ರಾಜಕೀಯ

ಕಾಲಕಾಲಕ್ಕೆ ಪಠ್ಯಪುಸ್ತಕ ಪರಿಷ್ಕರಣೆ ಅಗತ್ಯ-ಕೋಟ ಶ್ರೀನಿವಾಸ ಪೂಜಾರಿ

ಸುದ್ದಿಲೈವ್. ಕಾಂ/ಶಿವಮೊಗ್ಗ

ಇಂದು ಸುವರ್ಣ ಸಂಸ್ಕೃತಿ ಭವನದಲ್ಲಿ ರಾಷ್ಟ್ರೋತ್ಥಾನ ಬಳಗದಿಂದ ಪಠ್ಯ ಪುಸ್ತಕ ಪರಿಷ್ಕರಣೆ-ಸತ್ಯ-ಮಿಥ್ಯ ಎಂಬ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪ್ರೊಬಾರಿ ಮಾತನಾಡಿ, ಯಾವುದೇ ಬದಲಾವಣೆಗಳನ್ನ ಆರಂಭದಲ್ಲಿ ಸ್ವೀಕರಿಸಲು ಮನುಷ್ಯನಿಗೆ ಸಾಧ್ಯವಿಲ್ಲ. ಹಾಗಾಗಿ ವಿರೋಧಿಸುವುದು ಮನುಷ್ಯನ ಸಹಜ ಗುಣವೆಂದು ತಿಳಿಸಿದರು.

ಶಿಕ್ಷಣ ಕುರಿತು ಮೆಕಾಲೆ 1834 ಅದುನಿಕ ಶಿಕ್ಷಣವನ್ನ ಜಾರಿಗೆ ತಂದರು. 19 ನೇ ಶತಮಾನದ ಶಿಕ್ಷಣ 21 ಶತಮಾನದಲ್ಲಿ ಮುಂದುವರೆದಿದೆ. ಬ್ರಿಟೀಶ್ ಸಾಮ್ರಾಜ್ಯವನ್ನ ನಡೆಸಲು ಬೇಕಾಗಿದ್ದ ಗುಮಾಸ್ತರ ಅರ್ಹತೆಯನ್ನ ಭಾರತೀಯರಿಗೆ ನೀಡಲು ಈ ಶಿಕ್ಷಣದ ಮೂಲಕ ಪ್ರಯತ್ನಿಸಲಾಯಿತು. ಹಾಗಾಗಿ ಇಂಗ್ಲೀಷ್ ಮಾಡ್ರನ್ ಎಜುಕೇಷನ್ ನ್ನ ಮಕಾಲೆ ಭಾರತದಲ್ಲಿ ಜಾರಿಗೆಗೊಳಿಸುತ್ತಾರೆ ಎಂದರು.

ಗುಮಾಸ್ತರ ಕೆಲಸ ಮಾಡುವ ಶಿಕ್ಷಣವು ಮಕಾಲೆ ನಿರ್ಮಿಸಿದ ಶಿಕ್ಷಣದಿಂದ ಹೊರಬರಲು ಭಾರತೀಯ ಶಿಕ್ಷಣ ಪ್ರಯತ್ನಿಸಲೇ ಇಲ್ಲ. ಅನೇಕ ಆಯೋಗಗಳು ಶಿಕ್ಷಣ ಬದಲಾವಣೆ ತರಲು ಸಾಧ್ಯವಗಲಿಲ್ಲವೆಂದರು.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ

48 ಸಾವಿರ ಪ್ರಾಥಮಿಕ ಮತ್ತು ಪ್ರೌಢ ಶಾಲೆ ರಾಜ್ಯದಲ್ಲಿವೆ. 1ಲಕ್ಷಕ್ಕೂ ಹೆಚ್ಚು ಮಕ್ಕಳು ಬಿಸಿಯೂಟಮಾಡುತ್ತದೆ. ಶೇ. ೨೦ ರಷ್ಟು ಹಣ ಶಿಕ್ಷಣಕ್ಕೆ ವಿನಿಯೋಗ ಮಾಡಲಾಗುತ್ತಿದೆ. ಕಾಲಕಾಲಕ್ಕೆ ಸರ್ಕಾರಗಳು ಶಿಕ್ಷಣವನ್ನ ಬದಲಾತಿಸಿದ್ದಾರೆ. 15-16 ಸಾಲಿನಲ್ಲಿ ಬರಗೂರು ರಾಮಚಂದ್ರ ಸಮಿತಿ ರಚನೆಯಾದರೆ 2022-23 ಕ್ಕೆ ರೋಹಿತ್ ಚಕ್ರತೀರ್ಥರನ್ನ ಪರಿಷ್ಕರಣೆ ಸಮಿತಿ ರಚನೆಗೆ ತರಲಾಗಿದೆ. ರೋಹಿತ್ ಚಕ್ರ ತೀರ್ಥರ ಸಮಿತಿ ಪರಿಷ್ಕರಣೆಯನ್ನ ಟೀಕಿಸಲಾಗುತ್ತಿದೆ. ಟೀಕೆ ಮಾಡುವರು ಸತ್ಯಕ್ಕೆ ಅಪಚಾರವಾಗದಂತೆ ಟೀಕಿಸಬೇಕಾಗಿತ್ತು. ವೈಯುಕ್ತಿಕ ಟೀಕೆ ಮಾಡಲಾಗುತ್ತದೆ ಎಂದರು.

ನಾಯಾಯಣಗುರುಗಳ ಪಠ್ಯ ಪುಸ್ತಕದಿಂದ ತೆಗೆಯಲಾಗಿದೆ ಎಂದು ಕೇಳಿಬಂದವು, ನಾರಾಯಣ ಗುರುಗಳ ಬಗ್ಗೆ ಜಾತಿ ಮೀರಿ ಗೌರವ ನೀಡಲಾಗುತ್ತಿದೆ. ಅಮಾನವೀಯತೆಯನ್ನ ವಿರೋಧಿಸಿ ಚಳುವಳಿ ಮಾಡಿದ್ದ ಧೀಮಂತ ಗುರುಗಳು ಅವರು. ಅವರು ಹುಟ್ಟಿ ಬೆಳೆದ ಊರಾದ ಶಿವಗಿರಿಯನ್ನ ಕೇರಳ ಸರ್ಕಾರ ಕಬ್ಜಾ ಮಾಡಿಕೊಂಡಿತ್ತು. ನಾರಾಯಣಗುರು ಬೆಂಬಲಿಗರನ್ನ ಬೀದಿಗೆ ತಳ್ಳಲಾಯಿತು. ಆಗ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

ಆದರೆ ವಿಚಾರಣೆ ನಡೆಸಿದ ಕೋರ್ಟ್ ನಾರಯಾಣ ಗುರು ಅಭಿವೃದ್ಧಿ ಮಂಡಳಿಗೆ ಶಿವಗಿರಿಯ ಭೂಮಿಯನ್ನ ವಾಪಾಸ್ ನೀಡುತ್ತದೆ. ಇತ್ತೀಚೆಗೆ ಮೋದಿ ನಾರಾಯಣ ಗುರು ಹುಟ್ಟಿದ ಶಿವಗಿರಿ ಊರನ್ನ ಭೇಟಿಯಾಗಿ ಅದರ ಅಭಿವೃದ್ಧಿಗೆ 70 ಕೋಟಿ ರೂ. ನೀಡದರು. ಸಾರಾಯಣಗುರು ಅಭಿವೃದ್ಧಿ ಮಂಡಳಿಗೆ 70 ಕೋಟಿ ಕೊಟ್ಟ ಸರ್ಕಾರ ಪಠ್ಯಪುಸ್ತಕದಿಂದ ಅವರನ್ನ ಹೊರ ತೆಗೆಯಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.

ಹೆಗಡೇವಾರ್  ಭಾಷಣವನ್ನ ಪಠ್ಯದಲ್ಲಿ ಸೇರಿಸಲಾಯಿತು. ಯಾಕೆ ಸೇರಿಸಿದರು ಎಂದು ಆರೋಪಿಸಲಾಯಿತು. ವಂದೇ ಮಾತರಂ ಅಭಿಯಾನ ಮಾಡಿದ ಹೆಗಡೇವಾರ್ ಅವರು ಆಗಿನ ಬ್ರಿಟಿಶ್ ಅಧಿಕಾರಿಯನ್ನ ಚಿಕ್ಕಂದಿನಲ್ಲೇ ಎದುರಿಸಿದ ಕೀರ್ತಿ ಅವರಲ್ಲಿದೆ. ಹಾಗಾಗಿ ಪಠ್ಯ ಪುಸ್ತಕದಲ್ಲಿ ಸೇರಿಸಲಾಗುತ್ತದೆ.

ತಾಯಿಯ ಎದೆಹಾಲು ಕುಡಿದರೆ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಎಂದು ಸವಾಲೆಸೆದವರದ್ದು ಯಾವ ಶಿಕ್ಷಣ ಹಾಗಾದರೆ ಎಂದು ಪ್ರಶ್ನಿಸಿದರು. ಸತ್ಯಾನ್ವೇಷಣೆ ಮಾಡಬೇಕು. ವೈಚಾರಿಕತೆಯನ್ನ ಸ್ವೀಕರಿಸಬೇಕು. ಹಾಗಾಗಿ ಪಠ್ಯ ಪುಸ್ತಕದ ಪರಿಷ್ಕರಣೆ ಮಾಡಲಾಗಿದೆ ಎಂದರು.

ದೇವನೂರು ಮಾಹದೇವರವರು ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದಿಗೂ ಫಲಕೊಡದೆ ಇರದು. ನಮ್ಮ ಪಠ್ಯ ಪುಸ್ತಕದಲ್ಲಿ ದೇಶಭಕ್ತಿಯ ಕಿಚ್ಚುಹಚ್ಚುವ ಶಿಕ್ಷಣ ನೀಡಬೇಕಿದೆ. ಮುಂದಿನ ದಿನ ಮಕ್ಕಳು ನಮ್ಮ ದೇಶವೆಂದು ಹೇಳಲು ಶಿಕ್ಷಣದ ತಿದ್ದುಪಡಿಯ ಅವಶ್ಯಕತೆ ಇದೆ ಎಂದರು.

ವಿವೇಕ ಸುಬ್ಬರೆಡ್ಡಿ ಮಾತು

ಬಿಜೆಪಿಯ ಮತ್ತೋರ್ವ ನಾಯಕ ವಿವೇಕ ಸುಬ್ಬಾ ರೆಡ್ಡಿ ಮಾತನಾಡಿ ಗಾಂಧಿಯನ್ನ ಕೊಂದವರು ನಾಥೂರಾಮ್ ಗೋಡ್ಸೆ ಇರಬಹುದು ಆದರೆ ಅವರ ವೈಚಾರಕತೆಯನ್ನ ಕೊಂದವರು ಹಲವರು ಎಂದರು.

1857 ರಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಕುಮಾರ ಸಿಂಹ ಎಂಬ ರಾಜನಿದ್ದ ಆತನ ಬಗ್ಗೆ ಪಠ್ಯದಲ್ಲಿ ಮಾಹಿತಿ ಇಲ್ಲ. ಜಂಗಲ್ ವಾರ್ ನಲ್ಲಿ ಅನೇಕ ಬ್ರಿಟೀಶರನ್ನ ಕಾಡಿದ ರಾಜನ ಬಗ್ಗೆ ಇತಿಹಾಸಕಾರರು ಬರೆಯಲಿಲ್ಲ.ಸಾವರ್ಕಾರ್ ವಿರುದ್ಧ ಮಾತನಾಡುವರಿಗೆ ಯೋಗ್ಯತೆ ಇಲ್ಲ. ನಮ್ಮ ವೀರರಿಗೆ ನಾವೇ ಅಪಮಾನ ಮಾಡ್ತಾ ಇದ್ದೀವಿ ಎಂದರು.

ಸಂವಾದ

ನಂತರ ಸಂವಾದ ನಡೆಯಿತು. ಸಂವಾದದಲ್ಲಿ ಪ್ರಶ್ನೋತ್ತರ ಕೇಳಲಾಯಿತು. ಪ್ರಶ್ನೋತ್ತರದಲ್ಲಿ ಅಂಬೇಡ್ಕರ್ ರವರನ್ನ ಸಂವಿಧಾನ ಶಿಲ್ಪಿ ಎಂದು ಉಲ್ಲೇಖಿಸಲಿಲ್ಲ. ಎಂಬ ಪ್ರಶ್ನೆಯನ್ನ ಕೇಳಲಾಯಿತು. ಇದಕ್ಕೆ ಉತ್ತರಿಸಿದ ವಿವೇಕಾ ಸುಬ್ಬಾ ರೆಡ್ಡಿ ಅಂಬೇಡ್ಕರ್ ರವರು ಸಂವಿಧಾನ ಶಿಲ್ಪಿ ಎಂಬುದನ್ನ ಕೈಬಿಡಲಾಗಿದೆ ಎಂಬ ಆರೋಪವಿದೆ. ಅದು ಟೈಪೋ ಎರರ್. ಇದನ್ನ ಪರಿಷ್ಕರಿಸಲಾಗುತ್ತಿದೆ. ಪಠ್ಯದಲ್ಲಿ ಸೇರಿಸಲಾಗುತ್ತದೆ.

ನಂತ ಪೆರಿಯಾರ್ ಅವರನ್ನ ಕೈಬಿಡಲಾಗಿದೆ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ವಿವೇಕ ಸುಬ್ಬ ರೆಡ್ಡಿ ರಾಮನನ್ನ ಬಿಟ್ಟು ರಾವಣನನ್ನ ಪೂಜಿಸಿ ಎಂದು ಕರೆನೀಡಿದ್ದರು. ತಲೆ ತಲೆಮಾರಿನಿಂದ ರಾಮನನ್ನ ಪೂಜಿಸಿಕೊಂಡು ಬಂದ ನಾಡು ಪೆರಿಯಾರ ಅವರ ದೃಷ್ಠಿಕೋನದಲ್ಲಿ ನೋಡಲು ಹೇಗೆ ಸಾಧ್ಯ. ಹಾಗಾಗಿ ಅವರನ್ನ ಪಠ್ಯದಿಂದ ಕೈಬಿಡಲಾಗಿದೆ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button