಸಿದೆ.  ನನ್ನ ಮೇಲೆ ಆರೋಪವಿದೆ. ಚುನಾವಣೆಯಲ್ಲೂ ಈ ಆರೋಪ ಕೇಳಿ ಬಂದಿತ್ತು. ನಾನು ಕೈಗೆ ಸಿಕೊಲ್ಲವೆಂಬ ಆರೋಪವಿದೆ. ಈಗ ಸಂಪೂರ್ಣವಾಗಿ ಸಂಘಟನೆಗೆ ನಾನು ತೊಡಗಿಸಿಕೊಂಡಿರುವೆ ಎಂದು ತಿಳಿಸಿದರು.

ಬ್ರಾಹ್ಮಣ ಮಹಾಸಭಾ ಕೇವಲ ಬೆಂಗಳೂರಿಗೆ ಸೀಮಿತವಗಿರದೆ ಪ್ರತಿ ತಾಲೂಕು ಮತ್ತು ಜಿಲ್ಲೆಗೆ ವಿಸ್ತರಿಸಲು ಪ್ರತಿನಿಧಿಗಳನ್ನ ಆರಿಸುತ್ತಿರುವೆ. ಬೆಂಗಳೂರಿನಲ್ಲಿ ಕೈಗಾರಿಕೆಗಳನ್ನ ಒಂದು ಗೂಡಿಸುವ ಕೆಲಸಮಾಡುತ್ತಿರುವೆ. ಬ್ರಾಹ್ಮಣರ ಕೈಗಾರಿಕೆಗಳ ಸಮುದಾಯದ ಜನರಿಗೆ ಸಹಾಯ ಮಾಡಲು ಮಹಾಸಭ ನಿರ್ಧರಿಸಿದೆ ಎಂದರು.

ಸಾಂಸ್ಕೃತಿಕ ಸಮಿತಿ ರಚನೆಗೆ ಮುಂದಾಗಿದ್ದೇವೆ. ಸ್ಟ್ಯೂಡೆಂಟ್ ಕೌನ್ಸಿಂಗ್ ನ್ನ ಆನ್ ಲೈನ್ ಮಾಡಲಾಗುತ್ತಿದೆ. ವಿದ್ಯಾನಿಧಿ ಆರಂಭಿಸಲಾಗುತ್ತಿದೆ.ಸ್ಕಾಲರ್ ಶಿಫ್ ಮತ್ತು ಪ್ರೀ ಶಿಪ್ ಆರಂಭಿಸಲಾಗುತ್ತಿದೆ ಇದರಲ್ಲಿ ಎರಡು ಕೋಟಿ ಹಣ ಸಂಗ್ರಹಿಸಲಾಗುತ್ತಿದೆ. ಶಿಕ್ಷಣದಿಂದ ವಂಚಿತರಾಗದಂತೆ ವಿದ್ಯಾನಿಧಿ ಅನುಕೂಲವಾಗಲಿದೆ ಎಂದರು.

ಪುರೋಹಿತರ ಕ್ಷೇಮಾಭಿವೃದ್ಧಿ, ಸನಾತನ ಅಭಿವೃದ್ಧಿ ಮಾಡಲಾಗುತ್ತಿದೆ. ಹಿಂದೂಗಳನ್ನ ರಕ್ಷಣೆ ಮಾಡಿಕೊಳ್ಳುವುದೇ ಕಷ್ಟ ಇದೆ. ಅಂತಹದ್ದರಲ್ಲಿ ನಾನು‌ ಮಾಧ್ವ, ನೀನು ಸ್ಮಾರ್ಥ ಎಂಬ ಕಚ್ಚಾಟವನ್ನ ಬಿಡಬೇಕು. ಬ್ರಾಹ್ಮಣರನ್ನ ಕೊಲ್ಲಬೇಕೆಂದು ತಮಿಳುನಾಡಿನಲ್ಲಿ ಕರೆ ನೀಡಲಾಗಿದೆ. ಹಾಗಾಗಿ ಬ್ರಾಹ್ಮಣರ ಒಳಪಂಗಡದವರು ಕಚ್ಚಾಡಬಾರದು ಎಂದು ಕಿವಿ ಮಾತೇಳಿದರು.

1972 ರಲ್ಲಿ ಮಹಾಸಭೆ 50 ವರ್ಷ ಮುಗಿಸಿದೆ.‌ಆದರೆ ಇತರೆ ಸಂಘಟನೆಗಳು ಮೆಡಿಕಲ್ ಕಾಲೇಜನ್ನ ಆರಂಭಿಸುತ್ತಿದ್ದಾರೆ. ಬೇಸ್ ಸಂಸ್ಥೆಯಲ್ಲಿ ಸಿಇಟಿ ನೀಟ್ ಓದುವರಿಗೆ ಶೇ.50 ರಷ್ಟು ಕಡಿಮೆ ನೀಡಲು ಮುಂದು ಬಂದಿವೆ. ಇದರ ಅನಕೂಲ ಪಡೆಯಲು ಕರೆ ನೀಡಿದರು.

ಇದೇವೇಳೆ ಬ್ರಾಹ್ಮಣರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ನಡೆಸಿದ ಗೋಪಾಲ ಎಡಗೆರೆ,ವಸಂತ್,ಅಮೃತ್ ನೋನಿ ಶ್ರೀನಿವಾಸ,ಎನ್ ಇ ಎಸ್ ನ ನಾರಾಯಣ್ ರಾವ್, ಮೊದಲಾದವರನ್ನ ಸನ್ಮಾನಿಸಲಾಯಿತು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button