ಸ್ಮಾರ್ಟ್ ಸಿಟಿ ಇನ್ಫ್ರಾ ಡೆವಲಪರ್ಸ್ ವಿರುದ್ಧ ಎಫ್ಐಆರ್!

ಸುದ್ದಿಲೈವ್. ಕಾಂ/ಶಿವಮೊಗ್ಗ
ಪುರಲೆ ಕೆರೆಯ ಏರಿಯಾಕ್ಕೆ ನಿರ್ಮಿಸಿರುವ ಕ್ರ್ಯಾಶ್ ಬ್ಯಾರಿಯರನ್ನ ಅನಧಿಕೃತವಾಗಿ ತೆಗೆದು ಹಾಕಿರುವ ಖಾಸಗಿ ಲೇಔಟ್ ನ ವಿರುದ್ಧ ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಶಿವಮೊಗ್ಗದ ಪುರಲೆಯ ಸರ್ವೆ ನಂಬರ್ 80 ರಲ್ಲಿ ಖಾಸಗಿ ಲೇಔಟ್ ಮಾಡುತ್ತಿರುವ ಸ್ಮಾರ್ಟ್ ಸಿಟಿ ಇನ್ಫ್ರಾ ಡೆವೆಲಪರ್ ಅಪಘಾತ ಸಂಭವಿಸಿದರೆ ಹೊಲಗದ್ದೆಗಳಿಗೆ ಬೀಳದಂತೆ ನಿರ್ಮಿಸಿರುವ ಕ್ರ್ಯಾಶ್ ಬ್ಯಾರಿಯನ್ನ ತೆಗೆದು ಹಾಕಿದೆ. ಆದರೆ ಖಾಸಗಿ ಲೇಔಟ್ ಡೆವೆಲಪರ್ ರವರು ಆ ಕ್ರ್ಯಾಶ್ ಬ್ಯಾರಿಯರನ್ನ ಇಲಾಖೆಯ ಪೂರ್ವಾನುಮತಿ ಪಡೆಯದೆ ತೆಗೆದು ಹಾಕಿದ್ದಾರೆ ಎಂದು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಎನ್ ಹೆಚ್ ಹಲವು ಬಾರಿ ಸವಳಂಗ ರಸ್ತೆಯಲ್ಲಿರುವ ಖಾಸಗಿ ಡೆವೆಲಪರ್ಸ್ ಗೆ ಹಲವಾರು ಬಾರಿ ನೋಟೀಸ್ ನೀಡಲಾಗಿದೆ. 50 ಮೀಟರ್ ಉದ್ದ ಕ್ರ್ಯಾಶ್ ಬ್ಯಾರಿಯರ್ ನ್ನ ತೆಗೆದು 1,90,000/- ರೂ. ಹಣ ಲುಕ್ಸಾನ್ ಮಾಡಿರುವುದಾಗಿ ನೋಟೀಸ್ ನೀಡಿ ಕ್ರ್ಯಾಶ್ ಬ್ಯಾರಿಯರ್ ಪುನರ್ ನಿರ್ಮಿಸಿಕೊಡಿ ಎಂದು ಎನ್ ಹೆಚ್ ಸೂಚಿಸಿದರೂ ಡೆವೆಲಪರ್ ಯಾವುದನ್ನೂ ತಲೆಕೆಡೆಸಿಕೊಂಡಿರಲಿಲ್ಲ.
ಅಲ್ಲದೆ ಇಲ್ಲಿನ ರೈತರು ಹಲವಾರು ಬಾರಿ ಕ್ರ್ಯಾಶ್ ಬ್ಯಾರಿಯರ್ ನ್ನ ನಿರ್ಮಿಸಿಕೊಡಿ ಇಲ್ಲಿ ಅಪಘಾತಗಳು ಹೆಚ್ಚಾಗುತ್ತವೆ ಎಂದು ಮನವಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಎನ್ ಹೆಚ್ ನ ಎಇಇ ನಿನ್ನೆ ಗ್ರಾಮಾಂತರ ಠಾಣೆಯಲ್ಲಿ ಖಾಸಗಿ ಡೆವಲಪರ್ ನ ವಿರುದ್ಧ ಎಫ್ಐಆರ್ ದಾಖಲಾಗಿದೆ.
