ಸಿದ್ದರಾಮಯ್ಯ ದೇಶದ್ರೋಹಿ-ಈಶ್ವರಪ್ಪ

ಸುದ್ದಿಲೈವ್. ಕಾಂ/ಶಿವಮೊಗ್ಗ
ಸಿದ್ದರಾಮಯ್ಯ ದೇಶದ್ರೋಹಿ ಎಂದು ಮಾಜಿ ಸಚಿವ ಈಶ್ವರಪ್ಪ ನೇರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಜಾಬ್, ಹಲಾಲ್ ಸಂಘರ್ಷದಲ್ಲಿ ಕೋರ್ಟ್ ಗೆ 6 ಜನ ವಿದ್ಯಾರ್ಥಿನಿಯರ ಕರೆದು ಬುದ್ದಿಹೇಳಿದ್ದರೆ ಅತಿರೇಕವಾಗುತ್ತಿರಲಿಲ್ಲ. ನ್ಯಾಯಾಲಯದ ಆದೇಶ ಬಂದಾಗಲೂ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಲು ಕರೆ ನೀಡಬಹುದಿತ್ತು. ಆದರೆ ಆರೀತಿ ಸಿದ್ದರಾಮಯ್ಯ ನಡೆದುಕೊಳ್ಳಲಿಲ್ಲ. ಹಾಗಾಗಿ ದೇಶ್ರೋಹಿಗಳಾಗಿದ್ದಾರೆ ಎಂದು ಆರೋಪಿಸಿದರು.
ಗೋಹತ್ಯೆ ಮಾಡಿದವರಿಗೆ ಬೆಂಬಲಿಸಿ ಗೋರಕ್ಷಕರನ್ನ ಜೈಲಿಗೆ ಕಳುಹಿಸಿದರು. ಈ ರೀತಿಯ ಸೇಡಿನ ರಾಜಕಾರಣಕ್ಕೆ ಸಿದ್ದರಾಮಯ್ಯ ಮಾಡಿದ್ದು ಅವರ ಮೇಲಿನ ನಂಬಿಕೆಯೇ ಕಡಿಮೆ ಆಗಿದೆ. ಹೋಗಲಿ ಯಾವ ಮುಸ್ಲೀಂರನ್ನದರೂ ಬೆಳೆಸಿದರಾ ಅದೂ ಮಾಡಲಿಲ್ಲ.
ದಲಿತರು, ಅಲ್ಪಸಂಖ್ಯಾತರು ಇನ್ಮುಂದೆ ಸಿದ್ದರಾಮಯ್ಯ ಮತ್ತು ಡಿಕೆಶಿಯನ್ನ ಬೆಂಬಲಿಸದಂತೆ ತೀರ್ಮಾನಿಸಿದ್ದಾರೆ ಎಂದರು. ಯಾರು ಬಿಜೆಪಿಗೆ ಬರ್ತರೋ ಬರಲಿ. ಆದರೆ 108 ಅಥವಾ 110 ಸ್ಥಾನ ಬಂದರೆ ಮತ್ತೆ ಬಿಜೆಪಿ ಬೇರೆಯವರನ್ನ ಕರೆದುಕೊಂಡು ಬರೋದೋ ಅಥವಾ ಬೆಂಬಲ ಕೇಳೋದು ಸಹಜವಾಗುತ್ತದೆ. ಹಾಗಾಗಿ ಪೂರ್ಣ ಬಹುಮತ ಬಿಜೆಪಿ ಬಂದರೆ ಸದೃಢ ಆಡಳಿತ ನಡೆಸಲು ಅವಕಾಶ ನೀಡಬೇಕು ಎಂದರು.
17 ಜನರನ್ನ ಕರೆದುಕೊಂಡು ಬಂದ ಬಿಜೆಪಿ ಅವರಿಗೆ ನೀಡಿದ ಮಾತಿನಂತೆ ನಡೆದುಕೊಂಡಿದೆ ಎಂದರು. ಸಿದ್ದರಾಮಯ್ಯ ದೇಶದ್ರೋಹಿ, ಗೋಹತ್ಯೆ ಮಾಡಿದವರಿಗೆ ಬೆಂಬಲಿಸಿ ಓವೈಸಿಯ ವಿಚಾರನ್ನ ಬೆಂಬಲಿಸಿದರು. ಹಾಗಾಗಿ ದೇಶದ್ರೋಹಿ ಎಂದು ಹೇಳಿದರು.
